SUDDIKSHANA KANNADA NEWS/ DAVANAGERE/ DATE-15-05-2025
ಬೆಂಗಳೂರು, ವೈಟ್ ಫೀಲ್ದ್: ಬೆಂಗಳೂರು ಮೂಲದ 38 ವರ್ಷದ ಮಹಿಳೆಗೆ ಎರಡನೇ ಬಾರಿಗೆ ಕಿಡ್ನಿಕಸಿ ಶಸ್ತ್ರಚಿಕಿತ್ಸೆ ಮಾಡಿ ಯಶ್ವಸಿಯಾಗಿ ಆಕೆಯನ್ನು ಗುಣಮುಖರನ್ನಾಗಿ ಮಾಡಲಾಗಿದೆ.
ಮಹಿಳೆಯು ಧೀರ್ಘಕಾಲದ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಾ ಇದ್ದ ಕಾರಣ 2016 ರಲ್ಲಿ ಆಕೆಯ ತಂದೆಯೇ ಕಿಡ್ನಿ ದಾನ ಮಾಡುವುದರ ಮೂಲಕ ಮೊದಲ ಬಾರಿಗೆ ಯಶಸ್ವಿ ಕಿಡ್ನಿ ಕಸಿ ಮಾಡಲಾಗಿತ್ತು. ಆದಾದ ಬಳಿಕ ಆಕೆಯಲ್ಲಿ ಕಿಡ್ನಿ ಸಂಬಂಧಿತ ಯಾವುದೇ ಸಮಸ್ಯೆಗಳು ಕಂಡು ಬಂದಿರಲಿಲ್ಲ.
ಆದರೆ ಕಳೆದ ನವಂಬರ್ ತಿಂಗಳಿನಿಂದ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಂಡು ಬಂತು. ತೂಕ ಇಳಿಕೆ, ಊಟ ಸೇರುತ್ತಾ ಇರಲಿಲ್ಲ. ಮಲಬದ್ದತೆ ಸೇರಿದಂತೆ ಹಲವು ರೋಗ ಲಕ್ಷಣಗಳು ಕಾಣಿಸಲಾರಂಭಿಸಿತು. ಅಲ್ಲದೇ ರಕ್ತ ಪರೀಕ್ಷೆಯಲ್ಲಿ ಕ್ರಿಯಾಟಿನಿನ್ ಮಟ್ಟ ಏರಿಕೆಯಾಗಿದ್ದರಿಂದ ವಾರಕ್ಕೆ ಎರಡು ಬಾರಿ ಹೆಮೊಡಯಾಲಿಸಿಸ್( 2 ಕಿಡ್ನಿ ಫೇಲ್ ಆದಾಗ ಮಾಡುವ ಚಿಕಿತ್ಸೆ) ಮಾಡಲಾಗುತ್ತಾ ಇತ್ತು.
2025ರ ಫೆಬ್ರವರಿಯ ಬಳಿಕ ರೋಗಿಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಫೀಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಹಿಳೆಯನ್ನು ದಾಖಲಿಸಲಾಯಿತು. ಮೂತ್ರಶಾಸ್ತಜ್ಞ ಡಾ. ಪ್ರಮೋದ್ ರವರ ನೇತೃತ್ವದಲ್ಲಿ ಎರಡನೇ ಬಾರಿಗೆ ಆಕೆಗೆ ಕಿಡ್ನಿ ಕಸಿ ಮಾಡಲಾಯಿತು. ಈ ಬಾರಿ ಆಕೆಯ ತಾಯಿ ಅವರಿಗೆ ಕಿಡ್ನಿ ದಾನ ಮಾಡಿದ್ದರು. ಸುಮಾರು 3 ಗಂಟೆಗಳ ಕಾಲ ಆಸ್ಪತ್ರೆಯ ನೆಫ್ರೋಲಾಜಿ, ಯೂರೋಲಾಜಿ ಮತ್ತು ಟ್ರಾನ್ಸ್ಪ್ಲಾಂಟ್ ತಜ್ಞರ ತಂಡವು ಉನ್ನತ ತಂತ್ರಜ್ಞಾನ ಬಳಸಿಕೊಂಡು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದರು.
ಶಸ್ತ್ರಚಿಕಿತ್ಸೆಯ 7ನೇ ದಿನಕ್ಕೆ ಕ್ರಿಯಾಟಿನಿನ್ , ಹಿಮೋಗ್ಲೋಬಿನ್, ಬಿಳಿ ರಕ್ತಕಣಗಳು ಸರಿಯಾಗಿ ಕೆಲಸ ಮಾಡಲು ಶುರು ಮಾಡಿದ್ದ ಕಾರಣ ಮಹಿಳೆಯೂ ಸಂಪೂರ್ಣವಾಗಿ ಗುಣಮುಖರಾಗಿದ್ದರು.
ಮರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಎಂದರೆ ಸಾಮಾನ್ಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಸವಾಲುಭರಿತ. ಈ ರೋಗಿಯು ಹಿಂದೆ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾಗಿರುವುದರಿಂದ ಶರೀರದ ರಕ್ಷಣಾತ್ಮಕ ವ್ಯವಸ್ಥೆ ಹೆಚ್ಚು ಬಲವಂತವಾಗಿರುತ್ತದೆ. ಆದ್ದರಿಂದ ಔಷಧಿ ನೀಡುವ ಕ್ರಮದಿಂದ ಹಿಡಿದು ಶಸ್ತ್ರಚಿಕಿತ್ಸೆ ತನಕ ಹೆಚ್ಚು ನಿಖರತೆ ಅಗತ್ಯವಿರುತ್ತದೆ ಎಂದು ಶಸ್ತ್ರಚಿಕಿತ್ಸೆಯ ಬಳಿಕ ಡಾ. ಪ್ರಮೋದ್, ಯೂರೋಲೋಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಾ ತಜ್ಞರು ತಿಳಿಸಿದ್ದಾರೆ.