ಬೆಂಗಳೂರು ಡಿ.15: ವಕ್ಫ್ ಆಸ್ತಿ ವಿಚಾರವಾಗಿ ತಮ್ಮ ವಿರುದ್ಧ ಮಾಡಿರುವ 150ಕೋಟಿ ಆಮಿಷದ ಆರೋಪವನ್ನು ಸಿಬಿಐ ಗೆ ತನಿಖೆಗೆ ಆಗ್ರಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ.ಯಾರಾದರೂ ಕಾಂಗ್ರೆಸ್ಸಿಗರ ವಿರುದ್ಧ 150ಕೋಟಿ ರೂ ಆಮಿಷವೊಡ್ಡಲು ಸಾಧ್ಯವೇ? ಇಂಥ ಕನಿಷ್ಟ ಪರಿಜ್ಞಾನವು ನಿಮಗಿಲ್ಲವೆಂದು ತಿರುಗೇಟು ನೀಡಿದರು.
ಸಿಬಿಐ,ಇಡಿ ತನಿಖೆಗಳಿಗೆ ಬೆಚ್ಚಿ ಬಿದ್ದಿರುವ ನೀವು ರಾಜ್ಯಪಾಲರ ಪ್ರಾಸುಕ್ಯೂಷನ್ ನೀಡಿದ ಅನುಮತಿಯನ್ನು ಪ್ರಶ್ನಿಸಿ ದೆಹಲಿಯಿಂದ ಘಟಾನುಘಟಿ ವಕೀಲರನ್ನು ಕರೆಸಿಕೊಂಡು ಕಾನೂನಿನ ರಕ್ಷಣೆ ಪಡೆಯಲು ನೀವು ಮಾಡಿದ ಪ್ರಯತ್ನ ಅರ್ಥಹೀನವಾದುದು. ಹೈಕೋರ್ಟ್ ತೀರ್ಪನಿಂದ ಮುಖಭಂಗವಾದ ನಿಮಗೆ ಇನ್ನೊಬ್ಬರ ಬಗ್ಗೆ ಸಿಬಿಐ ತನಿಖೆಗೆ ಆದೇಶ ಹೊರಡಿಸಲು ನಿಮಗೆ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.
ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸದಂತೆ ತಡೆಯಲು ಈ ಕ್ಷಣಕ್ಕೂ ದೆಹಲಿಯ ಸಂವಿಧಾನ ತಜ್ಞ ವಕೀಲರನ್ನೇ ಕರೆಸಿ ಕನ್ನಡಿಗರ ತೆರಿಗೆ ಹಣವನ್ನು ನೀರಿನಂತೆ ಪೋಲು ಮಾಡಿ ವಾದ ಮಾಡಿಸಿಕೊಳ್ಳುತ್ತಿದ್ದೀರಿ.ಇದರಿಂದ ನೀವು ಹತಾಶರಾಗಿ ತಳ ಬುಡವಿಲ್ಲದ ಕಪೋಲಕಲ್ಪಿತ ವಿಷಯ ಹಿಡಿದುಕೊಂಡು ಬ್ರಹ್ಮಾಸ್ತ್ರವೆಂದು ಭ್ರಮಿಸಿ ಪ್ರಯೋಗಿಸಲು ಹೊರಟಿದ್ದೀರಿ ಎಂದು ಪತ್ರಿಕಾ ಹೇಳಿಕೆ ಮೂಲಕ ವಿಜಯೇಂದ್ರ ಹರಿಹಾಯ್ದಿದ್ದಾರೆ.
ಇವುಗಳಿಂದ ನೀವು ನನ್ನ ವಿರುದ್ಧ ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತು ಇನ್ನೇನೂ ಸಾಧಿಸಲಾಗದು.ನಿಮಗೆ ಧೈರ್ಯವಿದ್ದರೆ, ಹೈಕೋರ್ಟ್‌ನಲ್ಲಿರುವ ನಿಮ್ಮ ವಿರುದ್ಧದ ಮುಡಾ(ಮೈಸೂರು ನಗರಾಭಿವೃದ್ಧಿ) ಹಗರಣದ ಕುರಿತು ಸಿಬಿಐ ತನಿಖೆಗೆ ಕೋರಿದ ರಿಟ್ ಅರ್ಜಿಗೆ ಆಕ್ಷೇಪವೆತ್ತಬೇಡಿ. ಸಿಬಿಐ ತನಿಖೆಗೆ ಅವಕಾಶ ಮಾಡಿಕೊಡಿ ನೋಡೋಣ ಎಂದು ವಿಜಯೇಂದ್ರ ಸವಾಲು ಎಸೆದಿದ್ದಾರೆ.