SUDDIKSHANA KANNADA NEWS/ DAVANAGERE/DATE:09_09_2025
ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಯಾಸಿನ್ ಜಿಂದಾಬಾದ್ ಎಂದು ಕೂಗಿದ್ದನ್ನು ಪಾಕಿಸ್ತಾನ ಜಿಂದಾಬಾದ್ ಎಂದು ಎಡಿಟ್ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಸಿ. ಎಂ. ಖಾದರ್ ಒತ್ತಾಯಿಸಿದ್ದಾರೆ.
READ ALSO THIS STORY: ಕರ್ನಾಟಕದಲ್ಲಿ ದೇಶವಿರೋಧಿ ಘಟನೆಗಳು, ಭದ್ರಾವತಿಯಲ್ಲಿ “ಪಾಕಿಸ್ತಾನ ಜಿಂದಾಬಾದ್ ಘೋಷಣೆ”: ವಿಜಯಪುರದಲ್ಲಿ ಪ್ರಚೋದನಕಾರಿ ಟ್ರ್ಯಾಕ್ ಪ್ಲೇ!
ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯು ಬಹಳ ಶಾಂತಿ ರೀತಿಯಲ್ಲಿ ನಡೆದಿದೆ. ಎಲ್ಲಾ ಮುಖಂಡರು, ಊರಿನ ಎಲ್ಲಾ ಸಮುದಾಯದವರು, ಅಧಿಕಾರಿಗಳು, ರಾಜಕೀಯ ಮುಖಂಡರು ಹಾಗೂ ಭದ್ರಾವತಿ ಕ್ಷೇತ್ರದ ಶಾಸಕ ಬಿ. ಕೆ. ಸಂಗಮೇಶ್ವರ ಅವರು ಸಹ ಪಾಲ್ಗೊಂಡಿದ್ದರು. ಬಹಳ ಶಾಂತಿ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡಿದ್ದೇವೆ. ಆದರೆ ಕೆಲ ಯುವಕರು ಗಾಂಧಿ ಸರ್ಕಲ್‌ನಲ್ಲಿ ಹಬ್ಬದ ಸಂತೋಷದಲ್ಲಿ ಕುಣಿದಾಡಿ ಅವರ ಒಬ್ಬ ಅಭಿಮಾನಿ, ಶಿವಮೊಗ್ಗದ ಸ್ನೇಹಿತ ಯಾಸಿನ್ ಅನ್ನೋವರ ಹೆಸರಲ್ಲಿ ಯಾಸಿನ್ ಜಿಂದಾಬಾದ್ ಅಂತ ಘೋಷಣೆ ಕೂಗಿದ್ದಾರೆ. ಆದರೆ ಅದನ್ನು ಎಡಿಟ್ ಮಾಡಿ ನಮ್ಮ ವಿರೋಧ ಪಕ್ಷದ ಒಬ್ಬ ನಾಯಕರಾದ ಅಜಿತ್ ಗೌಡ್ರು ಅವರ ಫೇಸ್ಬುಕ್ ಅಕೌಂಟ್ ನಲ್ಲಿ ನಮ್ಮ ಸಮುದಾಯದ ಯುವಕರ ಮೇಲೆ ಪಾಕಿಸ್ತಾನ ಜಿಂದಾಬಾದ್ ಅಂತ ಭದ್ರಾವತಿಯಲ್ಲಿ ಕೂಗಿದ್ದಾರೆ ಅಂತ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಎಂದು ಭದ್ರಾವತಿಯಲ್ಲಿ ಘೋಷಣೆ ಹಾಕಲಾಗಿದೆ ಎಂಬುದು ಅಪ್ಪುಟ ಸುಳ್ಳು. ಯಾಕಂದ್ರೆ ಭದ್ರಾವತಿಯ ಶಾಸಕ ಬಿ. ಕೆ. ಸಂಗಮೇಶ್ವರರವರ ಅಭಿವೃದ್ಧಿ ಕಾರ್ಯಗಳು ನೋಡಿ ಅವರಿಗೆ ಸಹಿಸಲಿಕ್ಕೆ ಆಗುತ್ತಿಲ್ಲ. ಆದ್ದರಿಂದ ವಿರೋಧ ಪಕ್ಷದವರಾದ ಜೆಡಿಎಸ್ ನ ಅಜಿತ್ ಗೌಡ ಹಾಗೂ ಕೆಲ ಬಿಜೆಪಿ ಮುಖಂಡರು ಈ ಎಡಿಟ್ ವಿಡಿಯೋವನ್ನು ವೈರಲ್ ಮಾಡಿ ಊರಲ್ಲಿ ಅಶಾಂತಿ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ದೂರಿದ್ದಾರೆ.
ಆದ್ದರಿಂದ ಶಿವಮೊಗ್ಗ ಜಿಲ್ಲೆಯ ಎಸ್ಪಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಆಡಿಯೋವನ್ನು ಲ್ಯಾಬಿಗೆ ಕಳಿಸಿಕೊಟ್ಟು ಸತ್ಯಾಂಶವನ್ನು ಹೊರಗೆ ತರಲಿ. ಇದು ಒರಿಜಿನಲ್ ಅಥವಾ ಎಡಿಟ್ ಮಾಡಿದ್ದಾರೋ ಅಂತ ಇಡೀ ರಾಜ್ಯಕ್ಕೆ ಗೊತ್ತಾಗಲಿ. ತಪ್ಪು ಯಾರೇ ಮಾಡಿರಲಿ, ಅದು ತಪ್ಪೇ. ತಪ್ಪು ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಿ ಎಂದು ಮನವಿ ಮಾಡಿದ್ದಾರೆ.
ಭದ್ರಾವತಿಯಲ್ಲಿ ಮೊದಲಿನಿಂದಲೂ ಮುಸ್ಲಿಂರು ಪಾಕಿಸ್ತಾನ ವಿರೋಧ ಮಾಡಿಕೊಂಡು ಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಸಹ ಈ ಸಮುದಾಯ ಇಡಿ ದೇಶದಲ್ಲೇ ಪಾಕಿಸ್ತಾನಕ್ಕೆ ಬಹಿಷ್ಕಾರ ಹಾಕಿ ಪ್ರತಿಭಟನೆ ಮಾಡಿರೋ ಉದಾಹರಣೆಗಳು ಇವೆ. ಅಜಿತ್ ಗೌಡನ ಫೇಸ್ಬುಕ್ ಅಕೌಂಟ್ ಅನ್ನು ಸಿಸ್ ಮಾಡಿ ಅವರ ಮೇಲೆ ಸಾಕ್ಷಿದಾರ ಇಲ್ಲದೆ ಅಶಾಂತಿ ಸೃಷ್ಟಿಸಿದ ಆರೋಪದ ಮೇಲೆ ಕ್ರಮ ಜರುಗಿಸಬೇಕು ಎಂದು ಸಿಎಂ ಖಾದರ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.