ಮೆಲ್ಬರ್ನ್ ಅಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯವು ಮೊದಲ ದಿನವೇ ಕಾವೇರಿದೆ.ಅದು ಕೂಡ ಆಟಗಾರರ ಮಧ್ಯೆ, ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ಅದರಂತೆ ಮೊದಲ ಇನ್ನಿಂಗ್ಸ್ ಶುರು ಮಾಡಿದರು, ಯುವ ದಾಂಡಿಗ ಸ್ಯಾಮ್ ಕೊನ್ ಸ್ಟಾಸ್ ಅರಂಭಿಕರಾಗಿ ಕಣಕ್ಕಿಳಿದು ಅಕ್ರಮಣಕಾರಿ ಬ್ಯಾಟಿಂಗ್ ಗೆ ಮುಂದಾದರು.
ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಯುವ ಆಟಗಾರ ಸ್ಯಾಮ್ ಕೊನ್ ಸ್ಟಾಸ್ ಆರಂಭದಿಂದಲೇ ಭಾರತದ ಬೌಲಿಂಗ್ ಪಡೆಯನ್ನು ಹೈರಾಣಾಗಿಸಿದರು. ಕೇವಲ 52ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕವನ್ನು ಪೂರೈಸಿಕೊಂಡರು.
10ನೇ ಓವರ್ ಮುಗಿಯುತ್ತಿದ್ದಂತೆ ಸ್ಟ್ರೈಕ್ ಬದಲಿಸಲು ತೆರಳುತ್ತಿದ್ದ ಸ್ಯಾಮ್ ಕೊನ್ ಸ್ಟಾಸ್ ಅವರ ಭುಜಕ್ಕೆ ಭುಜ ನೀಡುವ ಮೂಲಕ ವಿರಾಟ್ ಕಿರಿಕ್ ಶುರು ಮಾಡಿದರು. ತಿರುಗಿನಿಂತ ಸ್ಯಾಮ್ ಕೊನ್ ಸ್ಟಾಸ್ ಕೊಹ್ಲಿಯೊಂದಿಗೆ ಮಾತಿನ ಚಕಮಕಿಗೆ ಮುಂದಾದರು, ಅಷ್ಟರಲ್ಲೇ ಕ್ರಿಜ್ ಅಲ್ಲಿದ್ದ ಉಸ್ಮಾನ್ ಖ್ವಾಜಾ ಹಾಗೂ ಅಂಪೈರ್ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ವಿರಾಟ್ ರ ಈ ವೀಡಿಯೋ ವೈರಲ್ ಆಗಿದ್ದು ಎಲ್ಲೇಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.