ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗ್ರಾಮದ ದೇವತೆಯ ಜಾತ್ರೆ ದಿನವೇ ಪತ್ನಿ ಕೊನೆಯುಸಿರು ನಿಲ್ಲಿಸಿದ ಪತಿ…!

On: February 1, 2024 4:02 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-02-2024

ದಾವಣಗೆರೆ: ಊರಲ್ಲಿ ಜಾತ್ರೆ ಸಂಭ್ರಮ. ಸಂಬಂಧಿಕರು, ಸ್ನೇಹಿತರು ಮನೆಗೆ ಬರುತ್ತಿದ್ದರೆ, ಆ ಮನೆಯಲ್ಲಿ ರಕ್ತ ಹರಿದಿತ್ತು. ಪತ್ನಿಯನ್ನೇ ಪತಿ ಕೊಂದು ಹಾಕಿದ ಘಟನೆ ದಾವಣಗೆರೆ ತಾಲೂಕಿನ ಶಿರಮನಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕುಡಿತದ ಮತ್ತಿನಲ್ಲಿ ಪತ್ನಿಯನ್ನೇ ಪತಿ ಕೊಂದಿದ್ದಾನೆ. ಹನುಮಂತ (280 ಕೊಲೆ ಮಾಡಿದ ಆರೋಪಿ. ಅರ್ಪಿತಾ (24) ಹತ್ಯೆಯಾದ ಪತ್ನಿ. ಪ್ರತಿನಿತ್ಯವೂ ಕುಡಿದು ಗಲಾಟೆ ಮಾಡುತ್ತಿದ್ದ ಹನುಮಂತ ಪತ್ನಿಗೆ ಕುಡಿಯಲು ಹಣ
ಕೇಳಿದ್ದಾನೆ. ಕೊಡದ ಕಾರಣಕ್ಕೆ ಕಿವಿಗೆ ಬಲವಾಗಿ ಥಳಿಸಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಅರ್ಪಿತಾ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.

ಶಿರಮಗೊಂಡನಹಳ್ಳಿಯಲ್ಲಿ ಗ್ರಾಮ ದೇವತೆಯ ಜಾತ್ರೆಯ ಸಂಭ್ರಮದ ನಡುವೆ ಈ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಇನ್ನು ಪತ್ನಿ ಹತ್ಯೆ ಮಾಡಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಎಸ್ಪಿ ವಿಜಯ ಕುಮಾರ ಎಂ. ಸಂತೋಷ್ ಅವರೂ ಸಹ ಭೇಟಿ ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment