ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ರಾಜಕೀಯದಲ್ಲಿ ನಮ್ಮ ಸಮಾಜ ಬೆಳೆಯಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಬೇಕೇ ಬೇಕು”: ಸನ್ಮಾನ ಸ್ವೀಕರಿಸಿದ ಗಜೇಂದ್ರ ಜಗನ್ನಾಥ ಕರೆ

On: September 7, 2025 8:26 PM
Follow Us:
ರಾಜಕೀಯ
---Advertisement---

SUDDIKSHANA KANNADA NEWS/ DAVANAGERE/DATE:07_09_2025

ದಾವಣಗೆರೆ: ರಾಜಕೀಯದಲ್ಲಿಯೂ ನಮ್ಮ ಸಮಾಜ ಬೆಳೆಯಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಇರಲೇಬೇಕು. ಆಗ ಮಾತ್ರ ರಾಜಕಾರಣದಲ್ಲಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ದೇವಾಂಗ ಸಮಾಜದ ಯುವ ಮುಖಂಡ ಗಜೇಂದ್ರ ಜಗನ್ನಾಥ ಪ್ರತಿಪಾದಿಸಿದರು.

ರಾಜಕೀಯ

ನಗರದ ಕೊಂಡಜ್ಜಿ ರಸ್ತೆಯ ಆರ್ ಟಿಒ ಕಚೇರಿ ಬಳಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ದಾವಣಗೆರೆ ನಗರ ದೇವಾಂಗ ಸಂಘದ ವತಿಯಿಂದ ಸತತ ಎಂಟನೇ ಬಾರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ವಧು – ವರರ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

READ ALSO THIS STORY: BIG NEWS: ಧರ್ಮಸ್ಥಳ ತಲೆಬುರುಡೆ ಕೇಸ್ ನಲ್ಲಿ 50ರಿಂದ 60 ಮಂದಿಯಿಂದ ಸಂಚು? ಎಸ್ಐಟಿಗೆ ಸಿಕ್ಕಿದೆ ಸಾಕ್ಷ್ಯ!

ಪ್ರತಿ ಮಕ್ಕಳಲ್ಲಿಯೂ ಅದ್ಭುತ ಪ್ರತಿಭೆ ಇರುತ್ತದೆ. ಈ ಪ್ರತಿಭೆ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಮಕ್ಕಳು ಉನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಓದಿನ ಜೊತೆ ಸಮಾಜವನ್ನು ಪ್ರೀತಿಸುವ ಆಲೋಚನೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸತತ ಪರಿಶ್ರಮ, ಕಠಿಣ ಅಭ್ಯಾಸ ಮಾಡಿ ಸರ್ಕಾರಿ ಕೆಲಸಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು. ಆಗ ನಮ್ಮ ಸಮಾಜದ ಗೌರವ ಹೆಚ್ಚುತ್ತದೆ. ವಿದ್ಯಾರ್ಥಿಗಳೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಜೀವನದ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಕಂಡರೆ ಮುಂದೆ ಸುಲಭವಾಗಿ ಗುರಿ ಮುಟ್ಟಲು ಹಾಗೂ ಯಶಸ್ಸು ಸಾಧಿಸುತ್ತೀರಾ. ಈ ನಿಟ್ಟಿನಲ್ಲಿ ಇಂದಿನಿಂದಲೇ ಸಿದ್ಧರಾಗಿ ಎಂದು ಕರೆ ನೀಡಿದರು.

ಯಾದಗಿರಿ ಜಿಲ್ಲೆಯ ಶ್ರೀಕ್ಷೇತ್ರ ಮುದೇನೂರು ಮಹಾಸಂಸ್ಥಾನ ಮಠದ ಶ್ರೀ ಡಾ. ಈಶ್ವರಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ದೇವಾಂಗ ಸಂಘದ ಅಧ್ಯಕ್ಷ ಡಾ. ಅಜ್ಜೇಶಿ ಅಧ್ಯಕ್ಷತೆ
ವಹಿಸಿದ್ದರು. ಪುನೀತ್ ಶಂಕರ್, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಸಿ. ಹೆಚ್. ಗಿರೀಶ್, ಬಾತಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ ರಮೇಶ್, ದೂಡಾ ಮಾಜಿ ಸದಸ್ಯರಾದ ಸೌಭಾಗ್ಯ ಮುಕುಂದಪ್ಪ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment