SUDDIKSHANA KANNADA NEWS/ DAVANAGERE/ DATE:28-08-2023
ದಾವಣಗೆರೆ: ಬಿಪಿಎಲ್ (BPL) ಕಾರ್ಡ್ ಪಡೆಯಲು ಇರುವ ಮಾನದಂಡಗಳ ಬಗ್ಗೆ ಎಲ್ಲರಿಗೂ ಅನುಮಾನ ಇದ್ದೇ ಇರುತ್ತೆ. ಆದ್ರೆ, ಸರ್ಕಾರದ ನಿಯಮಾವಳಿ ಪ್ರಕಾರ ಅರ್ಜಿ ಸಲ್ಲಿಸಬೇಕು. ಎಷ್ಟೋ ಮಂದಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ಸಿಕ್ಕಿದ್ದರೆ, ಮತ್ತೆ ಕೆಲವರಿಗೆ ಸಿಕ್ಕಿಲ್ಲ. ಹಾಗಾಗಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಹವಣಿಸುತ್ತಿದ್ದಾರೆ.
ಬಿಪಿಎಲ್ (BPL) ಕಾರ್ಡ್ ಗೆ ಮಾನದಂಡವೇನು….?
ವಾರ್ಷಿಕ ಆದಾಯ ರೂ.1.20 ಲಕ್ಷ ರೂ. ಇರಬೇಕು. ಆದಾಯ ತೆರಿಗೆದಾರರಾಗಿರಬಾರದು, ಸರ್ಕಾರಿ, ನಿಗಮ, ಮಂಡಳಿ ನೌಕರರಾಗಿರಬಾರದು. ಮತ್ತು 7 ಎಕರೆಗಿಂತ ಹೆಚ್ಚು ಖುಷ್ಕಿ ಜಮೀನು ಹೊಂದದೇ, ನಾಲ್ಕು ಚಕ್ರದ ವಾಹನ ಸೇರಿ ಇತರೆ ಹೆಚ್ಚಿನ ಸಾಮರ್ಥ್ಯ ವಾಹನ ಹೊಂದಿರಬಾರದು.
ಎಷ್ಟು ಬಿಪಿಎಲ್ (BPL), ಎಪಿಎಲ್..?
ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿದಾರರು 45659, ಬಿಪಿಎಲ್ 331837 ಕಾರ್ಡ್‍ಗಳು ಮತ್ತು 45712 ಎಪಿಎಲ್ ಕಾರ್ಡ್‍ಗಳಿದ್ದು 719 ನ್ಯಾಯಬೆಲೆ ಅಂಗಡಿಗಳಿವೆ. ಎಎವೈಗೆ 21 ಕೆಜಿ ಅಕ್ಕಿ, 14 ಕೆಜಿ ರಾಗಿ ಸೇರಿ 35 ಕೆ.ಜಿ.ಆಹಾರಧಾನ್ಯ ನೀಡಲಾಗುತ್ತಿದೆ. ಬಿಪಿಎಲ್‍ಗೆ ಪ್ರತಿ ಸದಸ್ಯರಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಉಚಿತವಾಗಿ ನೀಡಿ 5 ಕೆ.ಜಿ ಅಕ್ಕಿಯ ಹಣವನ್ನು ನಗದಾಗಿ ಅವರ ಖಾತೆಗೆ ಪ್ರತಿಯೊಬ್ಬ ಸದಸ್ಯರಿಗೆ ರೂ.170 ರಂತೆ ಜಮಾ ಮಾಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:
G. M. Siddeshwara: ಅವ್ರೇನೋ ಹೇಳ್ತಾರೆ, ನಾನೇನೋ ಹೇಳ್ತೀನಿ.. ನೀವೇನೋ ಸುದ್ದಿ ಮಾಡ್ತೀರಾ… ತಿಕ್ಕಾಟ ಬೇಡ್ವೇ ಬೇಡ: ಸಂಸದ ಜಿ. ಎಂ. ಸಿದ್ದೇಶ್ವರ
ಜುಲೈನಲ್ಲಿ 288207 ಕಾರ್ಡ್‍ನ 1032982 ಜನರಿಗೆ 16.67 ಕೋಟಿ ಜಮಾ ಮಾಡಲಾಗಿದೆ. ಆಗಸ್ಟ್ ನಲ್ಲಿ 306418 ಕಾರ್ಡ್‍ನ 1112634 ಜನರಿಗೆ ಸುಮಾರು 17.77 ಕೋಟಿ ಹಣವನ್ನು ಜಮಾ ಮಾಡಲು ಅನುದಾನ ಬಿಡುಗಡೆಯಾಗಿದೆ.
ಎಷ್ಟು ಮಂದಿಗೆ ಸಿಕ್ಕಿಲ್ಲ ಹಣ..?
ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದ 840, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೇ ಇರುವ 671, ಬ್ಯಾಂಕಿಂಗ್ ಇ.ಕೆವೈಸಿ ಪೂರ್ಣಗೊಳಿಸದ 9260, ಕಳೆದ ಮೂರು ತಿಂಗಳಿನಿಂದ ಪಡಿತರ ಪಡೆಯದೇ ಇರುವ 14137 ಮತ್ತು ಬ್ಯಾಂಕ್
ಖಾತೆ ಹೊಂದದೇ ಇರುವ 170 ಕಾರ್ಡ್‍ದಾರರಿಗೆ ಡಿಬಿಟಿ ಮೂಲಕ ನಗದು ಹಣವನ್ನು ಪಾವತಿಸಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು, ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಆಧಾರ್ ತಿದ್ದುಪಡಿ, ಇ.ಕೆವೈಸಿ ಮಾಡಿಸಿ ಉಳಿದ ಫಲಾನುಭವಿಗಳಿಗೂ ನಗದು ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.