SUDDIKSHANA KANNADA NEWS/ DAVANAGERE/ DATE:31-05-2023
ದಾವಣಗೆರೆ (DAVANAGERE): 200 ಯೂನಿಟ್ (200 UNIT) ವಿದ್ಯುತ್ ಉಚಿತವಾಗಿ ಪಡೆಯಬೇಕಾ? ಹಾಗಾದ್ರೆ ಈ ಸುದ್ದಿ ಓದಿ.
ಕಾಂಗ್ರೆಸ್ (CONGRESS) ಪಕ್ಷವು ಚುನಾವಣೆಗೆ ಮುನ್ನ ನೀಡಿದ್ದ ಒಂದೊಂದೇ ಭರವಸೆ ಈಡೇರಿಸಲು ಕಸರತ್ತು ನಡೆಸುತ್ತಿದೆ. ಜೂನ್.(JUNE) 1 ರಿಂದ ಕೆ ಎಸ್ ಆರ್ ಟಿ ಸಿಯ (KSRTC) ಕೆಂಪು ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದೆ. ನಾಳೆಯಿಂದ ಜಾರಿಗೆ ಬರಲಿದೆ.
ಇನ್ನು ಎಲ್ಲರ ಚಿತ್ತ ನೆಟ್ಟಿರುವುದು 200 ಯೂನಿಟ್ ವಿದ್ಯುತ್ ಪಡೆಯುವತ್ತ. ಇದಕ್ಕೂ ಮುನ್ನ ವಿದ್ಯುತ್ ಬಳಕೆದಾರರಿಗೆ ಇಂಧನ ಇಲಾಖೆ ಶಾಕ್ ಕೊಟ್ಟಿದೆ. ಗ್ಯಾರಂಟಿ ನಂಬಿ ಬಿಲ್ ಕಟ್ಟದಿದ್ರೆ ಕನೆಕ್ಷನ್ ಕಟ್ ಆಗುತ್ತೆ. ವಿದ್ಯುತ್ ಶುಲ್ಕ ಪಾವತಿಸದ ಜನತೆಗೆ ಇಂಧನ ಇಲಾಖೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಕರೆಂಟ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುವಂತೆ ಈಗಾಗಲೇ ಎಲ್ಲಾ ಎಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ.
ರಾಜ್ಯ ಕಾಂಗ್ರೆಸ್ (CONGRESS) ಸರ್ಕಾರ ಘೋಷಿಸಿದ್ದ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಇನ್ನೂ ಜಾರಿಯಾಗಿಲ್ಲ. ಆದರೆ ಜನರು ಕರೆಂಟ್ (CURRENT)ಬಿಲ್ (BIL) ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ.
ಜನರು ಬಾಕಿ ಇರುವ, ಪ್ರಸ್ತುತ ವಿದ್ಯುತ್ (CURRENT) ಬಿಲ್ (BIL) ಪಾವತಿಸಬೇಕು. ಬಳಸಿರುವ ವಿದ್ಯುತ್ ಬಿಲ್ (CURRENT BIL) ಪಾವತಿಸಬೇಕು ಎಂದು ಸೂಚನೆ ನೀಡಿದೆ. ಕರೆಂಟ್ ಬಿಲ್ ಪಾವತಿ ವಿಳಂಬ ಮಾಡಿದ್ರೂ ದಂಡ (FINE) ಹಾಕಲಾಗುವುದು. 3 ತಿಂಗಳ ಬಿಲ್ ಬಾಕಿ ಕಟ್ಟದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಖಡಕ್ ವಾರ್ನಿಂಗ್ (WARNING) ಕೊಟ್ಟಿದೆ.
ಕಾಂಗ್ರೆಸ್ (CONGRESS) ಚುನಾವಣೆಗೂ ಮುನ್ನ 200 ಯುನಿಟ್ (200 UNIT) ವಿದ್ಯುತ್ ಉಚಿತ ಎಂದು ಘೋಷಿಸಿತ್ತು. ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈವರೆಗೂ ಗೃಹಜ್ಯೋತಿ ಯೋಜನೆಯ ಆದೇಶ ಹೊರಡಿಸಿಲ್ಲ. ಆದೇಶ ಬರೋವರೆಗೂ ಕರೆಂಟ್ ಬಿಲ್ ಪಾವತಿಸದಿದ್ದರೆ ದಂಡ ಹಾಕಲಾಗುವುದು ಎಂದು ಇಂಧನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ಸಚಿವ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಉಚಿತ ವಿದ್ಯುತ್ ನೀಡುವುದರಿಂದ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗುತ್ತದೆ. ಈ ಕಾರಣಕ್ಕೆ ಸರ್ಕಾರವು ಜೂನ್. 1 ರಿಂದ ಘೋಷಿಸುತ್ತೆ ಎಂದು ಜನರು ಕಾಯುತ್ತಿದ್ದರು. ಆದ್ರೆ, ನಾಳೆ ಸಂಪುಟ ಸಭೆಯು ಶುಕ್ರವಾರಕ್ಕೆ ಶಿಫ್ಟ್ ಆಗಿರುವ ಕಾರಣ ಗೊಂದಲ ಮುಂದುವರಿದಿದೆ.