Home ದಾವಣಗೆರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರಿಗೆ ‘ದಿವಾಳಿ ರತ್ನ’ ಪ್ರಶಸ್ತಿ ನೀಡಬೇಕೆಂದಿದ್ಯಾಕೆ?
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿರಿಗೆ ‘ದಿವಾಳಿ ರತ್ನ’ ಪ್ರಶಸ್ತಿ ನೀಡಬೇಕೆಂದಿದ್ಯಾಕೆ?

Share
Share

SUDDIKSHANA KANNADA NEWS/DAVANAGERE/DATE:19_12_2025

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಸಾರಿಗೆ ಸಂಸ್ಥೆಯನ್ನು ಸರ್ವನಾಶ ಮಾಡಿದ್ದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ‘ದಿವಾಳಿ ರತ್ನ’ ಪ್ರಶಸ್ತಿ ನೀಡಲೇಬೇಕು ಎಂದು ಬಿಜೆಪಿ ವ್ಯಂಗ್ಯವಾಡಿದೆ.

4 ನಿಗಮ ಹಾಗೂ ಬಿಎಂಟಿಸಿಗೆ 4000 ಕೋಟಿ ರೂ. ಬಾಕಿ ಉಳಿಸಿಕೊಂಡು, ಇಲಾಖೆ ‘ಲಾಭ’ದಲ್ಲಿದೆ ಎಂದು ಬೊಗಳೆ ಬಿಡುವ ಸಚಿವರಿಗೆ ನೊಬೆಲ್ ಪ್ರಶಸ್ತಿ ಕೊಟ್ಟರೂ ಕಡಿಮೆಯೇ..! ಸಿಎಂ ಸಿದ್ದರಾಮಯ್ಯನವರೇ ತಮ್ಮ ಸಂಪುಟದ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅವರ ಇಲಾಖೆಯ ‘ಲಾಭ’ದ ಕಥೆ ಕೇಳಿ ಕನ್ನಡಿಗರು ನಗುತ್ತಿದ್ದಾರೆ. ಅಂದಹಾಗೇ ಅವರಿಗೆ ‘ಅಸಮರ್ಥ ಸಚಿವ’ ಎಂಬ ಪ್ರಶಸ್ತಿಯೂ ಖಂಡಿತ ಸಲ್ಲಬೇಕು ಎಂದು ಎಕ್ಸ್ ನಲ್ಲಿ ಕಿಡಿಕಾರಿದೆ.

ಹಾಲಿನ ದರವನ್ನು ವರ್ಷದಲ್ಲಿ ಮೂರು ಸಲ ಏರಿಸಲಾಗಿದೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದವರೆಗೆ ಎಲ್ಲಾ‌ ಶುಲ್ಕಗಳು ಏರಿಕೆಯಾಗಿವೆ. ಕೆಲವು ದರ ಏರಿಕೆ ಹತ್ತುಪಟ್ಟಿನಿಂದ ನೂರು ಪಟ್ಟಿನವರೆಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದೊಂದು ವಿಧೇಯಕ ಬರುವಾಗ ಭಯ ಶುರುವಾಗುತ್ತದೆ. ಯಾವ ಹೊಸ ಟ್ಯಾಕ್ಸ್, ಸೆಸ್ ವಿಧಿಸಲಾಗುತ್ತದೆ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *