SUDDIKSHANA KANNADA NEWS/ DAVANAGERE/ DATE_08-07_2025
ದಾವಣಗೆರೆ: ಕೇಂದ್ರ ಸಚಿವರಾಗಲು ಯಾರು ಕಾರಣ ಎಂಬ ರಹಸ್ಯವನ್ನು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಬಹಿರಂಗಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಸಿದ್ದೇಶ್ವರ ಅವರು ಕೇಂದ್ರದ ಮಾಜಿ ಸಚಿವ ಹಾಗೂ ದಿವಂಗತ ಅನಂತ್ ಕುಮಾರ್ ಅವರ ಸಹಾಯ ನೆನಪು ಮಾಡಿಕೊಂಡಿದ್ದಾರೆ.
READ ALSO THIS STORY: ಯಡಿಯೂರಪ್ಪರಿಂದ 1 ಸಾವಿರ ರೂಪಾಯಿ ಸ್ವಂತಕ್ಕೆ ಕೆಲಸ ಮಾಡಿಸಿಕೊಂಡಿದ್ದರೆ ರಾಜಕೀಯ ನಿವೃತ್ತಿ: ಸಿಡಿದೆದ್ದ ಜಿ.ಎಂ. ಸಿದ್ದೇಶ್ವರ!
ನಗರದ ಅಭಿನವ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಪಷ್ಟ ಬಹುಮತ ಬಂದಿತ್ತು. ಆಗ ನರೇಂದ್ರ ಮೋದಿ ಅವರು ಅಧಿಕಾರ ತೆಗೆದುಕೊಳ್ಳುವ ಮುನ್ನ ಕರೆ ಮಾಡಿ ಯಡಿಯೂರಪ್ಪನವರಿಗೆ ಕೇಳಿದರು. ಜಿ. ಎಂ. ಸಿದ್ದೇಶ್ವರ ಮಾಡಬೇಕೆಂದು ಯಡಿಯೂರಪ್ಪ ಅವರು ಹೇಳಿದ್ದು ಸತ್ಯ. ನನಗೂ ಹುಚ್ಚರಾಯಸ್ವಾಮಿ ಮಠಕ್ಕೆ ಕರೆಯಿಸಿಕೊಂಡು ಕೇಂದ್ರ ಸಚಿವರಾಗುತ್ತೀರಾ ಎಂದು ಹೇಳಿದ್ದರು. ನಾನೂ ಪತ್ನಿಯನ್ನೂ ಕರೆದುಕೊಂಡು ನವದೆಹಲಿಗೆ
ಹೋಗಿದ್ದೆ. ಅನಂತ ಕುಮಾರ್ ಅವರಿಗೆ ಹೇಳಿಬರ್ತೇನೆಂದು ದೆಹಲಿಯಲ್ಲಿ ಹೇಳಿದೆ. ಆಗ ಯಡಿಯೂರಪ್ಪ ಅವರಿಗೇನೂ ಹೇಳ್ತೀಯಾ ಬಾ ಎಂದಿದ್ರು ಎಂದು ನೆನಪು ಮಾಡಿಕೊಂಡರು.
ದೆಹಲಿಯಲ್ಲಿದ್ದಾಗ ಯಡಿಯೂರಪ್ಪರ ಗನ್ ಮ್ಯಾನ್ ಕೇಶವ ಅಲ್ಲಿನ ಮನೆಗೆ ಬಂದ. ಸಾಹೇಬ್ರು ಕರೆ ಮಾಡುತ್ತಿದ್ದಾರೆ, ಆದಷ್ಟು ಬೇಗ ಫೋನ್ ಮಾಡುವಂತೆ ಹೇಳಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಆತನ ಮೊಬೈಲ್ ನಿಂದಲೇ ಕರೆ ಮಾಡಿದಾಗ ಮಂತ್ರಿಯಾಗಲ್ಲ, ಮುಂದಿನ ಬಾರಿ ಮಾಡುತ್ತಾರೆ ಎಂದರು. ಎಲ್ಲರಿಗೂ ಹೇಳಿದ್ದೇನೆ, ಸಿರಿಗೆರೆ ಗುರುಗಳೂ ಸೇರಿದಂತೆ ಕ್ಷೇತ್ರದ ಮುಖಂಡರು, ಸಂಬಂಧಿಕರೂ ಹೇಳಿದ್ದೆ. ಪ್ರಹ್ಲಾದ್ ಜೋಶಿಯವರು ಅಲ್ಲೇ ಓಡಾಡುತ್ತಿದ್ದರು. ಅವರ ಜೊತೆ ನಾನೂ ಇದ್ದೆ. ಮಂತ್ರಿ ಸ್ಥಾನ ನೀಡುತ್ತೇವೆಂದು ಹೇಳಿದ್ದಕ್ಕೆ ಬಂದಿದ್ದೇವೆ. ಮಂತ್ರಿ ಮಾಡಿ ಸರ್ ಎಂದೆ. ಮಂತ್ರಿ ಮಾಡಲ್ಲ, ಸುಳ್ಳು ಹೇಳಿದ್ದಾರೆ ಎಂದು ನಾನು ಸುಮ್ಮನಾದೆ ಎಂದರು.
ಅನಂತಕುಮಾರ್ ಅವರಿಗೆ ಸಚಿವರನ್ನಾಗಿಸುತ್ತೇವೆಂದು ಕರೆಯಿಸಿ ಈಗ ಇಲ್ಲ ಎಂದರೆ ಹೇಗೆ ಎಂದು ಕೇಳಿದೆ. ಅದಕ್ಕವರು ಊಟ ಮಾಡಿ ಆಮೇಲೆ ಮಾತನಾಡೋಣ ಎಂದರು. ಅದರಂತೆ ಸುಮ್ಮನೆ ಆದೆ. ಆದ್ರೆ, ಮಾರನೇ ದಿನ ಬೆಳಿಗ್ಗೆ ಏಳೂವರೆ ಗಂಟೆಗೆ ನರೇಂದ್ರ ಮೋದಿ ಅವರು ಕರೆ ಮಾಡಿದರು. ಪ್ರಮಾಣ ವಚನ ಸ್ವೀಕರಿಸಲು ಸಂಜೆ ಬನ್ನಿ ಎಂದರು. ಕರ್ನಾಟಕ ಭವನಕ್ಕೆ ಹೋದೆ. ಆಗ ಯಡಿಯೂರಪ್ಪ, ಶೋಭಕ್ಕ ಮತ್ತಿತರರು ಇದ್ದರು. ಉತ್ತರ ಪ್ರದೇಶ ಭವನಕ್ಕೆ ಬರಲು ಹೇಳಿದ್ದಾರೆ. ಮೋದಿ ಅವರು ಫೋನ್ ಮಾಡಿದ್ದಾರಾ ಎಂದರು. ಹೌದು ಎಂದಿದ್ದೆ. ಉತ್ತರ ಪ್ರದೇಶ ಭವನಕ್ಕೆ ಹೋದಾಗ ಕೇವಲ ಯಾರೋ ಒಬ್ಬರು ಕುಳಿತಿದ್ದರು. ಆಮೇಲೆ 25 ರಿಂದ 30 ಸಂಸದರು ಬಂದರು. ಸಂಜೆ ಭ್ರಷ್ಟಾಚಾರ ರಹಿತ ಶಪಥ ಮಾಡಿ ಎಂದು ಮೋದಿ ಹೇಳಿ ಹೋದರು ಎಂದು ನೆನಪು ಮಾಡಿಕೊಂಡರು.
ಈಗ ಯಾರು ನನ್ನನ್ನು ಮಂತ್ರಿ ಮಾಡಿದರು ಎಂದುಕೊಳ್ಳುತ್ತೀರಾ. ನಾನು ತಿಳಿದುಕೊಂಡಿದ್ದು ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಇಬ್ಬರೂ ಸೇರಿ ಕೇಂದ್ರ ಸಚಿವರನ್ನಾಗಿ ಮಾಡಿದರು ಎಂದು. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಈ ವಿಚಾರ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.