SUDDIKSHANA KANNADA NEWS/ DAVANAGERE/ DATE:24-02-2025
ಬೆಂಗಳೂರು: ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಡಾಲಿ ಧನಂಜಯ್ ಮತ್ತು ನಟಿ ಅಮೃತ ಅಯ್ಯಂಗಾರ್ ಜೋಡಿ ಸ್ಯಾಂಡಲ್ ವುಡ್ ನ ಫೇವರಿಟ್ ಕಪಲ್. ಆದ್ರೆ, ಇಬ್ಬರು ಮದುವೆಯಾಗುತ್ತಾರೆ ಎಂದು ಭಾವಿಸಿದ್ದರು. ಡಾ. ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಂತೆ ಗಾಸಿಪ್ ಮತ್ತಷ್ಟು ಹೆಚ್ಚಾಯಿತು. ಡಾಲಿ ಧನಂಜಯ್ ಮತ್ತು ಅಮೃತ ಅಯ್ಯಂಗಾರ್ ನಡುವೆ ಪ್ರೀತಿ ಇತ್ತು. ಈಗ ಅಮೃತ ಭಗ್ನಪ್ರೇಮಿ ಎಂದೆಲ್ಲಾ ಕಮೆಂಟ್ ಗಳು ಬಂದಿದ್ದವು.
ಇದಕ್ಕೆ ಪೂರಕ ಎಂಬಂತೆ ಅಮೃತ ಅಯ್ಯಂಗಾರ್ ನೆಚ್ಚಿನ ಡಾಲಿ ಧನಂಜಯ್ ಮದುವೆಗೂ ಆಬ್ಸೆಂಟ್ ಆಗಿದ್ದರು. ಅಮೃತ ಅಯ್ಯಂಗಾರ್ ಗೆ ಡಾಲಿ ಧನಂಜಯ್ ಮೋಸ ಮಾಡಿಬಿಟ್ಟರಾ? ಪ್ರೀತಿಸಿ ಕೈ ಕೊಟ್ಟರಾ ಎಂದೆಲ್ಲಾ ಚರ್ಚೆಗಳು ನಡೆದವು. ಅದಕ್ಕೆ ಈಗ ನಟಿಯೇ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಭರವಸೆ ನಟಿ ಅಮೃತ ಅಯ್ಯಂಗಾರ್ ಪರ್ಸನಲ್ ವಿಚಾರ ಸಿಕ್ಕಾಪಟ್ಟೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಡಾಲಿ ಧನಂಜಯ್ ಮದುವೆ ದಿನ ಘೋಷಣೆ ಆದ ದಿನದಿಂದಲೂ ಕಸಿವಿಸಿಯಂತಿದ್ದ ಅಮೃತಾ ಕೊನೆಗೂ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಜನ ಮತ್ತೆ ಮತ್ತೆ ನಮ್ಮನ್ನು ಬಗ್ಗೆ ಗಾಸಿಪ್ ಹಬ್ಬಿಸಿದಾಗ ಹೋಗಲಿ ಬಿಡು ಅಂತ ಸುಮ್ಮನಾದೆ. ಧನ್ಯತಾ ಜೊತೆ ಧನಂಜಯ್ ಮದುವೆ ಘೋಷಣೆ ಆದಾಗ ಜನ ಅದನ್ನು ಸ್ವೀಕರಿಸಿದ ರೀತಿ ನನಗೂ ಇಷ್ಟವಾಯಿತು ಎಂದು ನಟಿ ಅಮೃತಾ ಅಯ್ಯಂಗಾರ್ ಹೇಳಿದ್ರು.
ನಾನು ನಟಿಸಿದ ಸಿನಿಮಾಗಳಲ್ಲಿ ತ್ಯಾಗರಾಣಿ ಎಂಬ ಬಿರುದು ಸಿಕ್ಕಿದೆ. ರಮೇಶ್ ಅರವಿಂದ್ ಅವರ ನಟನೆಯಂತೆ ನನಗೂ ಪಾತ್ರಗಳೂ ಸಿಕ್ಕಿವೆ. ಪಾತ್ರಗಳಿಗೆ ತಕ್ಕಂತೆ ನಟಿಸಿದ್ದೇನೆ. ಇದರಲ್ಲಿ ವಿಶೇಷ ಏನೂ ಇಲ್ಲ. ಡಾಲಿ ಧನಂಜಯ್ ಮತ್ತು ನಾನು ಉತ್ತಮ ಸ್ನೇಹಿತರು. ಜೊತೆಗೆ ಸಿನಿಮಾದಲ್ಲೂ ಕೆಲಸ ಮಾಡಿದ್ದೇವೆ. ಗಾಸಿಪ್ ಹಬ್ಬಿತ್ತು. ಡಾಲಿ ನಟನೆ ಅಂದರೆ ಪಂಚಪ್ರಾಣ. ಟಗರು ಸಿನಿಮಾ ನಾನು 15 ಬಾರಿ ನೋಡಿದ್ದೇನೆ. ನಟನೆಗೆ ನಾನು ದೊಡ್ಡ ಅಭಿಮಾನಿ. ಇಬ್ಬರೂ ಮೈಸೂರಿನವರೇ. ಕೋವಿಡ್ ವೇಳೆ ಒಂದೇ ಏರಿಯಾದಲ್ಲಿ ಇದ್ದೆವು. ಗೋಲ್ಡನ್ ಗ್ಯಾಂಗ್ ಶೋಗೂ ಒಟ್ಟಿಗೆ ಹೋಗಿದ್ದೆವು. ನಾವಿಬ್ಬರೂ ಗುಡ್ ಫ್ರೆಂಡ್ ಅಷ್ಟೇ ಎಂದು ಹೇಳುವ ಮೂಲಕ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ನಮ್ಮಿಬ್ಬರ ಜೋಡಿಯನ್ನು ನೋಡಿ ಜನ ಇಷ್ಟಪಟ್ಟಾಗ ನಾನು ಕೂಡ ಖುಷಿ ಪಟ್ಟಿದ್ದೆ ಎಂದು ಅಮೃತಾ, ಹಿಂದಿನ ಕಾಲದಲ್ಲಿ ನಟ- ನಟಿಯರು ಪದೇ ಪದೆ ಒಟ್ಟಿಗೆ ನಟಿಸಿದಾಗ ಜನ ಅದನ್ನು ನೋಡಿ ಒಳ್ಳೆ ಜೋಡಿ ಅಂದಿದ್ದಾರೆ. ನನ್ನ, ಧನಂಜಯ್ನ ಒಟ್ಟಿಗೆ ನೋಡೊಕೇ ಬಹಳ ಇಷ್ಟ ಪಡುತ್ತಾರೆ. ಜನ ನಮ್ಮ ಜೋಡಿ ಇಷ್ಟಪಟ್ಟಿದ್ದು ನಮಗೂ ಖುಷಿ ಇದೆ ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.