ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಂಡಾಯ ಶಮನವಾಯ್ತು ಎನ್ನುವ ಹೊತ್ತಲ್ಲೇ ಬಿಜೆಪಿಯಲ್ಲಿ ಮತ್ತೆ ಧಗಧಗ.. ಅಪಸ್ವರ: ಯಶವಂತರಾವ್ ಜಾಧವ್ ಉಚ್ಛಾಟನೆಗೆ ಪತ್ರ ಬರೆದಿದ್ಯಾಕೆ..? ಇಲ್ಲಿದೆ ಡೀಟೈಲ್ಸ್

On: March 27, 2024 10:20 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:27-03-2024

ದಾವಣಗೆರೆ: ಇನ್ನೇನೂ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಶಮನವಾಯ್ತು ಅನ್ನೋ ಅಷ್ಟರಲ್ಲಿ ಮತ್ತೆ ಭಿನ್ನ ರಾಗ ತಾರಕಕ್ಕೇರಿದೆ. ಮಾತ್ರವಲ್ಲ, ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಉಚ್ಚಾಟನೆಗೆ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ನೇತೃತ್ವದ 11 ಮಂದಿಯ ಲಗಾನ್ ಟೀಂ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದೆ.

ಅಪೂರ್ವ ರೆಸಾರ್ಟ್ ನಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ಬಿಜೆಪಿ ಭಿನ್ನಮತೀಯರ ಗುಂಪಿನ ನಡುವೆ ಸಂಧಾನ ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಆಲ್ ಇಸ್ ವೆಲ್. ಎಲ್ಲವೂ ಸರಿ ಹೋಗಿದೆ. ಅತಿ ಹೆಚ್ಚಿನ ಮತಗಳಿಂದ ಗಾಯತ್ರಿ ಸಿದ್ದೇಶ್ವರ ಅವರನ್ನು ಲೋಕಸಭೆಗೆ ಕಳುಹಿಸಿಕೊಡಬೇಕು. ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಘೋಷಿಸಿ ಹೋಗಿದ್ದರು.

ಯಡಿಯೂರಪ್ಪ ಬಂದು ಹೋದ ಬಳಿಕವೂ ಬಂಡಾಯದ ರಹಣಕಹಳೆ ಮೊಳಗಿಸಲಾಗಿದೆ. ಇದಕ್ಕೆ ಕಾರಣ ಯಶವಂತರಾವ್ ಜಾಧವ್ ಹಾಗೂ ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್ ನಡುವಿನ ಜಟಾಪಟಿ. ಇದು ಈಗ ತಾರಕಕ್ಕೇರಿದ್ದು, ಯಶವಂತರಾವ್ ಜಾಧವ್ ಉಚ್ಚಾಟನೆ ಮಾಡಲೇಕೆಂದು ಪಟ್ಟು ಹಿಡಿದಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಕರ್ನಾಟಕ ರಾಜ್ಯ ಉಸ್ತುವಾರಿ ರಾಧಮೋಹನ್ ಅಗರ್ ವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿ. ವಿ ರಾಜೇಶ್ ಜಿ ಅವರಿಗೆ ಪತ್ರ ಕಳುಹಿಸಲಾಗಿದೆ. ಈ ಮೂಲಕ ಸಿದ್ದೇಶ್ವರರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಶವಂತರಾವ್ ಜಾಧವ್ ವಿರುದ್ಧ ಗುಟುರು ಹಾಕಲಾಗಿದೆ.

ವಾಗ್ವಾದ ನಡೆದಿದ್ದು ಯಾಕೆ…?

ಅಪೂರ್ವ ರೆಸಾರ್ಟ್ ನಲ್ಲಿ ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ರಾಧಮೋಹನ್ ಅಗರ್ ವಾಲ್, ಜಿ. ವಿ. ರಾಜೇಶ್ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯುತಿತ್ತು. ಈ ವೇಳೆ ಯಶವಂತರಾವ್ ಜಾಧವ್ ಹಾಗೂ ಅಜಯ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಯಶವಂತರಾವ್ ಜಾಧವ್ ಅವರಿಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದೆ ಎನ್ನುವ ಅಜಯ್ ಕುಮಾರ್ ಮಾತು ಯಶವಂತರಾವ್ ಜಾಧವ್ ರೊಚ್ಚಿಗೇಳುವಂತೆ ಮಾಡಿತು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಜೋರಾಯಿತು. ಏರು ದನಿಯಲ್ಲಿ ಮಾತನಾಡಿದರು. ಸವಾಲು – ಪ್ರತಿಸವಾಲು ಹಾಕಲಾಯಿತು ಎಂದು ಹೇಳಲಾಗುತ್ತಿದೆ. ಬಳಿಕ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯರು ಇಬ್ಬರನ್ನು ಸಮಾಧಾನ ಪಡಿಸಿದರು ಎಂದು ತಿಳಿದು ಬಂದಿದೆ.

ಯಶವಂತರಾವ್ ಜಾಧವ್ ಅವರು ಯಾವುದೇ ಹಣ ಕೊಟ್ಟಿಲ್ಲ. ಸೋಲಿನ ಬಳಿಕ ಹಾಗೂ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಇಂಥ ಆರೋಪ ಮಾಡುತ್ತಿರುವುದು ಯಾಕೆ ಎಂದು ಯಶವಂತರಾವ್ ಜಾಧವ್ ಪ್ರಶ್ನಿಸಿದರು. ಈ ವೇಳೆ ಅಜಯ್ ಕುಮಾರ್ ಅವರು ಯಶವಂತರಾವ್ ಜಾಧವ್ ನಡುವೆ ಜೋರಾಗಿ ಮಾತಾಯಿತು. ಆಗ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಅವರು ಅಜಯ್ ಕುಮಾರ್ ಪರ ಬ್ಯಾಟ್ ಬೀಸಿದರು.

ಬರೆದಿರುವ ಪತ್ರದ ದೂರಿನಲ್ಲೇನಿದೆ…?

ಮಾರ್ಚ್ 26-03-2024ರಂದು ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಜರುಗಿತು. ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ
ವಿಸ್ತ್ರತವಾಗಿ ಚರ್ಚಿಸಲಾಯಿತು.

ಸಭೆಯ ಅಂತ್ಯದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಹಾಲಿ ಸದಸ್ಯ ಬಿ.ಜಿ. ಅಜಯ್ ಕುಮಾರ್ ಅವರ ಜೊತೆ ಯಶವಂತರಾವ್ ಜಾಧವ್ ಅವರು ಅವಾಚ್ಯ ಶಬ್ದಗಳೊಂದಿಗೆ ವಾಗ್ವಾದ ಮಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯರಾದ ಬಿ.ಎಸ್.ಯಡಿಯೂರಪ್ಪನವರು, ಕರ್ನಾಟಕ ಲೋಕಸಭಾ ಪ್ರಭಾರಿ ರಾಧಮೋಹನ್ ಅಗರ್ ವಾಲ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್‌ಜಿ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಜಿ. ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಕ್ಲಸ್ಟರ್ ಪ್ರಮುಖ್ ಕೆ.ಎಸ್. ನವೀನ್, ಎನ್. ರವಿಕುಮಾರ್, ಸಂಸದ ಜಿ.ಎಂ.ಸಿದ್ದೇಶ್ವರ್ ಇವರ ಸಮಕ್ಷಮದಲ್ಲಿಯೇ ಅತ್ಯಂತ ಅನುಚಿತವಾಗಿ ವರ್ತಿಸಿದ ಯಶವಂತರಾವ್ ಜಾಧವ್ ಅವರ ನಡವಳಿಕೆ ಖಂಡನೀಯ. ಬಿಜೆಪಿಯ ಪ್ರಮುಖರ ಸಭೆಯಲ್ಲಿ ತುಂಬಾ ಆಗೌರವಯುತ ವರ್ತನೆ ಮಾಡಿರುತ್ತಾರೆ. ಬಿಜೆಪಿ ಕಾರ್ಯಕರ್ತರ ಗೌರವ ಕಾಪಾಡುವ ಜವಾಬ್ದಾರಿ ತಮ್ಮದಾಗಿದ್ದು ಚುನಾವಣೆಯಲ್ಲಿ ನಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಲು, ತುರ್ತಾಗಿ ಯಶವಂತರಾವ್ ಜಾಧವ್ ಬಗ್ಗೆ ಶಿಸ್ತು ಕ್ರಮ ಜರುಗಿಸಬೇಕಾಗಿ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ದೂರಲಾಗಿದೆ.

ಎಸ್. ಎ. ರವೀಂದ್ರನಾಥ್, ಕರುಣಾಕರ ರೆಡ್ಡಿ, ಎಂಪಿ ರೇಣುಕಾಚಾರ್ಯ, ಟಿ ಗುರುಸಿದ್ದನಗೌಡ, ಎಂ ಬಸವರಾಜ್ ನಾಯ್ಕ್, ಡಾ. ಎಹೆಚ್ ಶಿವಯೋಗಿಸ್ವಾಮಿ, ಲೋಕಿಕೆರೆ ನಾಗರಾಜ್, ಬಿಜಿ ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಕೆಎಂ ಸುರೇಶ್, ಎಂಎನ್ ಕಲ್ಲೇಶ್, ಡಾ. ಟಿಜಿ ರವಿಕುಮಾರ್ ಅವರು ಕೂಡಲೇ ಯಶವಂತರಾವ್ ಜಾಧವ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಈ ವಿಚಾರ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರಂತೆ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ

ಸಿದ್ದರಾಮಯ್ಯರ ದುರಂಹಕಾರಿ ವರ್ತನೆಗೆ ಸ್ವಾಭಿಮಾನಿ ಅಧಿಕಾರಿ ಸ್ವಯಂನಿವೃತ್ತಿಗೆ ನಿರ್ಧಾರವಂತೆ!

ಕಾನೂನು

ತಕ್ಷಣ ಭೂಸ್ವಾಧೀನ ಕಾನೂನು ಹಿಂಪಡೆಯಿರಿ: ಸಿಎಂಗೆ ಪಂಡಿತಾರಾಧ್ಯ ಶ್ರೀಗಳ ಬಹಿರಂಗ ಮನವಿ

ಜುಲೈ 5ಕ್ಕೆ ಸಿದ್ಧಣ್ಣ ಜನುಮದಿನ: ಸರ್ವ ಜನಾಂಗದ ಪ್ರೀತಿಯ ಸರದಾರ.. ಬಿಜೆಪಿ ಕಟ್ಟಾಳು, ನಿಷ್ಠಾವಂತ ಡಾ. ಜಿ.ಎಂ. ಸಿದ್ದೇಶ್ವರ: ಬಾಡದ ಆನಂದರಾಜ್

ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ, ಈ ರಾಶಿಯ ದಂಪತಿಗಳಿಗೆ ಎಲ್ಲಾ ಇದ್ದರೂ ಮನಶಾಂತಿ ಇಲ್ಲ

Leave a Comment