ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಗಂಡು ಮಗು: ನಿಮ್ಮ ಆಶೀರ್ವಾದ, ಶುಭ ಹಾರೈಕೆ ಬಯಸುತ್ತೇವೆ ಎಂದ ಕಿಂಗ್ ಕೊಹ್ಲಿ

On: February 20, 2024 9:25 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-02-2024

ನವದೆಹಲಿ: ಖ್ಯಾತ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರು ಮಂಗಳವಾರ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಗಂಡು ಮಗು ಜನಿಸಿದೆ. ಅಕಾಯ್ ಎಂದು ಹೆಸರನ್ನೂ ಸಹ ಇಡಲಾಗಿದೆ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಗಂಡು ಮಗು ಆಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲ, ಗೌಪ್ಯತೆ ಕಾಪಾಡುವುದಾಗಿ ಹೇಳಿದ್ದು, ಅಭಿಮಾನಿಗಳು ಸಹಕರಿಸುವಂತೆ ವಿನಂತಿಸಿದ್ದಾರೆ.

ಹೇರಳವಾದ ಸಂತೋಷ ಮತ್ತು ನಮ್ಮ ಹೃದಯದ ಪ್ರೀತಿಯಿಂದ, ಫೆಬ್ರವರಿ 15 ರಂದು, ನಮ್ಮ ಗಂಡು ಮಗು ಅಕಾಯ್ ಮತ್ತು ವಾಮಿಕಾ ಅವರ ಚಿಕ್ಕ ಸಹೋದರನನ್ನು ನಾವು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ!” ಎಂದು Instagram ನಲ್ಲಿ ಬರೆದುಕೊಂಡಿದ್ದಾರೆ.

“ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ದಯೆಯಿಂದ ಗೌರವಿಸುವಂತೆ ನಾವು ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ. ವಿರಾಟ್ ಮತ್ತು ಅನುಷ್ಕಾ ಎಂದು ಬರೆದಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment