ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಕ್ಫ್ ಆಸ್ತಿ ವಿವಾದ ಬಿಜೆಪಿ ಸೃಷ್ಟಿಸಿರುವ ಕಥೆ: ಎಸ್. ಎಸ್. ಮಲ್ಲಿಕಾರ್ಜುನ್ ಆಕ್ರೋಶ

On: November 1, 2024 6:52 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-11-2024

ದಾವಣಗೆರೆ: ರೈತರ ಜಮೀನು ವಕ್ಫ್ ನೀಡಿಕೆ ವಿಚಾರ ಸಂಬಂಧ ಎದ್ದಿರುವ ವಿವಾದದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ವಕ್ಫ್ ವಿವಾದ ಬಿಜೆಪಿಯು ಸೃಷ್ಟಿಸಿರುವ ಕಥೆ ಎಂದು ಆರೋಪಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರ ಕುರಿತಂತೆ ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ರೈತರಿಗೆ ಯಾವುದೇ ಅನುಮಾನ ಬೇಡ. ರೈತರಿಗೆ ತೊಂದರೆ ಆಗುವುದಿಲ್ಲ. ಹೊನ್ನಾಳಿಯಲ್ಲಿ ವಕ್ಫ್ ಗೆ
ರೈತರ ಜಮೀನು ನೀಡುವ ವಿಚಾರ ಕುರಿತಂತೆ ಸದ್ಯ ಕೋರ್ಟ್ ನಲ್ಲಿದೆ. ಕಾನೂನಿನ ಪ್ರಕಾರ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಮುಂಗಾರು ಮತ್ತು ಹಿಂಗಾರು ಭಾರೀ ಮಳೆಯಾಗಿದೆ. ಬೆಳೆ ಹಾನಿ ಸೇರಿದಂತೆ ಅಪಾರ ಹಾನಿ ಆಗಿದೆ. ಜಿಲ್ಲೆಯಲ್ಲಿ ಬೆಳೆ ನಷ್ಟ ಸರ್ವೆ ಆಗುತ್ತಿ. ಕೂಲಂಕುಷ ಅಧ್ಯಯನ ಮಾಡಿ ವರದಿ ಕೊಡಲಾಗುತ್ತೆ. ಅಂದಾಜು 142 ಕೋಟಿ ರೂಪಾಯಿ ಬೆಳೆ
ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಸರ್ವೆ ನಡೆಯುತ್ತಿ. ಸರ್ವೆ ಬಳಿಕ ಬೆಳೆ ಪರಿಹಾರ ನೀಡಲಾಗುವುದು ಎಂದ ಅವರು, ಬಿಜೆಪಿಯವರು ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಹಾಗಾಗಿ, ಬಿಜೆಪಿಯವರಿಗೆ ಬೇರೆ ಏನೂ ಮಾಡಲು
ಕೆಲಸ ಇಲ್ಲ. ಹಾಗಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕೋವಿಡ್ ತನಿಖೆ ವಿಚಾರ..

ಕೋವಿಡ್ ಹಗರಣ ಸಂಬಂಧ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ. ಆಗಿನ ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಹಲವರ ಮೇಲೆ ತನಿಖೆ ನಡೆಯುತ್ತಿದೆ. ದಾವಣಗೆರೆಯಲ್ಲಿಯೂ ಕೋವಿಡ್ ಇನ್ಶುರೆನ್ಸ್ ಫ್ರಾಡ್ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಾವಣಗೆರೆಯಲ್ಲಿ ರಸ್ತೆಗಳು ಚೆನ್ನಾಗಿಯೇ ಇವೆ. ಇಷ್ಟೊಂದು ಮಳೆ ಸುರಿದರೂ ಪ್ರವಾಹ ಸ್ಥಿತಿ ಹೆಚ್ಚಾಗಿ ತಲೆದೋರಿಲ್ಲ. ರಾಜಕಾಲುವೆ ಸರಿಪಡಿಸಲಾಗಿದೆ. ದೊಡ್ಡ ಮಳೆ ಬಂದರೂ ಏನೂ ಆಗಿಲ್ಲ. ಅಲ್ಲಲ್ಲಿ ಕೆಲ ಗುಂಡಿಗಳು ಬಿದ್ದಿದ್ದು, ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯ ಜಿ. ಎಸ್. ಗಡಿಗುಡಾಳ್ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚನ್ನಗಿರಿ

ಮಾಮೂಲು ಪಡೆಯುವಾಗ ಪ್ರಗ್ನೆಂಟ್ ಇರೋಲ್ವ: ಅರಣ್ಯಾಧಿಕಾರಿ ಶ್ವೇತಾ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟ ಚನ್ನಗಿರಿ “ಕೈ” ಶಾಸಕ ಶಿವಗಂಗಾ ಬಸವರಾಜ್!

ಶಸ್ತ್ರಚಿಕಿತ್ಸೆ

90 ವರ್ಷದ ತಾತನಿಗೆ ಹೊಸ ಜೀವ: ರೋಬೋಟಿಕ್ ಶಸ್ತ್ರಚಿಕಿತ್ಸೆ ತಂದ ಹೊಸ ಆಶಾಕಿರಣ

ದಾವಣಗೆರೆ

ದಾವಣಗೆರೆಯ ವಿಶ್ವಬಂಧು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಎಸ್. ಮರಳುಸಿದ್ದಯ್ಯ ವಿಧಿವಶ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

Leave a Comment