ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಧರ್ಮಸ್ಥಳ ಸೇರಿ ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ಬುರುಡೆ ಗ್ಯಾಂಗ್ ನ ಅಪನಂಬಿಕೆ ದಾಳಿ ಸಿದ್ದರಾಮಯ್ಯ ಸರ್ಕಾರ ಹೊರುತ್ತಾ?

On: October 30, 2025 4:02 PM
Follow Us:
ಧರ್ಮಸ್ಥಳ
---Advertisement---

SUDDIKSHANA KANNADA NEWS/DAVANAGERE/DATE:30_10_2025

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವುಗಳಾಗಿದೆ, ಅಕ್ರಮವಾಗಿ ಶವ ಹೂಳಲಾಗಿದೆ ಎಂದು ಬುರುಡೆಯೊಂದನ್ನು ಹಿಡಿದುಕೊಂಡು ಬಂದಿದ್ದ ಬುರುಡೆ ಗ್ಯಾಂಗಿಗೆ, ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ಸದಾ ಷಡ್ಯಂತ್ರ ನಡೆಸುವ ಎಡಪಂಥೀಯರು ಸಹಕಾರ ನೀಡಿ‌ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಿದ್ದರು ಎಂದು ಬಿಜೆಪಿ ಆರೋಪಿಸಿದೆ.

READ ALSO THIS STORY: 3 ವರ್ಷವಾದ್ರೂ ಇಲ್ಲೇ ಠಿಕಾಣಿ ಹೂಡಿರೋ ಪಾಲಿಕೆ ಆಯುಕ್ತೆಯಿಂದ ಸಚಿವ, ಸಂಸದೆಗೆ ಕೆಟ್ಟ ಹೆಸರು: ಮಾದಿಗ ದಂಡೋರ ಸಮಿತಿ ಗಂಭೀರ ಆರೋಪ!

ನಗರ ನಕ್ಸಲರ ಒತ್ತಡಕ್ಕೆ ಬಲಿಯಾದ ಸಿಎಂ ಸಿದ್ದರಾಮಯ್ಯ ಅವರು, ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆದು ಹತ್ತಾರು ಸ್ಥಳಗಳಲ್ಲಿ ಉತ್ಖನನ ನಡೆಸಲಾಗಿ ಸಾಮೂಹಿಕವಾಗಿ ಶವ ಹೂಳಿರುವ ಬಗ್ಗೆ ಯಾವುದೇ ಪುರಾವೆ ದೊರೆಯಲಿಲ್ಲ. ಬುರುಡೆ ಗ್ಯಾಂಗ್‌ ಧರ್ಮಸ್ಥಳದ ಮೇಲಿನ ದ್ವೇಷಕ್ಕೆ ಮಾಸ್ಕ್‌ಮ್ಯಾನ್‌ ಕರೆತಂದು ಆರೋಪ ಹೊರಿಸಿತ್ತು. ಇದೀಗ ಬುರುಡೆ ಗ್ಯಾಂಗಿನ ಷಡ್ಯಂತ್ರ ಬಯಲಾಗುತ್ತಲೇ, ಕೇಸ್‌ ರದ್ಧತಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ಕಿಡಿಕಾರಿದೆ.

ಸರ್ಕಾರ ಆತುರಾತುರವಾಗಿ, ಸ್ಥಳೀಯ ಎಸ್‌ಪಿ ಮಾತನ್ನು ಧಿಕ್ಕರಿಸಿ ಎಸ್‌ಐಟಿಗೆ ನೀಡಿದ ಪರಿಣಾಮ ಧರ್ಮಸ್ಥಳದ ಮೇಲೆ ಅಪನಂಬಿಕೆ ಬರುವಂತಹ ಸುದ್ದಿಗಳನ್ನು ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಪ್ರಸಾರ ಮಾಡಲಾಗಿತ್ತು. ಧರ್ಮಸ್ಥಳದ ಮೇಲೆ ಸರ್ಕಾರಿ ಪ್ರಾಯೋಜಿತವಾಗಿ ನಡೆದ ಅಪನಂಬಿಕೆಯ ದಾಳಿಯನ್ನು ಸಿದ್ದರಾಮಯ್ಯ ಸರ್ಕಾರ ಹೊರಬೇಕು ಎಂದು ಭಾರತೀಯ ಜನತಾ ಪಕ್ಷ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment