SUDDIKSHANA KANNADA NEWS/ DAVANAGERE/ DATE:16-01-2025
ಮುಂಬೈ: ಬಾಂದ್ರಾ ಪೊಲೀಸರು ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚಾಕು ಇರಿತ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಮುಂಜಾನೆ 3.30ಕ್ಕೆ ಸೈಫ್ ಅಲಿ ಖಾನ್ ಮೇಲೆ ದಾಳಿಯಾಗಿದ್ದು, ಈ ವೇಳೆ ಮನೆಯೊಳಗೇ ಶಂಕಿತ ಇದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಮುಂಜಾನೆ 3.30 ರ ಸುಮಾರಿಗೆ ಅವರ ಮನೆಯಲ್ಲಿ ದಾಳಿ ನಡೆದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಗುರುವಾರ ಮುಂಜಾನೆ 3.30 ರ ಸುಮಾರಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ದಾಳಿ ನಡೆದಿದೆ ಎಂದು ಮುಂಬೈ ಪೊಲೀಸರು ಗುರುವಾರ ತಿಳಿಸಿದ್ದಾರೆ, ಸಿಸಿಟಿವಿಯಲ್ಲಿ ಯಾವುದೇ ವ್ಯಕ್ತಿ ಅವರ ಹೌಸಿಂಗ್ ಸೊಸೈಟಿಗೆ ಪ್ರವೇಶಿಸಿದುದನ್ನು ತೋರಿಸಿಲ್ಲ ಎಂದು ಹೇಳಿದರು.