ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ದೇಹದ ಚಯಾಪಚಯ ಕ್ರಿಯೆ ಶೇ.30ರಷ್ಟು ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಇದರಿಂದ ಮಲ ವಿಸರ್ಜನೆಯು ಆರೋಗ್ಯಕರವಾಗುತ್ತದೆ ಮತ್ತು ದೇಹವು ನಿರ್ಜಲೀಕರಣಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ತೂಕ ನಷ್ಟ ಸಾಧ್ಯ. ಆರೋಗ್ಯವಾಗಿರಲು ದಿನಕ್ಕೆ 4 ಲೀಟರ್ ನೀರು ಕುಡಿಯಲು ಸೂಚಿಸಲಾಗುತ್ತದೆ.
ಶುದ್ದ ಕುಡಿಯುವ ನೀರು ಆರೋಗ್ಯಕ್ಕೆ ಸಹಕಾರಿ. ಬೆಳಿಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವನೆ ಮಾಡಿದರೆ ಪಚನಕ್ರಿಯೆಗೆ ಅನುಕೂಲವಾಗುತ್ತದೆ. ಕುಡಿಯುವ ನೀರು ಎಷ್ಟು ಹೆಚ್ಚು ಕುಡಿಯುತ್ತೀರೋ ಅಷ್ಟು ಒಳ್ಳೆಯದು. ಆರೋಗ್ಯವೂ ಸದೃಢವಾಗುತ್ತದೆ.