ವಾಟ್ಸಾಪ್ನಲ್ಲಿ ಬ್ಯಾಂಕ್ ಹೆಸರಿನಲ್ಲಿಸಿ೧॥ ಫೈಲ್ ಕಳುಹಿಸುವ ಮೂಲಕ ಖಾತೆಗಳಿಂದ ಹಣ ದೋಚುವ ಹೊಸ ಮಾದರಿ ಸೈಬರ್ ಕ್ರೈಂ ಈಗ ಜಾಸ್ತಿಯಾಗಿದ್ದು ಹಲವರು ಈಗಾಗಲೇ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.
ಬ್ಯಾಂಕ್ KYC ಅಪ್ಡೇಟ್, ರಿಡೀಮಿಂಗ್ ಪಾಯಿಂಟ್ಸ್ ಇತ್ಯಾದಿ ನೆಪದಲ್ಲಿ ನಿಮ್ಮ ಮೊಬೈಲ್ಗೆ ಕನ್ನ ಹಾಕುತ್ತಾರೆ. ಒಮ್ಮೆ APK ಫೈಲ್ ಇನ್ಸ್ಟಾಲ್ ಮಾಡಿದರೆ ಮೊಬೈಲ್ನ ಎಲ್ಲ ಖಾಸಗಿ ಮಾಹಿತಿ ಸೈಬರ್ ಕಳ್ಳರ ಪಾಲಾಗಿ ನಾನಾ ರೀತಿ ಮೋಸ ಹೋಗಬೇಕಾಗುತ್ತದೆ. ಹೀಗಾಗಿ ವಾಟ್ಸಾಪ್ಗೆ ಬರುವ ಯಾವುದೇ ಓಿ೧(ಫೈಲ್, ಲಿಂಕ್ ಅಥವಾ ಮೆಸೇಜ್ ಕೂಡಲೇ ಡಿಲೀಟ್ ಮಾಡಿ.