ನೆದರ್ಲೆಂಡ್ಸ್: ಡಚ್ ರಾಜಮನೆತನದ ಉತ್ತರಾಧಿಕಾರಿಗಳಾದ ರಾಜಕುಮಾರಿ ಕ್ಯಾಥರೀನಾ-ಅಮಲಿಯಾ ಮತ್ತು ಅವರ ತಂಗಿ ರಾಜಕುಮಾರಿ ಅಲೆಕ್ಸಿಯಾ ಅವರನ್ನು ಹತ್ಯೆ ಮಾಡಲು ರೂಪಿಸಲಾಗಿದ್ದ ಭಯಾನಕ ಸಂಚನ್ನು ಅಧಿಕಾರಿಗಳು ವಿಫಲಗೊಳಿಸಿದ್ದಾರೆ.
ಈ ಸಂಬಂಧ 33 ವರ್ಷದ ವ್ಯಕ್ತಿಯನ್ನು ಹೇಗ್‌ನಲ್ಲಿ ಬಂಧಿಸಲಾಗಿದ್ದು, ಆತ ತೀವ್ರಗಾಮಿ ಬಲಪಂಥೀಯ ಸಿದ್ಧಾಂತಕ್ಕೆ ಮಾರುಹೋಗಿದ್ದನೆಂದು ತಿಳಿದುಬಂದಿದೆ.
ಬಂಧಿತ ಆರೋಪಿಯ ಬಳಿ ಎರಡು ಕೊಡಲಿಗಳು ಪತ್ತೆಯಾಗಿದ್ದು, ಅವುಗಳ ಮೇಲೆ ರಾಜಕುಮಾರಿ ಅಲೆಕ್ಸಿಯಾ ಅವರ ಹೆಸರು, ಇಸ್ರೇಲ್‌ನ ಗುಪ್ತಚರ ಸಂಸ್ಥೆ ‘ಮೊಸಾದ್’ ಮತ್ತು ನಾಜಿಗಳ ಘೋಷಣೆಯಾದ ‘ಸೀಗ್ ಹೀಲ್’ (Sieg Heil) ಎಂಬ ಪದಗಳನ್ನು ಕೆತ್ತಲಾಗಿತ್ತು. ಅಷ್ಟೇ ಅಲ್ಲದೆ, ಆತನ ಬಳಿಯಿದ್ದ ಪತ್ರವೊಂದರಲ್ಲಿ ರಾಜಕುಮಾರಿಯರ ಹೆಸರು ಹಾಗೂ ‘ರಕ್ತಪಾತ’ (Bloodbath) ಎಂಬ ಪದಗಳನ್ನು ಬರೆಯಲಾಗಿತ್ತು.
ಈ ಘಟನೆಯು ನೆದರ್ಲೆಂಡ್ಸ್‌ನಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಸೋಮವಾರ ಬೆಳಿಗ್ಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಇಷ್ಟೆಲ್ಲಾ ಭದ್ರತಾ ಭೀತಿಗಳ ನಡುವೆಯೂ ಕಿಂಗ್ ವಿಲಿಯಂ ಅಲೆಕ್ಸಾಂಡರ್ ಅವರ 59ನೇ ಜನ್ಮದಿನದ ಅಂಗವಾಗಿ ನಡೆದ ‘ಕಿಂಗ್ಸ್ ಡೇ’ ಸಂಭ್ರಮಾಚರಣೆಯಲ್ಲಿ ರಾಜಮನೆತನದವರು ಭಾಗವಹಿಸುವ ಮೂಲಕ ಧೈರ್ಯ ಪ್ರದರ್ಶಿಸಿದ್ದಾರೆ.





Leave a comment