ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಕ್ಕ, ತಮ್ಮ, ಶತಾಯುಷಿ ಅಜ್ಜಿ ವೋಟಿಂಗ್: ಬೇರೆ ಏನೆಲ್ಲಾ ವಿಶೇಷತೆ ಇತ್ತು ಗೊತ್ತಾ..?

On: May 10, 2023 11:48 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:10-05-2023

ದಾವಣಗೆರೆ: ಪ್ರತಿಯೊಬ್ಬರಿಗೂ ಮೊದಲನೇ ಮತ ಹಾಕುವಾಗ ಸಂಭ್ರಮವೋ ಸಂಭ್ರಮ. ಯಾಕೆಂದರೆ ಜೀವನದ ಮೊಟ್ಟ ಮೊದಲ ಬಾರಿಗೆ ಒಬ್ಬ ಅಭ್ಯರ್ಥಿ ಆಯ್ಕೆಗೆ ಹಕ್ಕು ಚಲಾವಣೆ ಮಾಡುವ ಹುಮ್ಮಸ್ಸು ಇರುತ್ತದೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ಮತದಾನದ ವೇಳೆ ಹಲವು ವಿಶೇಷತೆಗಳು ಕಂಡು ಬಂದವು.

ದಾವಣಗೆರೆಯ ಹಳೇಪೇಟೆಯ ಬಿ. ಸಿ. ಉಮೇಶ್ ಟಿವಿ ಅಂಗಡಿ ಅವರ ಪುತ್ರ ಹಾಗೂ ಪುತ್ರಿ ಮೊದಲ ಬಾರಿಗೆ ಮತ ಚಲಾಯಿಸುವ ಮೂಲಕ ಗಮನ ಸೆಳೆದರು. 20 ವರ್ಷದ ಕೀರ್ತಿ ಬಿ. ಯು ಹಾಗೂ 19 ವರ್ಷದ ಬಿ. ಯು. ಮಂಜುನಾಥ್ ಮೊದಲ ಬಾರಿಗೆ ನಗರದ ಕಾಯಿಪೇಟೆ ಹಿಂಭಾಗದ ಎಂಬಿಕೆರೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಈ ವೇಳೆ ಮಾತನಾಡಿದ ಕೀರ್ತಿ ಹಾಗೂ ಮಂಜುನಾಥ್ ಮೊದಲ ಬಾರಿಗೆ ಮತ ಚಲಾಯಿಸಿದ್ದು ತುಂಬಾನೇ ಖುಷಿ ಕೊಟ್ಟಿದೆ ಎಂದರು.

ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ನಾನು ಹಾಗೂ ನನ್ನ ತಮ್ಮ ಒಟ್ಟಿಗೆ ಮತ ಚಲಾಯಿಸಿದ್ದು ವಿಶೇಷ ಅನುಭವ. ತಂದೆ ಉಮೇಶ್ ಅವರ ಜೊತೆ ಆಗಮಿಸಿ ಮತ ಚಲಾಯಿಸಿದೆವು. ಇದು ಜೀವನದಲ್ಲಿ ಮರೆಯಲಾಗದ
ಕ್ಷಣ ಎಂದು ಕೀರ್ತಿ ಸಂತಸ ಪಟ್ಟರು.

ಮತದಾನ ನಮ್ಮ ಹಕ್ಕು:

ಮೊದಲ ಬಾರಿಗೆ ಮತ ಹಾಕುವ ಅವಕಾಶ ಸಿಕ್ಕಿದೆ. ನಮ್ಮ ಭಾರತದ ಸಂವಿಧಾನದಲ್ಲಿ ಹೇಳಿರುವಂತೆ ಮತದಾನ ನಮ್ಮ ಹಕ್ಕು ಅದನ್ನು ಚಲಾಯಿಸುವ ಮೂಲಕ ನನ್ನ ಕರ್ತವ್ಯ ನಿಭಾಯಿಸಿದ್ದೇನೆ.ಯುವಕರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು.ಯಾವುದೇ ಕಾರಣಕ್ಕೂ ಮತದಾನ ಮಾಡುವುದರಿಂದ ವಂಚಿತರಾಗಬಾರದು.ಈ ಬಾರಿ ಯುವ ಮತದಾರರ ಮತಗಟ್ಟೆ ಸ್ಥಾಪಿಸಲಾಗಿದೆ ಮತಗಟ್ಟೆ ಆಕರ್ಷಕವಾಗಿದೆ ಎಂದು ಎಬಿಬಿಎಸ್ ವಿದ್ಯಾರ್ಥಿ ಎ. ಪಿ. ಯುವರಾಜ್ ಸಂತಸ ಹಂಚಿಕೊಂಡರು.

ವಿಕಲಚೇತನರ ಮತದಾನ:

ಹದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಮತಗಟ್ಟೆಗಳಿಂದ ಒಟ್ಟು ವಿಕಲಚೇತನರು 92 ಇದ್ದು, ಈ ಪೈಕಿ 90 ಮಂದಿ ಮತದಾನ ಮಾಡಿದ್ದು ವಿಶೇಷ. 59 ಪುರುಷರು ಹಾಗೂು 31 ಮಹಿಳೆಯರು ಹಕ್ಕು ಚಲಾಯಿಸಿದರು. ಇಬ್ಬರು ಮೃತಪಟ್ಟ ಕಾರಣ ಚಲಾವಣೆಯಾಗಿಲ್ಲ.

ತೃತೀಯ ಲಿಂಗಿಗಳ ವೋಟಿಂಗ್:

ಇನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಖಿ ಮತಗಟ್ಟೆಗಳಲ್ಲಿ ತೃತೀಯಲಿಂಗಿಗಳು ಇದೇ ಮೊದಲ ಬಾರಿಗೆ ವೋಟ್ ಹಾಕಿದರು.

103 ವರ್ಷದ ಅಜ್ಜಿ ಹಕ್ಕು ಚಲಾವಣೆ:

ಎಂಸಿಸಿ ಬಿ ಬ್ಲಾಕ್ ನಲ್ಲಿ 103 ವರ್ಷದ ಶತಾಯುಷಿ ಅಜ್ಜಿ ಮತ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಆದ್ರೆ, ಅಜ್ಜಿ ತಾನು ಮತಗಟ್ಟೆಗೆ ಹೋಗಿ ಮತ ಹಾಕುವುದಾಗಿ ಹೇಳಿದ್ದರು. ಹಾಗಾಗಿ, ಮತ ಹಾಕಲು ಅವಕಾಶ ಇತ್ತು. ಎಂಸಿಸಿ ಬಿ ಬ್ಲಾಕ್ ನಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಮೂಲಕ ಆಕರ್ಷಣೀಯವಾದರು.

ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಸೇರಿದಂತೆ ಇತರರು ಅಜ್ಜಿಯ ಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭ್ಯರ್ಥಿಯ ಚಿಹ್ನೆ ಬದಲು..!

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ. ಜಿ. ಶ್ರೀಕಾಂತ್ ಅವರಿಗೆ ಚುನಾವಣಾ ಆಯೋಗವು ತೆಂಗಿನ ಮರ ಚಿಹ್ನೆ ಕೊಡಲಾಗಿತ್ತು. ಆದ್ರೆ, ಈಚಲು ಮರ ಫಲಕದಲ್ಲಿ ಅಳವಡಿಸುವ ಮೂಲಕ ಗೊಂದಲ ಸೃಷ್ಟಿಯಾಗಿತ್ತು.
ನೋಟಾಕ್ಕೆ ಈಚಲು ಮರ ಇತ್ತು. ಆದ್ರೆ, ಪಕ್ಷೇತರ ಅಭ್ಯರ್ಥಿ ಶ್ರೀಕಾಂತ್ ಅವರ ಹೆಸರಿನ ಮುಂದೆ ಈ ಚಿಹ್ನೆ ಹಾಕಿದ್ದರಿಂದ ಅಭ್ಯರ್ಥಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment