ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹಸೆಮಣೆ ಏರಲಿರುವ ಡಾಲಿ ಧನಂಜಯ್ ಭಾವಿ ಪತ್ನಿ ಧನ್ಯತಾ ಜೊತೆ ಸಿರಿಗೆರೆ ಶ್ರೀ ಭೇಟಿ ಮಾಡಿದ್ಯಾಕೆ?

On: December 22, 2024 5:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-12-2024

ಡಾಲಿ ಧನಂಜಯ್. ಖ್ಯಾತ ನಟ ಮದುವೆಗೆ ಇನ್ನೂ ಕೆಲವೇ ದಿನಗಳು ಬಾಕಿ. ಕನ್ನಡ, ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ನಟಿಸಿ ನಟ ಭಯಂಕರ ಎನಿಸಿಕೊಂಡಿರುವ ಡಾಲಿ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ.

ಚಿತ್ರದುರ್ಗದ ವೈದ್ಯೆ ಧನ್ಯತಾ ಜೊತೆ ವಿವಾಹ ಬಂಧನಕ್ಕೊಳಗಾಗಲಿರುವ ಡಾಲಿ ಧನಂಜಯ್ ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಖ್ಯಾತನಾಮರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಸ್ವತಃ ಭಾವಿ ಪತ್ನಿ
ಜೊತೆ ಹೋಗುತ್ತಿರುವ ಡಾಲಿ ಧನಂಜಯ್ ಈಗ ಬೆಂಗಳೂರಿನಲ್ಲಿ ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದು ಮದುವೆ ಆಮಂತ್ರಣ ನೀಡಿದ್ದಾರೆ.

ಬೆಂಗಳೂರಿನ ಆರ್ ಟಿ ನಗರದ ತರಳಬಾಳು ಕೇಂದ್ರದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಖ್ಯಾತ ನಟ ಡಾಲಿ ಧನಂಜಯ್ ಭಾವಿ ತಮ್ಮ ಪತ್ನಿ ವೈದ್ಯೆ ಧನ್ಯತಾ ರವರೊಂದಿಗೆ ಬಂದು ಮದುವೆಗೆ ಆಗಮಿಸುವಂತೆ ಭಿನ್ನವಿಸಿಕೊಂಡರು.

ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿನ ಕೈಬರಹದ ಫಾಂಟ್​ನಲ್ಲಿನ ಆಮಂತ್ರಣ ಪತ್ರಿಕೆಯ ವಿನ್ಯಾಸ ನೋಡಿ ಸಂತೋಷಪಟ್ಟ‌ ಶ್ರೀ ಜಗದ್ಗುರುಗಳವರು ಈಗೆಲ್ಲ ಬಗೆಬಗೆಯ ಮದುವೆ ಆಮಂತ್ರಣ ಪತ್ರಿಕೆಗಳು ಬಂದಿವೆ. ಎಲ್​ಇಡಿ ಹೊಂದಿರುವ ಆಮಂತ್ರಣ ಪತ್ರಿಕೆಗಳು ಸಹ ಮಾರುಕಟ್ಟೆಯಲ್ಲಿವೆ. ಪ್ರತಿ ಆಮಂತ್ರಣ ಪತ್ರಿಕೆ ಒಂದಕ್ಕೆ ಹತ್ತಾರು ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಈ ರೀತಿಯ ದುಬಾರಿ ಆಮಂತ್ರಣ ಪತ್ರಿಕೆ ಮಾಡಿಸುವುದು ಹೆಚ್ಚಿದೆ. ಡಾಲಿ ಧನಂಜಯ್-ಧನ್ಯತಾ ಬಹಳ ಸರಳವಾದ, ಕನ್ನಡತದಿಂದ ಕೂಡಿದ, ಸುಂದರವಾದ ಆಮಂತ್ರಣ ಪತ್ರಿಕೆಯ ಆಯ್ಕೆ ನೋಡಿದರೆ 70-80ರ ದಶಕಕ್ಕೆ ಹೋದಂತೆ ಭಾಸವಾಗುತ್ತದೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.

ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 16ರ ಭಾನುವಾರ ಬೆಳಿಗ್ಗೆ 8:30ಕ್ಕೆ ನಡೆಯಲಿದೆ. ಆರತಕ್ಷತೆ ಅದೇ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 15ರ ಸಂಜೆ 6 ಗಂಟೆಗೆ ನಡೆಯಲಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment