SUDDIKSHANA KANNADA NEWS/ DAVANAGERE/ DATE:31-05-2023
ಹೈದರಬಾದ್ : ಕಣ್ಣುಕುಕ್ಕುವ ಸೌಂದರ್ಯ.. ಹೈಟ್ ಆಗಿರುವ ಚೆಲುವೆ. ಅಂದಕ್ಕೆ ಮತ್ತೊಂದು ಹೆಸರು ಈ ಹೀರೋಯಿನ್. ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ತಾರೆಯ ಹಾಟ್ ಹಾಟ್ ಲುಕ್ ಈಗ ಯುವಕರ ಎದೆಗೆ ಕಿಚ್ಚು ಹಚ್ಚುತ್ತಿವೆ.
ಅಂದ ಹಾಗೆ ಈ ಮನಮೋಹಕ ತಾರೆಯೇ ಪೂಜಾ ಹೆಗ್ಡೆ (POOJA HEGDE). ಭಾರತೀಯ (INDIAN) ರೂಪದರ್ಶಿಯಾಗಿ ಹೆಸರು ಮಾಡಿರುವುದಲ್ಲದೇ, ಸಿನಿಮಾ ಜಗತ್ತಿನಲ್ಲಿ ಈಗ ಎಲ್ಲಾ ನಿರ್ದೇಶಕರ ಫೇವರಿಟ್ ಹೀರೋಯಿನ್ ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ನಟಿ. ಲಾಕ್ ಡೌನ್ ಬಳಿಕ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಫೋಟೋ ಶೂಟ್ ಮಾಡಿಸಿರುವ ಪೂಜೆ ಹೆಗ್ಡೆ ಫೋಸ್ ಗಳು ಸಿನಿರಸಿಕರ ಗಮನ ಸೆಳೆಯುತ್ತಿವೆ.
2009 ರಲ್ಲಿ ಮಿಸ್ ಇಂಡಿಯಾ (MISS INDIA) ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಆದರೆ ಮಿಸ್ ಇಂಡಿಯಾ ಟ್ಯಾಲೆಂಟೆಡ್ 2009 ಗೌರವ ಸಿಕ್ರೂ ಆರಂಭಿಕ ಸುತ್ತಿನಲ್ಲಿ ಹೊರಬಿದ್ದಿದ್ದು ಬೇಸರ ತರಿಸಿತ್ತು. ಛಲ ಬಿಡದೇ 2010 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ (INDIA)ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ (RUNNER UP) ಆಗಿದ್ದ ಪೂಜಾ (POOJA)ಅವರು 2012 ರಲ್ಲಿ ಮಿಸ್ಕಿನ್ ಅವರ ತಮಿಳು ಸೂಪರ್ ಹೀರೋ ಚಿತ್ರ ಮುಗಮುಡಿ ನಟನೆ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು.
ಬಳಿಕ ತೆಲುಗಿನ ಓಕೆ ಲೈಲಾ ಕೋಸಮ್ ಮತ್ತು ಮುಕುಂದ ಸಿನಿಮಾಗಳು ಪೂಜಾ ಹೆಗ್ಡೆಗೆ ಹೆಸರು ತಂದುಕೊಟ್ಟ ಸಿನಿಮಾಗಳು. ಈಕೆಯ ಗ್ಲಾಮರ್ ಗೆ ತೆಲುಗು ಸಿನಿ ಅಭಿಮಾನಿಗಳು ಫಿದಾ ಆದರು. ಆ ನಂತರ ಹೃತಿಶ್ ಗೋವಾರಿಕರ್ ಅವರ ಮೊಹೆಂಜೊದಾರೊ ಚಿತ್ರದಲ್ಲಿ ಹೃತಿಕ್ ರೋಷನ್ ಅವರೊಂದಿಗೆ ಪ್ರಮುಖ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ
ಬಾಲಿವುಡ್ ನಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾದ್ರು.
ಪೂಜಾ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ಆದ್ರೆ, ಆಕೆ ಪೋಷಕರು ಮಂಗಳೂರಿನವರು. ಮಂಜುನಾಥ್ ಹೆಗ್ಡೆ ಮತ್ತು ಲತಾ ಹೆಗ್ಡೆ ಕರ್ನಾಟಕದ ಮಂಗಳೂರಿನಿಂದ ಮುಂಬೈಗೆ ತೆರಳಿ ಅಲ್ಲೇ ನೆಲೆಸಿದವರು. ಪೂಜಾ ಹೆಗ್ಡೆ ಮಾತೃಭಾಷೆ ತುಳು. ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಯನ್ನು ಮಾತನಾಡುವ ಈ ಹೀರೋಯಿನ್ ಎಂ.ಎಂ.ಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅಂತರ್ ಕಾಲೇಜುಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಾಕೆ. ನೃತ್ಯ ಮತ್ತು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ ಅಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು.
ನಾಗಚೈತನ್ಯ ಜೊತೆ ನಟಿಸಿದ ತೆಲುಗು ಸಿನಿಮಾ ಒಕಾ ಲೈಲಾ ಕೋಸಮ್ ಬಳಿಕ ಹಿಂದುರಿಗಿ ನೋಡಲಿಲ್ಲ. ಒಂದರ ಮೇಲೊಂದರಂತೆ ಆಫರ್ ಗಳು ಬರತೊಡಗಿದವು. 62 ನೇ ಫಿಲ್ಮ್ ಫೇರ್ ಅತ್ಯುತ್ತಮ ನಟಿಯಾಗಿ ನಾಮನಿರ್ದೇಶನಗೊಂಡು ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿದ್ರು. ತನ್ನ ಎರಡನೇ ತೆಲುಗು ಚಿತ್ರದಲ್ಲಿ ಹೆಗ್ಡೆ ಮುಕುಂದ ಅವರ ಗೋಪಿಕಮ್ಮ ಹಾಡಿನಲ್ಲಿ ಅವರ ಸ್ಮರಣೀಯ ಅಭಿನಯದಿಂದ ಅನೇಕರನ್ನು ಮೆಚ್ಚಿಸಿದರು.
ತನ್ನ ಹಿಂದಿ ಚಿತ್ರ ಬಿಡುಗಡೆಯಾಗುವವರೆಗೂ ಪ್ರಾದೇಶಿಕ ಭಾರತೀಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳುವುದಾಗಿ ಬಹಿರಂಗವಾಗಿ ಹೇಳಿದ ಪೂಜಾ ಹೆಗ್ಡೆ, ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ತಿರಸ್ಕರಿಸಿದಳು. ಒಟ್ಟಿನಲ್ಲಿ ಮಂಗಳೂರಿನ ಬೆಡಗಿ ಈಗ ಕಾಲಿವುಡ್, ಬಾಲಿವುಡ್, ಟಾಲಿವುಡ್ ನಲ್ಲಿ ಅತ್ಯಂತ ಬೇಡಿಕೆಯ ನಟಿಯೂ ಹೌದು.