ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಾಮನೂರು ಶಿವಶಂಕರಪ್ಪರ ಸೋಲಿಸಲು ಪಣ: ಯಶವಂತರಾವ್ ಜಾಧವ್

On: April 5, 2023 11:05 AM
Follow Us:
---Advertisement---

SUDDIKSHANA KANNADA NEWS/ DAVANAGERE/ 05-04-2023

ದಾವಣಗೆರೆ: ದಾವಣಗೆರೆ ದಕ್ಷಿಣ (DAVANAGERE SOUTH) ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಎದುರಾಳಿ ಇಲ್ಲ ಎಂಬ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ (BJP) ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ (YASHAVANTH RAO JADHAV), ಈ ಬಾರಿಯ ಚುನಾವಣೆ (ELECTION)ಯಲ್ಲಿ ಎಸ್. ಎಸ್. ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ಪಣ ತೊಟ್ಟಿದ್ದೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರ ಸಭೆಯ ಉದ್ಘಾಟನೆ ಬಳಿಕ ನನ್ನ ವಿರುದ್ಧ ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರು ಸೋತಿದ್ದಾರೆ, ಈಗ ನಿಂತರೆ ಮತ್ತೆ ಸೋಲಿಸುತ್ತೇನೆ ಎಂಬ ಅಹಂಕಾರದ ಮಾತು ಆಡಿದ್ದಾರೆ. ಆದರೆ ಶಾಮನೂರು ಶಿವಶಂಕರಪ್ಪ (SHAMANAURU SHIVASHANKARAPPA)ರು ವಯಸ್ಸಿನಲ್ಲಿ ಹಿರಿಯರು. ನನಗಿಂತ ಹೆಚ್ಚು ರಾಜಕೀಯ ಅನುಭವ ಇದೆ. ಆದ್ರೆ, ಅವರು ಮಾತನಾಡಿರುವ ಧಾಟಿ ನೋಡಿದರೆ ರಾಜಕೀಯ ಅನುಭವ ತುಂಬಾ ಕಡಿಮೆ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಚುನಾವಣೆಯಲ್ಲಿ ಸೋಲು – ಗೆಲುವು ಸಹಜ.ರಾಹುಲ್ ಗಾಂಧಿ (RAHUL GANDHI) ವಯನಾಡುಗೆ ಬಂದು ಗೆದ್ದಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲು ಕಂಡರು. ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಲೋಕಸಭೆ ಚುನಾವಣೆಯಲ್ಲಿ 3 ಬಾರಿ ಹಾಗೂ ವಿಧಾನಸಭೆಯಲ್ಲಿ ಒಮ್ಮೆ ಸೋಲು ಕಂಡಿದ್ದಾರೆ. 1979ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಸ್. ಎಸ್. ಅವರಿಗೆ ಜನರು ಠೇವಣಿ ನೀಡುವಷ್ಚ ಮತ ನೀಡಿರಲಿಲ್ಲ. 1999 ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವುದು ಮರತಂತೆ ಕಾಣುತ್ತಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಸೋಲಿನ ಭಯದಿಂದ ಸೀರೆ, ಕುಕ್ಕರ್, ದೋಸೆ ಹೆಂಚು ಸೇರಿದಂತೆ ಅಡುಗೆ ಉಪಕರಣಗಳನ್ನು ಹಂಚಲಾಗಿದೆ.  ಕಾಂಗ್ರೆಸ್  (CONGRESS)ನ ಮಾಜಿ ಮೇಯರ್ ಆಗಿದ್ದವರ ಮನೆಯಲ್ಲಿ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಕಲ್ಲೇಶ್ವರ (KALLESHWARA) ರೈಸ್ ಮಿಲ್ (RICE MILL) ಮೇಲೆ ದಾಳಿ ಮಾಡಿದ್ದು ನಾವಲ್ಲ. ಸಿಂಥೆಲ್ ಎಂಬ ವ್ಯಕ್ತಿ ಬಂಧಿಸಿ ಸಿಸಿಬಿ ಪೊಲೀಸರು ಕರೆ ತಂದಿದ್ದರು. ಆಸೆ, ಆಮೀಷವೊಡ್ಡಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಇದು ಕೊನೆಯ ಚುನಾವಣೆ (ELECTION) ಎಂದು ಕಳೆದ ಬಾರಿ ಹೇಳಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಮುಸ್ಲಿಂರು ಇದನ್ನು ಒಪ್ಪುವ ಸ್ಥಿತಿಯಲ್ಲಿ ಇಲ್ಲ ಎಂದರು.

ದಾವಣಗೆರೆ ದಕ್ಷಿಣದಿಂದ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ ಕುಮಾರ್ (AJAYA KUMAR), ಬಿಜೆಪಿ (BJP)ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ (SHRINIVAS DASAKARIYAPPA) ಮತ್ತು ನಾನು ಸಹ ಟಿಕೆಟ್ (TICKET) ಆಕಾಂಕ್ಷಿ ಆಗಿದ್ದು, ಯಾರಿಗೂ ಟಿಕೆಟ್ ಸಿಕ್ಕರೂ ದುಡಿಯುತ್ತೇವೆ. ಶಾಮನೂರು ಶಿವಶಂಕರಪ್ಪರನ್ನು ಚುನಾವಣೆಯಲ್ಲಿ ಸೋಲಿಸಲು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಮುಸ್ಲಿಂ ಸಮುದಾಯದವರಿಗೆ ಮಂಕು ಬೂದಿ ಎರಚಿ ಗೆಲ್ಲುತ್ತಾ ಬಂದಿರುವ ಕಾಂಗ್ರೆಸ್ ಶಾಸಕರ ತಂತ್ರವು ಅಲ್ಪಸಂಖ್ಯಾತರಿಗೆ ಅರ್ಥವಾಗಿದೆ. ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಅಪ್ಪ ಮಗ ಯಾವ ಕೆಲಸವೂ ಮಾಡಿಲ್ಲ. ಬಿಜೆಪಿ (BJP) ಯ ಒಳ್ಳೆಯ ಕೆಲಸ ಸಹಿಸದೇ ವಿನಾಕಾರಣ ಆರೋಪ ಮಾಡುತ್ತಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಪಿ. ಸಿ. ಶ್ರೀನಿವಾಸ್ ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment