ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೇಕಾರರ ಸಮ್ಮಾನ್ ಯೋಜನೆಯ ಸೌಲಭ್ಯ: ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು?

On: August 24, 2025 1:43 PM
Follow Us:
ನೇಕಾರ
---Advertisement---

SUDDIKSHANA KANNADA NEWS/ DAVANAGERE/DATE:24_08_2025

ಬೆಂಗಳೂರು: ಕೈಮಗ್ಗ ಮತ್ತು ಜವಳಿ ಇಲಾಖೆಯು ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವ ನೇಕಾರರಿಗೆ ವಾರ್ಷಿಕವಾಗಿ ರೂ.5,000 ಗಳನ್ನು ನೀಡಲು ನೇಕಾರರ ಸಮ್ಮಾನ್ ಯೋಜನೆಯಡಿ ಈಗಾಗಲೇ 2025-26 ನೇ ಸಾಲಿಗೆ ನೊಂದಾಯಿತರಾಗಿರುವ ನೇಕಾರರಿಂದ ಹಾಗೂ ನೇಕಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ/ ವಿದ್ಯುತ್ ಮಗ್ಗ ನೇಕಾರರಿಂದ ಹೊಸದಾಗಿ ಅರ್ಜಿಗಳನ್ನು ಪಡೆದು ಅರ್ಹರಿರುವ ನೇಕಾರರ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟನಲ್ಲಿ ಅಪ್‌ಲೋಡ್ ಮಾಡಲು ಕೇಂದ್ರ ಕಚೇರಿ ಪತ್ರದಲ್ಲಿ ಸೂಚಿಸಲಾಗಿರುತ್ತದೆ.

READ ALSO THIS STORY: ನನ್ನ ಕಣ್ಣುಂದೆ ಅಮ್ಮನ ಕಪಾಳಕ್ಕೆ ಹೊಡೆದು ಬೆಂಕಿ ಹಚ್ಚಿದರು: ಪುತ್ರ ಹೇಳಿದ ಭಯಾನಕತೆ!

ಅದರಂತೆ 2024-25 ನೇ ಸಾಲಿನಲ್ಲಿ ಸದರಿ ಯೋಜನೆಯಡಿ ಈಗಾಗಲೇ ಸೌಲಭ್ಯ ಪಡೆದಿರುವ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಂದ ಹಾಗೂ ಕೈಮಗ್ಗ / ವಿದ್ಯುತ್ ಮಗ್ಗ ನೇಯ್ಗೆಗೆ ಸಂಬಂಧಿಸಿದ ಇತರೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ನೇಕಾರರಿಂದ / ನೇಕಾರ ಸಹಕಾರ ಸಂಘಗಳ ಮೂಲಕ ಅರ್ಜಿ ಪಡೆಯಲಾಗುತ್ತಿದೆ.

ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಈ ಕೆಳಕಂಡ ದಾಖಲಾತಿಗಳೊಂದಿಗೆ ನೇಕಾರ ಸಹಕಾರ ಸಂಘ ಗಳ ಮೂಲಕ ಅಥವಾ ನೇರವಾಗಿ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಿ.

ದಾಖಲಾತಿಗಳು:
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ನೇಕಾರ ಸಮ್ಮಾನ್ ಐ.ಡಿ/ಪೆಹಚಾನ್ ಕಾರ್ಡ್
  • ಆಧಾರ್ (NPCI) ಲಿಂಕ್‌ಡ್ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಕೈಮಗ್ಗ/ವಿದ್ಯುತ್ ಮಗ್ಗ ನೇಕಾರಿಕೆ ಮಾಡುತ್ತಿರುವ ಪೋಟೋ
  • ಕೈಮಗ್ಗ/ವಿದ್ಯುತ್ ಮಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ನೇಕಾರರ ಮಜೂರಿ ಪಾವತಿ ರಸೀದಿ ಇರಬೇಕು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment