SUDDIKSHANA KANNADA NEWS/ DAVANAGERE/ DATE:22-01-2025
ಕನ್ನಡದ ಖ್ಯಾತ ತಾರೆ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಅಂತಾನೇ ಫೇಮಸ್. ಆದ್ರೆ, ಈ ನಟಿ ಈಗ ಕುಂಟುತ್ತಾ ಕುಂಟುತ್ತಾ ಬರುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಬೆಡಗಿಗೆ ಏನಾಯ್ತು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.
ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್ ನಲ್ಲಿ ಬೇಡಿಕೆ ಇರುವ ನಟಿ. ಪುಷ್ಪ, ಪುಷ್ಪ-1ನಲ್ಲಿ ನಟಿಸುವ ಮೂಲಕ ಖ್ಯಾತಿ ಮತ್ತಷ್ಟು ಹೆಚ್ಚಿಸಿಕೊಂಡರು. ಮಹೇಶ್ ಬಾಬು, ಅಲ್ಲು ಅರ್ಜುನ್, ಕನ್ನಡದ ಧ್ರುವ ಸರ್ಜಾ, ಪುನೀತ್ ರಾಜಕುಮಾರ್
ಸೇರಿದಂತೆ ಖ್ಯಾತ ನಟರ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ ಕೊಡಗಿನ ಹುಡುಗಿ.
ದೇಹ ಸ್ಮಿಮ್ ಆಗಿ ಇಟ್ಟುಕೊಳ್ಳಲು ರಶ್ಮಿಕಾ ಮಂದಣ್ಣ ಸಾಕಷ್ಟು ವರ್ಕೌಟ್ ಮಾಡುತ್ತಾರೆ. ಅದೇ ಈಗ ಮುಳುವಾಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ನಟಿ ಕಾಲಿಗೆ ಗಾಯ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣಗೆ ನಡೆದಾಡಲು ಆಗದಷ್ಟು
ಪೆಟ್ಟಾಗಿದೆ.
ಮುಂಬೈಗೆ ತೆರಳುತ್ತಿದ್ದ ನಟಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕುಂಟುತ್ತಾ ಬಂದಿದ್ದು ಹಾಗೂ ವ್ಹೀಲ್ ಚೇರ್ ನಲ್ಲಿ ಹೋಗುವ ದೃಶ್ಯ ಸೆರೆಯಾಗಿದೆ. ಕುಂಟುತ್ತಲ್ಲೇ ಕಾರಿನಿಂದ ಇಳಿದು ರಶ್ಮಿಕಾ ಮಂದಣ್ಣ ವೀಲ್ ಚೇರ್ ಮೂಲಕ ಬಂದಿದ್ದಾರೆ.
ಹಿಂದಿ ಸಿನಿಮಾ ಪ್ರಚಾರಕ್ಕಾಗಿ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಮಾನ ನಿಲ್ದಾಣ ತಲುಪಿದ ಬಳಿಕ ಕಾರಿನಿಂದ ಇಳಿಯಲು ಹರಸಾಹಸ ಪಟ್ಟಿದ್ದಾರೆ. ಏರ್‌ಪೋರ್ಟ್‌ಗೆ ಬರಲು ಸಹಾಯವನ್ನೂ ಪಡೆದರು. ರಶ್ಮಿಕಾ ಅವರು ನಡೆಯಲು ಸಾಧ್ಯವಾಗದ ಕಾರಣ ವೀಲ್ ಚೇರ್‌ನಲ್ಲಿ ಕುಳಿತುಕೊಂಡೇ ವಿಮಾನ ನಿಲ್ದಾಣದೊಳಗೆ ಹೋದರು.
ರಶ್ಮಿಕಾ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಇದರೊಂದಿಗೆ ಗಾಯಗೊಂಡಿರುವ ವಿಚಾರವನ್ನು ವಿವರಿಸಿದ್ದರು. ಅಲ್ಲದೆ ಇದು ನನಗೆ ಹೊಸ ವರ್ಷದ ಶುಭಾಶಯಗಳು ಎಂದು ನಾನು ಊಹಿಸುತ್ತೇನೆ. ನೋವಿನಿಂದಲೇ ನನ್ನ
ಹೊಸ ವರ್ಷ ಆರಂಭವಾದಂತಿದೆ ಎಂದು ಬರೆದುಕೊಂಡಿದ್ದರು.
ನನ್ನ ಪವಿತ್ರ ಜಿಮ್ ದೇಗುಲದಲ್ಲಿ ನಾನು ಗಾಯಗೊಂಡಿದ್ದೇನೆ ಎಂದು ರಶ್ಮಿಕಾ ತಿಳಿಸಿದ್ದರು. ಈಗ ನಾನು ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ ಬೆಡ್‌ರೆಸ್ಟ್‌ನಲ್ಲಿದ್ದೇನೆ. ಇದು ದೇವರಿಗೆ ಮಾತ್ರ ತಿಳಿದಿದೆ. ಹಾಗಾಗಿ ನಾನು ಥಾಮ, ಸಿಕಂದರ್ ಮತ್ತು ಕುಬೇರನ ಸೆಟ್‌ಗಳಿಗೆ ಶೀಘ್ರದಲ್ಲೇ ಹಿಂತಿರುಗುತ್ತಿದ್ದೇನೆ ಎಂದು ಭಾವಿಸಿದ್ದೇನೆ ಎಂದು ರಶ್ಮಿಕಾ ಹೇಳಿದ್ದರು. ಮಹಾನ್ ರಾಣಿ ಚಿತ್ರದ ಫೋಟೋಗಳು ಬಿಡುಗಡೆ ಆಗಿದ್ದು, ರಶ್ಮಿಕಾ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ರಶ್ಮಿಕಾ ಮಂದಣ್ಣ ನಿಜಕ್ಕೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಮಹಾರಾಣಿ ಯೇಸುಬಾಯಿ ಆಗಿ ಕಂಗೊಳಿಸುತ್ತಿದ್ದಾರೆ. ಪಕ್ಕಾ ಮಹಾರಾಷ್ಟ್ರಿಯನ್ ರೀತಿಯಲ್ಲಿಯೇ ಹೊಳೆಯುತ್ತಿದ್ದಾರೆ. ಕೊಡಗಿನ ಕುವರಿ ಆದ್ರೂ ಎಲ್ಲೂ ಆ ಒಂದು ಫೀಲ್ ಇಲ್ವೇ ಇಲ್ಲ.
ಪಕ್ಕಾ ಮಹಾರಾಣಿ ಯೇಸುಬಾಯಿ ಆಗಿಯೇ ಕಾಣಿಸುತ್ತಿದ್ದಾರೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.