SUDDIKSHANA KANNADA NEWS/ DAVANAGERE/ DATE:03-06-2023
ಬೆಂಗಳೂರು (BANGALORE): ಪೊಲೀಸ(POLICE)ರ ಕೆಲಸ ಯಾವಾಗಲೂ ಬಿಡುವಿಲ್ಲದ್ದು. ಪ್ರತಿಯೊಬ್ಬರ ರಕ್ಷಣೆಗೆ ಹಗಲಿರುಳು ಕೆಲಸ ಮಾಡುತ್ತಾರೆ. ಏನೇ ಸಮಸ್ಯೆ ಎದುರಾದರೂ ಸ್ಥಳಕ್ಕೆ ಬರೋದು ಪೊಲೀಸರೇ. ಮಾತ್ರವಲ್ಲ, ರಕ್ಷಣೆ, ಬಂದೋಬಸ್ತ್, ದೊಡ್ಡ ದೊಡ್ಡ ನಾಯಕರಿಗೆ ಭದ್ರತೆ (SECUIRITY) ಒದಗಿಸುವುದೂ ಸೇರಿದಂತೆ ಸರ್ವ ರೀತಿಯಲ್ಲೂ ಸರ್ವೊತ್ತಿನಲ್ಲಿಯೂ ಕೆಲಸ ಮಾಡುವವರೆಂದರೆ ಅದೂ ಪೊಲೀಸರು ಮಾತ್ರ. ಆದ್ರೆ, ಇವರ ಕಷ್ಟ ಒಂದೆರಡಲ್ಲ. ಅದನ್ನು ಕೇಳುವ ವ್ಯವಧಾನವೂ ಸರ್ಕಾರಕ್ಕಿಲ್ಲ ಎಂಬ ಬೇಸರ ಮೊದಲಿನಿಂದಲೂ ಇದೆ.
ಆದ್ರೆ, ಇದೀಗ ಪಿಎಸ್ಐ((PSI)ಗಳು ಸರ್ಕಾರದ ಮುಂದೆ ಹೊಸ ಪ್ರಸ್ತಾಪ ಇಟ್ಟಿದ್ದಾರೆ. ಅದು ಏನೆಂಬುದು ಎಲ್ಲರ ಕುತೂಹಲ. ಕಳೆದ ಕೆಲ ವರ್ಷಗಳ ಹಿಂದೆ ಪೊಲೀಸರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿತ್ತು.
ಹೋರಾಟ ಹತ್ತಿಕ್ಕಲು ಸರ್ಕಾರವೂ ಹೆಣಗಾಡಿತ್ತು. ಇದು ಹಳೆಯ ವಿಚಾರ.
ಪಿಎಸ್ಐ (PSI)ಗಳು ಬರೆದಿರುವ ಪತ್ರ(LETTER)ದಲ್ಲಿ ಏನಿದೆ…?
ಮಾನ್ಯರೆ, ಕರ್ನಾಟಕ ರಾಜ್ಯದಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಕಾಂಗ್ರೆಸ್ (CONGRESS)ಸರ್ಕಾರ ಇದೀಗ ಅಧಿಕಾರಕ್ಕೆ ಬಂದಿರುತ್ತದೆ. ಹಾಗೆಯೇ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ (LAW AND ORDER) ಕಾಪಾಡುವಲ್ಲಿ ರಾಜ್ಯ ಪೊಲೀಸರ ಪಾತ್ರ ಮಹತ್ವದ್ದಾಗಿರುತ್ತದೆ . ತಳ ಹಂತದಲ್ಲಿ ಕರ್ತವ್ಯ ನಿರ್ವಹಿಸುವ ಸಿ ವೃಂದದ ಕೆಲವು ಅಧಿಕಾರಿಗಳು ಹಲವಾರು ವರ್ಷಗಳ ಕಾಲ ಒಂದೇ ಜಿಲ್ಲೆ ಅಥವಾ ವಲಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಕಾರಣ ಅವರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವುದು ಕಷ್ಟ ಸಾಧ್ಯವಾಗಿರುತ್ತದೆ.
ದಕ್ಷ, ನಿಷ್ಟಾವಂತರು ಕೆಲವು ಜಿಲ್ಲೆ(DISTRICT)ಗಷ್ಟೇ ಸೀಮಿತ:
ಹಲವಾರು ದಕ್ಷ, ನಿಷ್ಠಾವಂತ ಪೊಲೀಸ್ (POLICE) ಅಧಿಕಾರಿಗಳ(OFFICERS) ಸೇವೆಯನ್ನು ಕೆಲವು ಜಿಲ್ಲೆ ಅಥವಾ ವಲಯಕ್ಕೆ ಸೀಮಿತಗೊಳಿಸಿದಂತಾಗಿದೆ . ಹಾಲಿ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ವರ್ಗಾವಣೆಗೆ ಅವಕಾಶ ಇಲ್ಲದ ಕಾರಣ ದಕ್ಷ ಸಿ – ವೃಂದದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಧಿಕಾರಿಗಳನ್ನು ಒಂದು ವಲಯದಿಂದ ಮತ್ತೊಂದು ವಲಯಕ್ಕೆ ವರ್ಗಾವಣೆ ಮಾಡಲು ಸಾದ್ಯವಿರುವುದಿಲ್ಲ.
ತೊಡಕಿರುವ ನಿಯಮ ಸರಿಪಡಿಸಿ:
ದಕ್ಷ , ಪ್ರಾಮಾಣಿಕ , ನಿಷ್ಠಾವಂತ ಹಾಗೂ ನಿಷ್ಪಕ್ಷಪಾತ ಪೊಲೀಸ್ ಅಧಿಕಾರಿ(POLICE OFFICERS)ಗಳು ಇದ್ದು ಅಂತಹವರು ಕೆಲವು ಜಿಲ್ಲೆ, ವಲಯಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಅವರುಗಳ ವರ್ಗಾವಣೆಗೆ ತೊಡಕಾಗಿರುವ ನಿಯಮಗಳನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಅವರನ್ನ ವರ್ಗಾವಣೆಗೊಳಿಸಿ ಅವರ ಸೇವೆಯನ್ನು ರಾಜ್ಯಾದ್ಯಂತ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿ ಮಾನ್ಯರಲ್ಲಿ ಕೋರಿದೆ.
ಕುಗ್ಗಿ ಹೋಗಿರುವ ಕುಟುಂಬಗಳು:
ಹಾಗೆಯೇ ಹಲವಾರು ಸಿ – ವೃಂದದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಧಿಕಾರಿಗಳು ಸೇವೆಗೆ ಸೇರಿದ ದಿನದಿಂದ ತಮ್ಮ ಕುಟುಂಬದಿಂದ ದೂರ ಬೇರೆ ಜಿಲ್ಲೆ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡದ ಕರ್ತವ್ಯದಿಂದ ತಮ್ಮ ತಂದೆ ತಾಯಿಗಳ ಮತ್ತು ಕುಟುಂಬದವರ ಯೋಗ ಕ್ಷೇಮ ವಿಚಾರಿಸಲು ಸಾಧ್ಯವಾಗದೇ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲಿ ಸಿ – ವೃಂದದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಧಿಕಾರಿಗಳಿಗೆ ಅವರ ಪ್ರೋಬೇಷನ್ ಅವಧಿ ಮುಗಿದ ಮೇಲೆ ಒಂದು ಬಾರಿಗೆ ಅನ್ವಯಿಸುವಂತೆ ಸೇವಾ ಜೇಷ್ಟತೆ ಕಳೆದುಕೊಳ್ಳದೇ ವೈಯಕ್ತಿಕ ಕೋರಿಕೆ ಮೇಲೆ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿತ್ತು.
ಜೇಷ್ಠತೆಗೆ ಧಕ್ಕೆಯಾಗದೇ ವರ್ಗಾವಣೆ ಮಾಡಿ:
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜ್ಯ ಮಟ್ಟದ ಹುದ್ದೆಯಾಗಿದ್ದು ಪಿಎಸ್‌ಐಗಳ ಕ್ರೋಢೀಕೃತ ಜೇಷ್ಟತಾ ಪಟ್ಟಿಯನ್ನು ರಾಜ್ಯ ಮಟ್ಟದಲ್ಲಿ ನಿರ್ವಹಿಸುವ ಕಾರಣ ಸೇವಾ ಜೇಷ್ಟತೆಗೆ ಧಕ್ಕೆಯಾಗದೆ ವರ್ಗಾವಣೆಗೆ ಅವಕಾಶವಿತ್ತು. ಆದರೆ ಹಿಂದಿನ ಸರ್ಕಾರ ಆ ನಿಯಮವನ್ನು ತೆಗೆದುಹಾಕಿದ್ದು ಇದರಿಂದ ರಾಜ್ಯದ ಆಂತರಿಕ ಭದ್ರತೆಯ ಹೊಣೆ ಹೊತ್ತಿರುವ ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬದ ಕಡೆ ಗಮನ ಹರಿಸಲು ಸಾಧ್ಯವಾಗದೇ ಮಾನಸಿಕ ಧೈರ್ಯ ಕಳೆದುಕೊಂಡಿದ್ದು ಕೌಟುಂಬಿಕ ತೊಂದರೆಗಳು ಉಂಟಾಗಿರುತ್ತದೆ..
ಆದ್ದರಿಂದ ಸದರಿ ನಿಯಮಕ್ಕೆ ಬದಲಾವಣೆ ಮಾಡಿ ವೈಯಕ್ತಿಕ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟು ಸೇವಾ ಜೇಷ್ಟತೆಗೆ ಧಕ್ಕೆಯಾಗದಂತೆ ವರ್ಗಾವಣೆ ಹೊಂದಲು ಈಗಾಗಲೇ 7 ವರ್ಷ ಸೇವಾವಧಿ ಪೂರ್ಣಗೊಳಿಸಿರುವ ಸಿ ವೃಂದದ ಮತ್ತು ರಾಜ್ಯ ಮಟ್ಟದಲ್ಲಿ ಕ್ರೋಡೀಕೃತ ಜೇಷ್ಟತೆಯನ್ನು ನಿರ್ವಹಿಸುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಅಧಿಕಾರಿಗಳಿಗೆ ರಾಜ್ಯದ ಯಾವುದೇ ವಲಯದ ರಿಕ್ತ ಸ್ಥಾನಕ್ಕೆ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟು ನೊಂದಿರುವ ಅಧಿಕಾರಿಗಳ ಮತ್ತು ಅವರ ಕುಟುಂಬದ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕಾಗಿ ಮಾನ್ಯರಲ್ಲಿ ಕೋರಿದೆ.
ತಮ್ಮ ವಿಧೇಯರು
ನೊಂದ ಪಿಎಸ್‌ಐಗಳು , ಕರ್ನಾಟಕ ರಾಜ್ಯ ಸರ್ಕಾರ
ಈ ಪತ್ರವನ್ನು ಈಗಾಗಲೇ ಸಚಿವರು, ಶಾಸಕರು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಅವರಿಗೆ ನೀಡುವ ಕೆಲಸ ನಡೆಯುತ್ತಿದೆ. ಪೊಲೀಸರು ಸಣ್ಮದಾದ ಬೇಡಿಕೆ ಇಟ್ಟಿದ್ದು, ಈ ಹಿಂದೆ ಕಾಂಗ್ರೆಸ್ ಸರ್ಕಾರವೇ ಅನುವು ಮಾಡಿಕೊಟ್ಟಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಪೊಲೀಸ್ ಅಧಿಕಾರಿಗಳ ಕುಟುಂಬದವರು, ಸಂಬಂಧಿಕರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅನುಕೂಲವಾಗುತ್ತದೆ. ಕುಟುಂಬದವರ ಜೊತೆ ಕಳೆಯುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಸಿರುವ ಸಾಧ್ಯತೆಯೂ ಹೆಚ್ಚಿದೆ. ಹಾಗಾಗಿ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಿಎಸ್ಐಗಳಿಗೆ ನ್ಯಾಯ ಒದಗಿಸಬೇಕು ಎಂಬ ಆಗ್ರಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಬಹಿರಂಗವಾಗಿ ಆಲ್ಲದಿದ್ದರೂ ಒಳಗೊಳಗೆ ಒತ್ತಡ ಹೆೇರುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನೇತೃತ್ವದ ಸರ್ಕಾರದ ಲೋಪದೋಷ ಸರಿಪಡಿಸುವುದಾಗಿ ಹೇಳಿದೆ. ಹಾಗಾಗಿ, ಪಿಎಸ್ಐ ಗಳು ಬೇಡಿಕೆ ಈಡೇರುವ ಕುರಿತಂತೆ ಆಶಾಭಾವನೆ ಹೊಂದಿದ್ದಾರೆ.