SUDDIKSHANA KANNADA NEWS/ DAVANAGERE/ DATE:13-03-2025
ಕನ್ನಡದ ನಟಿ ಶ್ರೀಲೀಲಾ ಈಗ ಮುಟ್ಟಿದ್ದೆಲ್ಲವೂ ಚಿನ್ನ. ಕನ್ನಡ ಭಾಷೆಯಲ್ಲಿ ಅಷ್ಟೇನೂ ಜನಪ್ರಿಯರಾಗದಿದ್ದರೂ ಹೆಚ್ಚಾಗಿ ಫೇಮಸ್ ಆಗಿದ್ದು ತೆಲುಲು ಚಿತ್ರರಂಗದಲ್ಲಿ. ಅತ್ಯಂತ ಕಡಿಮೆ ಅವಧಿಯಲ್ಲಿ ಖ್ಯಾತನಾಮರ ಜೊತೆ ನಟಿಸಿ ಸೈ ಎನಿಸಿಕೊಂಡವರು.
ನಟಿ ಶ್ರೀಲೀಲಾ ಯಾವಾಗಲೂ ನಾನು ಕನ್ನಡದವಳು. ಕನ್ನಡ ಭಾಷೆ ಚೆನ್ನಾಗಿ ಬರುತ್ತದೆ ಎನ್ನುವ ಮೂಲಕ ಕನ್ನಡತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚು ಸುದ್ದಿ ಆಗುತ್ತಿರುವುದು ವೈಯಕ್ತಿಕ ಕಾರಣಕ್ಕೆ. ಹೌದು.
ಮುದ್ದಾದ ನಟಿಯ ಮದುವೆ ಯಾವಾಗ ಎಂಬ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ರವಿತೇಜ, ನಂದಮೂರಿ ಬಾಲಕೃಷ್ಣ, ಮಹೇಶ್ ಬಾಬು ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ಈಗ ಬಹುಬೇಡಿಕೆಯ ನಟಿ. ಹೆಚ್ಚಾಗಿ ಕಾರ್ತಿಕ್ ಆರ್ಯನ್ ಜೊತೆ ಸುತ್ತಾಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುವ ವಿಡಿಯೋ ಆಗಾಗ್ಗೆ ಹೊರ ಬರುತ್ತಲೇ ಇವೆ.
ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ನಲ್ಲಿ ಹೀರೋಹಿನ್ಸ್ ಹೀರೋಗಳ ಜೊತೆ ಡೇಟಿಂಗ್ ನಡೆಸುವುದು ಹೊಸದೇನಲ್ಲ. ಶ್ರೀಲೀಲಾ ಕೂಡ ಬಿಟೌನ್ ಹೀರೋ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ನಲ್ಲಿರುವುದು ಸಖತ್ ಸುದ್ದಿಯಾಗಿಬಿಟ್ಟಿದೆ.
ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್‌ನಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ರೀತಿಯ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ‘ಡಾಕ್ಟರ್ ಆಗಿರುವ ಸೊಸೆ ಬೇಕು’ ಎಂದಿದ್ದರು. ಕಾರ್ತಿಕ್ ಆರ್ಯನ್ ತಾಯಿ ಆಡಿದ ಮಾತು ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡಿದೆ.
ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ‘ಡಾಕ್ಟರ್ ಸೊಸೆ ಬೇಕು’ ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿದೆ. ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದ್ದರೂ, ಈ ಜೋಡಿ ಮಾತ್ರ ಏನು ಪ್ರತಿಕ್ರಿಯೆ ನೀಡುತ್ತಿಲ್ಲ. ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್‌ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. 2025ರ ದೀಪಾವಳಿಯಂದು ಈ ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ಇಬ್ಬರ ನಡುವೆ ಇರುವುದು ಸ್ನೇಹವೋ, ಪ್ರೀತಿಯೋ ಎಂಬುದು ಗೊತ್ತಾಗಲಿದೆ.