SUDDIKSHANA KANNADA NEWS/ DAVANAGERE/ DATE:09-02-2025
ದಾವಣಗೆರೆ: ಭ್ರಷ್ಟಾಚಾರ ರಹಿತ ಮತ್ತು ಸ್ವಾಭಿಮಾನಿಯುತ ಆಡಳಿತಕ್ಕಾಗಿ ಗಂಧದನಾಡಿನಲ್ಲಿ ಶಾಸಕ ಬಸನಗೌಡ ಪಾಟೇಲ್ ಯಾತ್ನಳ್ ರಂತವರು ಮುಖ್ಯಮಂತ್ರಿಯಾಗಲು ನಾಡಿನ ಜನತೆ ಕಾತುರದಿಂದ ಕಾಯುತ್ತಿದ್ದಾರೆಂದು
ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಆಶಯ ವ್ಯಕ್ತಪಡಿಸಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಯತ್ನಾಳ್ ಅವರನ್ನ ಸನ್ಮಾನಿಸಿ ಮಾತನಾಡಿ, ರಾಜ್ಯದಲ್ಲಿ ಮುಲಾಜಿಲ್ಲದೆ ನಿರ್ಧಾರ ತೆಗೆದುಕೊಳ್ಳುವಂತಹ ಪ್ರಧಾನಿ ನರೇಂದ್ರ ಮೋದಿ, ಯುಪಿ ಮುಖ್ಯಮಂತ್ರಿ ಯೋಗಿಯಂತಿರುವ ರಾಜ್ಯದ ಫೈರ್ ಬ್ರಾಂಡ್ ಎಂದೇ ಹೆಸರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂಥವರು ಒಮ್ಮೆ ರಾಜ್ಯದ ಮುಖ್ಯಮಂತ್ರಿಯಾದರೆ ಭ್ರಷ್ಟಾಚಾರ, ವಂಶಾಡಳಿತ ರಾಜಕಾರಣ ಮತ್ತು ಹೊಂದಾಣಿಕೆ ರಾಜಕಾರಣಕ್ಕೆ ತಿಲಾಂಜಲಿಯಿಟ್ಟು ಸಮೃದ್ದ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಹೇಳಿದರು.
ಯತ್ನಾಳ್ ಅವರಂಥವರನ್ನು ಸಿಎಂ.ಮಾಡಲು ಮಧ್ಯ ಕರ್ನಾಟಕದ ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರರವರ ಬೆಂಬಲ ಆನೆ ಬಲ ಸಿಕ್ಕಂತಾಗಿದೆ ಎಂದರು.
ಯತ್ನಾಳ್ ಗೆ ಆನೆ ಬಲ ನೀಡಿದ ಸಿದ್ದೇಶ್ವರ:
ರಾಜ್ಯದಲ್ಲಿ ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕೀಯ ಮತ್ತು ವಕ್ಪ್ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ಶಾಸಕ ಯತ್ನಾಳ್ ರವರ ಹೋರಾಟಕ್ಕೆ ಮಧ್ಯ ಕರ್ನಾಟಕದ ಪ್ರಭಾವಿ ಲಿಂಗಾಯತ ಸಮಾಜದ ಬಿಜೆಪಿ ಹಿರಿಯ ಮುಖಂಡ ಡಾ. ಜಿ. ಎಂ. ಸಿದ್ದೇಶ್ವರ ಅವರು ಬೆಂಬಲ ಕೊಟ್ಟಿರುವುದು ಯತ್ನಾಳ್ ರವರಿಗೆ ಆನೆ ಬಲ ಸಿಕ್ಕಂತಾಗಿದೆ ಬಾಡದ ಆನಂದರಾಜ್ ಹೇಳಿದರು.
ಈ ವೇಳೆ ಜಿ. ಎಂ. ಸಿದ್ದೇಶ್ವರ, ರಾಯಚೂರು ಮಾಜಿ ಸಂಸದ ಭೀಮಾ ನಾಯ್ಕ್. ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಬಿಜೆಪಿ ಯುವ ನಾಯಕ ಎಲ್. ಡಿ. ರವಿ ದಾಗಿಕಟ್ಟೆ,
ನಾಗರಾಜ್ ನಿಲೋಗಲ್ಲ ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.