SUDDIKSHANA KANNADA NEWS/ DAVANAGERE/DATE:14_08_2025
ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದಿಂದ ಚಟೋಬನಹಳ್ಳಿ ಗ್ರಾಮದವರೆಗಿನ ರಸ್ತೆಗೆ ಅಡ್ಡಲಾಗಿ ಭದ್ರಾ ಕಾಲುವೆಗೆ ನಿರ್ಮಿಸಿರುವ ಸೇತುವೆ ಬಾರಿ ಮಳೆಯಿಂದಾಗಿ ಹರಿದು ಬಂದ ನೀರಿನ ರಭಸಕ್ಕೆ ಕುಸಿದು ಕೊಚ್ಚಿ ಹೋಗಿದೆ.
READ ALSO THIS STORY: BIG BREAKING: ರೇಣುಕಾಸ್ವಾಮಿ ಹತ್ಯೆ ಕೇಸ್: ಮಾಧ್ಯಮಗಳಿಗೆ ಕಣ್ತಪ್ಪಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಬಂಧನ!
ಇಂದು ಕುಸಿದು ಕೊಚ್ಚಿ ಹೋದ ಸೇತುವೆ ಸ್ಥಳಕ್ಕೆ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ಆಲೂರು ನಿಂಗರಾಜು ರವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಭದ್ರಾ ಸೂಪರ್ ಇಂಡೆಂಡೆಂಟ್ ಇಂಜಿನಿಯರ್ ಟಿ.ಆರ್.ರವಿಚಂದ್ರ, ಇಕ್ಸಿಕ್ಯುಟೀವ್ ಇಂಜಿನಿಯರ್ ಜಿ.ಬಿ.ಚನ್ನಬಸಪ್ಪ, ಸಹಾಯಕ ಇಕ್ಸಿಕ್ಯುಟೀವ್ ಇಂಜಿನಿಯರ್ ಜಿ.ಪಿ.ವಿಕಾಶ್ ರವರೊಂದಿಗೆ ಚರ್ಚಿಸಿ, ಕಾಮಗಾರಿ ತಕ್ಷಣ ಪ್ರಾರಂಭ ಮಾಡಿ, ಮುಂದಾಗುವ ಅನಾಹುತಗಳಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು ಇಂತಹ ಸಣ್ಣ ಪುಟ್ಟ ಕಾಲುವೆ ಸೇತುವೆಗಳನ್ನು ನಿರ್ವಹಿಸಲಾಗದ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಬಿ ಎಂ ಸತೀಶ್ ಆರೋಪಿಸಿದ್ದಾರೆ.
ಭದ್ರಾ ಸೂಪರ್ ಇಂಡೆಂಡೆಂಟ್ ಇಂಜಿನಿಯರ್ ಟಿ ಆರ್ ರವಿಚಂದ್ರರವರು ಪ್ರತಿಕ್ರಿಯಿಸಿ ಸೇತುವೆ ಶಿಥಿಲಗೊಂಡು ಬಹಳ ದಿನಗಳಾಗಿದ್ದವು. ಆದ್ದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪರಿಣಾಮವಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯಾದೇಶ ನೀಡಲಾಗಿದೆ. ವಿಪರೀತ ಮಳೆ ಸುರಿಯುತ್ತಿದ್ದರಿಂದ ಮತ್ತು ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈಗ ನೀರಿನ ರಭಸದಿಂದ ಕುಸಿದು ಕೊಚ್ಚಿ ಹೋದ ಸೇತುವೆಯನ್ನು ಸಂಪೂರ್ಣ ತೆರವುಗೊಳಿಸಿ, ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ನಿಲ್ಲಿಸಿದ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರ್ಕಿ ಗ್ರಾಮದ ಮುಖಂಡರಾದ ಕೆ.ರೇವಣಸಿದ್ದಪ್ಪ, ಕೆ.ಬಿ.ಕರಿಬಸಪ್ಪ, ಕೆ.ಎನ್.ಶಶಿಧರ, ಕೆ.ಎಸ್.ಮರುಳಸಿದ್ದಪ್ಪ, ಕೆ.ಎಸ್.ಪ್ರಕಾಶ್, ಕಾಯಕದ ಪ್ರಕಾಶ್, ಬಸಾಪುರದ ಸಿದ್ದಪ್ಪ, ಎ.ಡಿ.ರಾಮಜ್ಜ ಮುಂತಾದವರು ಉಪಸ್ಥಿತರಿದ್ದರು.