SUDDIKSHANA KANNADA NEWS/ DAVANAGERE/ DATE:10-12-2023
ದಾವಣಗೆರೆ: ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್ಟೇಬಲ್(ಸಿವಿಲ್) (ಪುರುಷ & ಮಹಿಳಾ), (ತೃತೀಯ ಲಿಂಗ ಪುರುಷ & ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್ಲಾಗ್-454 ಹುದ್ದೆಗಳಿಗೆ ಡಿ.10 ರ ಭಾನುವಾರ ಬೆಳಿಗ್ಗೆ 11 ರಿಂದ 12.30 ಗಂಟೆಯವರೆಗೆ ಲಿಖಿತ ಪರೀಕ್ಷೆಯನ್ನು ದಾವಣಗೆರೆ ನಗರದ ಈ ಕೆಳಗಿನ 7 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಅಭ್ಯರ್ಥಿಗಳ ರೋಲ್ ಸಂಖ್ಯೆ 5037341 ರಿಂದ 5037940 ರವರೆಗೆ ಎ.ವಿ ಕಮಲಮ್ಮ ಮಹಿಳಾ ಕಾಲೇಜು ಪಿ.ಜೆ ಬಡಾವಣೆ ದಾವಣಗೆರೆ.
5037941 ರಿಂದ 5038540 ರವರೆಗೆ ಜಿ.ಎಂ ಹಾಲಮ್ಮ ಪಿ.ಯು ಕಾಲೇಜು ಜಿ.ಎಂ.ಐ.ಟಿ ಕ್ಯಾಂಪಸ್, ಹರಿಹರ ರಸ್ತೆ, ದಾವಣಗೆರೆ.
5038541 ರಿಂದ 5039140 ರವರೆಗೆ ಜಿ.ಎಂ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಾಜಿ ಜಿ.ಎಂ.ಐ.ಟಿ ಕ್ಯಾಂಪಸ್, ಹರಿಹರ ರಸ್ತೆ, ದಾವಣಗೆರೆ.
5039141 ರಿಂದ 5039580ರವರೆಗೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ಮೈದಾನ ದಾವಣಗೆರೆ.
5039581 ರಿಂದ 5040080 ರವರೆಗೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಪಿ.ಜೆ ಬಡಾವಣೆ ದಾವಣಗೆರೆ.
5040081 ರಿಂದ 4050520 ರವರೆಗೆ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರೋಟರಿ ಬಾಲಭವನದ ಎದುರು, ಪಿ.ಜೆ ಬಡಾವಣೆ ದಾವಣಗೆರೆ.
5040521 ರಿಂದ 5041080 ರವರೆಗೆ ಶ್ರೀತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ಅನುಭವ ಮಂಟಪ, ಹದಡಿ ರಸ್ತೆ ದಾವಣಗೆರೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಹಾಜರಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ.