ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಾಪೂಜಿ ಸಂಸ್ಥೆ ಕಟ್ಟಿದ ಎಸ್ಕೆ ಕೊಟ್ರಬಸಪ್ಪರ ಪ್ರತಿಮೆ ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ: ಎಸ್ಎಸ್ಎಂಗೆ ಯಶವಂತರಾವ್ ಜಾಧವ್ ಸವಾಲ್!

On: August 18, 2025 3:07 PM
Follow Us:
ಪ್ರತಿಮೆ
---Advertisement---

SUDDIKSHANA KANNADA NEWS/ DAVANAGERE/DATE:18_08_2025

ದಾವಣಗೆರೆ: ಪದೇಪದೇ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಬಗ್ಗೆ ಟೀಕೆ ಮಾಡುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಧ್ಯಮದವರ ಮುಂದೆ ದರ್ಪ ತೋರಿಸುವುದು, ಪ್ರತಿಮೆ ನಿಲ್ಲಿಸುವುದು ಬೇಡ.
ದಾವಣಗೆರೆಯಲ್ಲಿ ಮಾಡಿರುವ ಪಾಪದ ಫಲ ವಿಮೋಚನೆ ಆಗಬೇಕಾದರೆ ಬಾಪೂಜಿ ಸಂಸ್ಥೆ ಕಟ್ಟಿದ ಎಸ್ ಕೆ ಕೊಟ್ರಬಸಪ್ಪನವರ ಪ್ರತಿಮೆಯನ್ನು ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ ಅದಕ್ಕೆ ನಾವು ಹಣವನ್ನು ಕೊಡುತ್ತೇವೆ,
ಅಲ್ಲಿಗೆ ನಿನ್ನ ಪಾಪ ಪರಿಹಾರ ಆಗುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.

READ ALSO THIS STORY: ಧರ್ಮಸ್ಥಳ ಕೇಸ್ ಗೆ ಟ್ವಿಸ್ಟ್, ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು: ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶೋಕ ಟಾಕೀಸ್ ರೈಲ್ವೆ ಸೇತುವೆ ನಿರ್ಮಾಣದ ಬಗ್ಗೆ ಸ್ವಾತಂತ್ರೋತ್ಸವದ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಅಶೋಕ ಟಾಕೀಸ್ ಬಳಿ, ಸೇತುವೆ ನಿರ್ಮಾಣಕ್ಕೆ ಅವರ
ಪತ್ನಿ ಅನುದಾನ ಮಂಜೂರು ಮಾಡಿಸಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಸಂಸದರಾಗಿದ್ದು ಯಾವಾಗ? ಅಶೋಕ ಟಾಕೀಸ್ ಸೇತುವೆಗೆ ಯಾವಾಗ ಅನುದಾನ ಮಂಜೂರು ಆಗಿದೆ ಎನ್ನುವ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರ ರೀತಿ ಉಸ್ತುವಾರಿ ಸಚಿವರು ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಅಶೋಕ ಟಾಕೀಸ್ ರೈಲ್ವೆ ಗೇಟ್ ಸಮಸ್ಯೆ ಪರಿಹರಿಸಲು ಸಂಸದರಾಗಿದ್ದ ಜಿ.ಎಂ ಸಿದ್ದೇಶ್ವ‌ರ್ ಅವರು 2023 ರಲ್ಲಿ ಭೂಸ್ವಾಧೀನ ವೆಚ್ಚ ಸೇರಿ ಸುಮಾರು 49.26 ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ 2023ರಲ್ಲಿ ಪ್ರಭಾ
ಮಲ್ಲಿಕಾರ್ಜುನ್ ಅವರು ಏನಾಗಿದ್ದರು? ಜಿ.ಎಂ ಸಿದ್ದೇಶ್ವ‌ರ್ ಅವರು ಮಾಡಿಸಿದ ಕೆಲಸವನ್ನು ನಾವು ಮಾಡಿಸಿದ್ದು ಎಂದು ಹೇಳುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಈಗ ಅಶೋಕ ಟಾಕೀಸ್ ಬಳಿ ಎಷ್ಟು ಜಾಗ ಇತ್ತು ಅದಕ್ಕೆ ಸರಿಯಾಗಿ
ದ್ವಿಚಕ್ರ ವಾಹನಗಳು ಆಟೋಗಳು ಕೈಗಾಡಿಗಳು ಹಾಗೂ ಅಂಬುಲೆನ್ಸ್ ಗಳು, ಮಾತ್ರ ಸಣ್ಣ ಕಾರುಗಳು ಓಡಾಡಲಿಕ್ಕೆ ಸಣ್ಣ ಕೆಳ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಅದು ಶ್ಯಾಮ್ ಸನ್ ಡಿಸ್ಟಲರಿ ಬಾಟಲಿಗಳನ್ನು ತುಂಬಿಕೊಂಡ ಲಾರಿಗಳು ಓಡಾಡಲಿಕ್ಕೆ ಅಲ್ಲ. ಅಷ್ಟು ಕಾಮನ್ ಸೆನ್ಸ್ ನಿಮಗಿಲ್ಲವೇ? ಆ ಸೇತುವೆ ಜಿಲೇಬಿ ತರ ಕಾಣುತ್ತಿರಬಹುದು. ಆದ್ದರಿಂದ ಎಷ್ಟು ಜನರಿಗೆ ಅನುಕೂಲ ಆಗಿದೆ ಅನ್ನುವುದು
ಮಾತ್ರ ನಿಮಗೆ ಕಾಣುತ್ತಿಲ್ಲ ಏಕೆಂದರೆ ಅದನ್ನು ಮಾಡಿಸಿದ್ದು ಜಿ ಎಂ ಸಿದ್ದೇಶ್ವ‌ರ್ ಅನ್ನುವ ಕಾರಣಕ್ಕೆ ಎಂದು ಹೇಳಿದರು.

ದೊಡ್ಡ ವಾಹನಗಳಿಗಾಗಿಯೇ ಎರಡು ವೆಂಟ್ ಗಳ ಸೇತುವೆ ನಿರ್ಮಾಣಕ್ಕೆ ಹಾಗೂ ರೈಲ್ವೆ ಹಳಿಯ ಪಕ್ಕದಲ್ಲಿ ಪ್ಯಾರಲಲ್ ರಸ್ತೆ, ನಿರ್ಮಾಣಕ್ಕೆ 49.26 ಕೋಟಿ ಅನುದಾನವನ್ನು ಪೂರ್ಣ ಪ್ರಮಾಣದ ರೈಲ್ವೆ ಇಲಾಖೆಯಿಂದಲೇ ಬಿಡುಗಡೆ ಮಾಡಿಸಲಾಗಿದೆ. ಈ ಕುರಿತು ಸಚಿವರಿಗೆ ಜ್ಞಾನ ಇಲ್ಲ ಅಂದರೆ ಯಾವ ಪುರುಷಾರ್ಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದೀರಾ? ಎಂದು ಪ್ರಶ್ನಿಸಿದರು.

READ ALSO THIS STORY: ತಮಿಳುನಾಡುವಿನಲ್ಲಿದ್ದಾಗ ಭೇಟಿ ಮಾಡಿದ್ದವರು ಯಾರು? ಎಸ್ಐಟಿ ಮುಂದೆ ಮತ್ತಷ್ಟು ಸ್ಫೋಟಕ ಸತ್ಯ ಬಿಚ್ಚಿಟ್ಟ ಮುಸುಕುಧಾರಿ!

ಬೇರೆಯವರು ಮಾಡಿದ ಕೆಲಸವನ್ನು ನಿಮ್ಮ ಕುಟುಂಬದವರಿಗೆ ಅರಗಿಸಿಕೊಳ್ಳುವ ಶಕ್ತಿ ಇಲ್ಲ, ದಾವಣಗೆರೆ ನಿಮ್ಮ ಕುಟುಂಬಕ್ಕೇನೂ ಅಡ್ಡ ಬಿದ್ದಿಲ್ಲ. ಈ ಸೇತುವೆ ಬಳಿ ಸಿದ್ದೇಶ್ವರ ಪ್ರತಿಮೆ ನಿಲ್ಲಿಸುವುದಾದರೆ, ಹದಡಿಕೆರೆ ಏರಿ ಅಗಲೀಕರಣದಲ್ಲಿ ಕೋಟಿಗಟ್ಟಲೆ ದುಡ್ಡು ಹೊಡೆದು ಕಳಪೆ ಕಾಮಗಾರಿ ಮಾಡಿ ಕೆರೆ ಏರಿ ಕುಸಿವಂತೆ ಮಾಡಿದ್ದು, ಅಲ್ಲಿ ಯಾರ ಪ್ರತಿಮೆ ನಿಲ್ಲಿಸಬೇಕು ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ್ ಅವರು ಹದಡಿ ಕೆರೆ ಏರಿ ಮೇಲೆ ಜನರು ಸದಾ ನಿನ್ನನ್ನು ನೆನಪು ಮಾಡಿಕೊಳ್ಳಲು ನಿಮ್ಮ ಪ್ರತಿಮೆ ನಿಲ್ಲಿಸಬೇಕಾ? ಟಿವಿ ಸ್ಟೇಷನ್ ಕೆರೆ ಹೂಳು ತೆಗೆಯುತ್ತೇವೆ ಎಂದು ಕೋಟ್ಯಂತರ ರೂಪಾಯಿ ಬೆಲೆಬಾಳುವ ಗ್ರಾವಲ್ ಮಣ್ಣನ್ನು ತೆಗೆದು ನಿಮ್ಮ ಎಂಬಿಎ ಕಾಲೇಜ್ ಗೌಂಡಿನ ಗುಂಡಿ ಮುಚ್ಚುವುದಕ್ಕೆ ಸರ್ಕಾರದ ಹಣ ಲೂಟಿ ಹೊಡೆಯಲಾಗಿದೆ. ಅದಕ್ಕೆ ನಿಮ್ಮ ಪ್ರತಿಮೆ ನಿಲ್ಲಿಸಬೇಕಾ ಎಂದು ಕೇಳಿದರು.

ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ಶ್ರೀಮಂತಿಕೆ, ದರ್ಪ, ಅಹಂಕಾರ ಮತ್ತು ಅಧಿಕಾರ ಬಹಳಷ್ಟು ದಿನ ನಡೆಯುವುದಿಲ್ಲ. ಈ ರಾಜ್ಯವನ್ನು ಈ ದೇಶವನ್ನು ಆಳಿದ ಎಷ್ಟೋ ಜನರ ಹೆಸರು ಜನರ ಮನಸ್ಸಿನಲ್ಲಿ
ಉಳಿದಿಲ್ಲ. ಅಂತದರಲ್ಲಿ ನೀವು ಯಾವ ಲೆಕ್ಕ ಎಂದ ಅವರು, ಪ್ರಭಾ ಮಲ್ಲಿಕಾರ್ಜುನ್ ಅವರು ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಹೇಳುವ ನಿಮಗೆ ಒಂದು ಸವಾಲು ಹಾಕುತ್ತೇನೆ. ಕೆಐಡಿಬಿ ಯಿಂದ1.5 ಎಕರೆ ಜಮೀನನ್ನ ಅನಾಮಧೇಯ ವ್ಯಕ್ತಿಯ ಹೆಸರಿಗೆ ಮಾಡಿಸಲಾಗಿದೆ ಎಂದು ದೂರಿದರು.

ನೊಂದಣಿ ಆಗಿರುವ ಜಮೀನನ್ನು ರದ್ದುಪಡಿಸಿ ಮಹಾನಗರ ಪಾಲಿಕೆಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ. ಮಂಡಿಪೇಟೆ ವ್ಯಾಪಾರಸ್ಥರು ಅಶೋಕ ಟಾಕೀಸ್ ಬಳಿ ಪಾದಚಾರಿಗಳು ಓಡಾಡಲಿಕ್ಕೆ ಪಾದಾಚಾರಿ ಕೆಳ ಸೇತುವೆ ಬೇಕು
ಅಂತ ಕೇಳುತ್ತಾ ಇದ್ದಾರೆ, ಅದಕ್ಕೆ ಈಗಾಗಲೇ ಸಿದ್ದೇಶ್ವರ ಅವರು ಸುಮಾರು ನಾಲ್ಕು ಕೋಟಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಿದ್ದರು. ಅದಕ್ಕೆ ಅನುದಾನ ಮಾತ್ರ ರಾಜ್ಯ ಸರ್ಕಾರ ಕೊಡಬೇಕು. ತಾಕತ್ತಿದ್ದರೆ ಈ ಎರಡು ಕೆಲಸಗಳನ್ನು ದಾವಣಗೆರೆ ಜನತೆಗೆ ಮಾಡಿ ತೋರಿಸು. ಸಣ್ಣ ಪಾದಚಾರಿ ಕೆಳಸೇತುವೆ ಮಾಡಲು ರಾಜ್ಯ ಸರ್ಕಾರದಿಂದ 4 ಕೋಟಿ ಅನುದಾನವನ್ನು ತನ್ನಿ ನೋಡೋಣ ಎಂದು ಯಶವಂತರಾವ್ ಜಾಧವ್ ಸವಾಲು ಹಾಕಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ. ಎಸ್. ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment