ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕುತ್ತಿಗೆ ಮೇಲೆ ಗಾಯಗಳ ಗುರುತು… ಶರ್ಟ್ ಹರಿತ… ತಳ್ಳಾಟ… ನೂಕಾಟ… ವಾಗ್ವಾದ… “ಭದ್ರಾ ಜ್ವಾಲೆ” ಹೇಗಿತ್ತು?

On: June 25, 2025 11:07 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-25-06-2025

ದಾವಣಗೆರೆ: ಕುತ್ತಿಗೆ ಮೇಲೆ ಗಾಯದ ಗುರುತುಗಳು… ಶರ್ಟ್ ಹರಿತ.. ರಸ್ತೆಯಲ್ಲೇ ಕುಳಿತು ಆಕ್ರೋಶ… ತಳ್ಳಾಟ.. ನೂಕಾಟ… ವಾಗ್ದಾದ.. ಬಂಧನ.. ಬಿಡುಗಡೆ… ಇದು ಇಂದು ನಡೆದ ಭದ್ರಾ ಹೋರಾಟದ ಜ್ವಾಲೆಯ ಕೆಲ ಸ್ಯಾಂಪಲ್.

ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ದಂಡೆಯ ಕಾಲುವೆಯನ್ನು ಸೀಳಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಹರಿಸಲು ಮುಂದಾಗಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಸಂಘಟನೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಶನಿವಾರ ಜಿಲ್ಲಾ ಬಂದ್ ಗೆ ಕರೆಕೊಟ್ಟಿವೆ.

ಹೈಡ್ರಾಮಾ: 

ಇದಕ್ಕೂ ಮುನ್ನ ಇಂದು ಬಾಡಾ ಕ್ರಾಸ್ ಬಳಿ ರೈತ ಸಂಘಟನೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಾಡಾ ಕ್ರಾಸ್ ಬಳಿ ಹೆದ್ದಾರಿ ಕ್ರಾಸ್ ತಡೆಗೆ ಮುಂದಾಗಿದ್ದಾರೆ. ಇಲ್ಲಿ ಹೈಡ್ರಾಮಾವೇ ನಡೆದು ಹೋಯ್ತು.

ರೇಣುಕಾಚಾರ್ಯ ಅವರನ್ನು ಪೊಲೀಸರು ಎತ್ತಿ ಹಾಕಿಕೊಂಡು ಹೋದರು. ಶುಕ್ರವಾರ ಲಕ್ಜವಳ್ಳಿ ಸಮೀಪ ಭದ್ರಾ ಜಲಾಶಯದ ಬಳಿ ಇರುವ ಅಪೂರ್ವ ಹೊಟೇಲ್ ಹತ್ತಿರ ರೈತ ಸಂಘಟನೆಯ ಮುಖಂಡರು,
ಸಾವಿರಾರು ರೈತರು, ಬಿಜೆಪಿಯ ಹಲವಾರು ಪ್ರಮುಖರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಪ್ರತಿಭಟಿಸಿದ್ದರು.

ನೂರಾರು ರೈತರೊಂದಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜ್ ನಾಯ್ಕ್, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಯುವ ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ‌.ಜಿ ಅಜಯ್ ಕುಮಾರ್,ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಕೊಳೇನಹಳ್ಳಿ ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ,ಹರಿಹರ ರೈತ ಮುಖಂಡರಾದ ಪೂಜಾರ್ ಚಂದ್ರಶೇಖರ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಡ್ಲೆಬಾಳು ಧನಂಜಯ್ ,ಅನಿಲ್ ನಾಯಕ್, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಶಿವಪ್ರಕಾಶ್ ನಾಯಕ್,ಅಲೂರು ಲಿಂಗರಾಜ್ , ರೈತ ಮುಖಂಡರಾದ ನಾಗೇಶ್ವರ ರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದು ಹೆದ್ದಾರಿ ತಡೆ ಹೆಚ್ಚು ಹೊತ್ತು ನಡೆಸಲು ಪೊಲೀಸರು ಬಿಡಲಿಲ್ಲ. ಆಗ ರೇಣುಕಾಚಾರ್ಯ ಮತ್ತು ಎಎಸ್ಪಿ ಜೊತೆ ವಾಗ್ವಾದವೂ ನಡೆಯಿತು. ಅಂತಿಮವಾಗಿ ಹೋರಾಟಗಾರರನ್ನು ಬಂಧಿಸಿ, ದಾವಣಗೆರೆಯ ಡಿ. ಆರ್. ಗ್ರೌಂಡ್ ಗೆ ಕರೆದುಕೊಂಡು ಬರಲಾಯಿತು.

ಹೆದ್ದಾರಿ ಬಂದ್ ವೇಳೆ ವಾಗ್ವಾದ: 

ಹೆದ್ದಾರಿ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕನಿಷ್ಠ ಪಕ್ಷ ಮುನ್ಸೂಚನೆಯನ್ನು ಕೊಡದೆ ಪೊಲೀಸರು ದಿಢೀರನೆ ಬಂಧಿಸಲು ಮುಂದಾಗುತ್ತಿದ್ದಂತೆ ರೈತರ ಸಹನೆ ಕಟ್ಟೆಯೊಡೆಯಿತು. ಪೊಲೀಸರ ದೌರ್ಜನ್ಯದ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾ ನಿರತರು, ನ್ಯಾಯಾ ಸಿಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಡು ಹಿಡಿದ ಕಾರಣ , ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಯಿತು.

ಈ ಯೋಜನೆಯನ್ನು ಸ್ಥಗಿತ ಮಾಡುವವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಂದು ತಮ್ಮ ಮನವಿ ಪತ್ರವನ್ನು ಸ್ವೀಕರಿಸಬೇಕು ಎಂದು
ಒತ್ತಾಯಿಸಿದರು. ಕೊನೆಗೆ ಪೊಲೀಸರು ಪ್ರತಿಭಟನಗಾರರನ್ನು ಬಂಧಿಸಿ. ಈ ಹಂತದಲ್ಲಿ ತಳ್ಖಾಟ ನಡೆದು ಕೆಲವು ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.

ಕಾಮಗಾರಿ ಅವೈಜ್ಞಾನಿಕ: 

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಭದ್ರಾ ಬಲದಂಡೆ ಕಾಲುವೆಯಿಂದ ಮೂರು ತಾಲೂಕುಗಳ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರನ್ನು ಒಯ್ಯಲು ಸಿದ್ಧತೆ ನಡೆದಿದೆ. ಈ ಯೋಜನೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಭದ್ರೆಯ ರೈತ ಮಕ್ಕಳು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ತಾಲೂಕುಗಳ ಪೈಕಿ 1200 ಹಳ್ಳಿಗಳಿಗೆ ಜೆಜೆಎಂ ಯೋಜನೆ ಅಡಿ ಕುಡಿಯುವ ನೀರಿಗಾಗಿ ಈ ಯೋಜನೆ ಮಾಡಲಾಗಿದೆ. ಅಲ್ಲದೆ ಭದ್ರಾ ಬಲದಂಡೆ ಕಾಲುವೆ ಸೀಳಿ ಕಾಮಗಾರಿ ಕೂಡ ಆರಂಭ ಆಗಿದೆ. ಈ ಯೋಜನೆ ಪೂರ್ಣಗೊಂಡು ಮೂರು ತಾಲೂಕುಗಳಿಗೆ ನೀರು ಹರಿದರೆ ದಾವಣಗೆರೆ ರೈತರಿಗೆ ಸಮಸ್ಯೆ ಎದುರಾಗಲಿದೆ. ದಾವಣಗೆರೆ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಕಷ್ಟಕರ ಆಗಲಿದೆ ಎಂದು ದಾವಣಗೆರೆ ರೈತರು ಆತಂಕ ವ್ಯಕ್ತಪಡಿಸಿದರು.

ಶನಿವಾರ ದಾವಣಗೆರೆ ನಗರ ಬಂದ್: 

ಬೆಳೆಗಳಿಗೆ ನೀರಿಗಾಗಿ ಹಾಹಾಕಾರ ಉಂಟಾಗಿರುವ ಸಮಯದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ರೈತರಿಗೆ ನೀರು ಸಿಗದೇ ಪರದಾಡುವಂಥ ಪರಿಸ್ಥಿತಿ ಉಂಟಾಗುತ್ತದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ರೈತರ ಒಕ್ಕೂಟದಿಂದ ಶನಿವಾರ ದಾವಣಗೆರೆ ಬಂದ್​ಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ಈ ಕಾಮಗಾರಿ ಬಫರ್ ಜೋನ್​ನಲ್ಲಿ ನಡೆಯುತ್ತಿದ್ದು, ಡ್ಯಾಮ್​ಗೂ ಅಭದ್ರತೆ ಕಾಡುತ್ತಿದೆ. ಅದರಲ್ಲೂ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪ್ರತ್ಯೇಕವಾಗಿ ಡ್ಯಾಮ್​ನಿಂದಲೇ ಮಾಡಬೇಕೇ ವಿನಃ, ದಾವಣಗೆರೆ
ಜಿಲ್ಲೆಗೆ ಪೂರೈಕೆ ಆಗುತ್ತಿರುವ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿನ ಕಾಮಗಾರಿ ನಡೆಸುವುದು ಎಷ್ಟು ಸರಿ’ಎಂದು ರೈತರು ಪ್ರಶ್ನಿಸಿದ್ದಾರೆ. ಬಲದಂಡೆ ನಾಲೆಯಿಂದ ಕಾಮಗಾರಿಗೆ ಹಾಕುವ ಪೈಪ್​ 8 ಅಡಿ ಕೆಳಗೆ ಅಳವಡಿಸಿರುವುದು ಎಷ್ಟರ ಮಟ್ಟಿಗೆ ಸರಿ‌ ಎಂದು ಪ್ರಶ್ನಿಸಿದರು.

ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಭದ್ರಾ ಅಚ್ಚುಕಟ್ಟು ಪ್ರದೇಶ: ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಒಟ್ಟು ಒಂದೂವರೆ ಲಕ್ಷ ಪ್ರದೇಶಕ್ಕೆ ಈ ಭದ್ರಾ ನೀರು ಉಪಯೋಗ ಆಗಲಿದೆ. ಚನ್ನಗಿರಿ, ಹರಿಹರ, ದಾವಣಗೆರೆ ತಾಲೂಕಿನ ರೈತರಿಗೆ ಭದ್ರಾ ನೀರು ಆಸರೆಯಾಗಿದೆ. ಈ ನೀರಿನಲ್ಲಿ ಅಡಿಕೆ, ಭತ್ತ ಅತೀ ಹೆಚ್ಚು ಬೆಳೆಯಲಾಗುತ್ತದೆ ಎಂದರು.

ಬಲದಂಡೆ ಹೊಡೆದುಹಾಕಿದ್ದರಿಂದ ದಾವಣಗೆರೆ ಭಾಗಕ್ಕೆ ನೀರು ಹರಿಯುವುದಿಲ್ಲ. ಇನ್ನು ಇಲ್ಲಿಂದ 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸಿದ್ಧತೆ ನಡೆದಿದೆ. ಕಾಲುವೆ ಮೂಲಕ 3200 ಕ್ಯೂಸೆಕ್​​​ನಷ್ಟು ದಾವಣಗೆರೆಗೆ ಹರಿಸಿದ್ರು ಕೂಡ ನೀರು ಮಾತ್ರ ಕೊನೇ ಭಾಗದ ರೈತರಿಗೆ ತಲುಪುವುದು ಕಷ್ಟಕರವಾಗಿದೆ ಎಂದು‌ ಬೇಸರ ಹೊರಹಾಕಿದರು.

ಯೋಜನೆ ವಿರೋಧಿಸಿ ಶನಿವಾರ ದಾವಣಗೆರೆ ನಗರ ಬಂದ್ ಮಾಡಲಾಗುವುದು. ಬಂದ್ ವೇಳೆ ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ.ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಸಲಾಗುತ್ತದೆ. ಜಿಲ್ಲೆಯ
ಸಾವಿರಾರು ರೈತರು ಪಕ್ಷ ಬೇಧ ಮರೆತು ಇದಕ್ಕೆ ಸಹಕಾರ ನೀಡುವಂತೆ ರೇಣುಕಾಚಾರ್ಯ ಅವರು ಮನವಿ ಮಾಡಿಕೊಂಡರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment

Click it!
Close