SUDDIKSHANA KANNADA NEWS/ DAVANAGERE/ DATE:21-01-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ಕಾಂಗ್ರೆಸ್ ನ ಯುವ ನಾಯಕ ಜಿ. ಬಿ. ವಿನಯ್ ಕುಮಾರ್ ಪಾದಯಾತ್ರೆಯು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಂಚರಿಸಲಿದೆ.
ಜಿ. ಬಿ. ವಿನಯ್ ಕುಮಾರ್ ಈಗಾಗಲೇ ಜಗಳೂರು, ಹರಿಹರ, ಹೊನ್ನಾಳಿ, ಚನ್ನಗಿರಿಯಲ್ಲಿ ಪಾದಯಾತ್ರೆ ಮೂಲಕ ಜನರ ಮನ ಗೆದ್ದಿದ್ದಾರೆ. ಈಗ ಮಾಯಕೊಂಡದಲ್ಲಿ ಜ.22ರಿಂದ ಪಾದಯಾತ್ರೆ ಆರಂಭವಾಗಲಿದ್ದು, ಜನರ ಬಳಿಗೆ ಹೋಗಲಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನವರಿ 25ರವರೆಗೆ ‘ವಿನಯ ನಡಿಗೆ, ಹಳ್ಳಿ ಕಡೆಗೆ’ ಪಾದಯಾತ್ರೆಯು ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ. ‘ವಿನಯ ನಡಿಗೆ ಹಳ್ಳಿ ಕಡೆಗೆ’ ವಿನೂತನ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ: ಧೂಳೆಬ್ಬಿಸುತ್ತಿದೆ ವಿನಯ ಪಾದಯಾತ್ರೆ, ಕಾಲ್ನಡಿಗೆಗೆ ಸಿಗುತ್ತಿದೆ ಜನರ ಭಾರೀ ಸ್ಪಂದನೆ, ಪ್ರೀತಿ: ಕಾಂಗ್ರೆಸ್ ಯುವ ನಾಯಕ ಬೆಳೆದು ಬಂದ ರೋಚಕ ಸ್ಟೋರಿ…!
ಕಾರಿಗನೂರು ಕ್ರಾಸ್ ಬಳಿ ಸೋಮವಾರ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಪಾದಯಾತ್ರೆ ರೂವಾರಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಜಿ.ಬಿ.ವಿನಯ್ ಕುಮಾರ್ ಸೇರಿದಂತೆ, ಜನಪ್ರತಿನಿಧಿಗಳು,
ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಸೋಮವಾರ ಎಲ್ಲೆಲ್ಲಿ ಸಂಚರಿಸಲಿದೆ..?
ವಿನಯ್ ಕುಮಾರ್ ಅವರ ಪಾದಯಾತ್ರೆಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರಿಗನೂರಿನಲ್ಲಿ ಚಾಲನೆ ಸಿಗಲಿದ್ದು, ಸೋಮವಾರ ಹಲವು ಗ್ರಾಮಗಳಲ್ಲಿ ಸಂಚರಿಸಲಿದೆ. ಕಾರಿಗನೂರು ಕ್ರಾಸ್, ಕಾರಿಗನೂರು, ಕತ್ತಲಗೆರೆ,
ಕಶೇಟ್ಟಿಹಳ್ಳಿ, ಬೆಳಲಗೆರೆ, ಸಂಗಾವಳ್ಳಿ ಹಾಗೂ ಚಿರಡೋಣಿ ಗ್ರಾಮದಲ್ಲಿ ಪಾದಯಾತ್ರೆ ನಡೆಯಲಿದೆ.
ಜ.23ಕ್ಕೆ ಎಲ್ಲಿ…?
ಜನವರಿ 23ರಂದು ಹರಲೀಪುರ, ಮರಬನಹಳ್ಳಿ, ಕೋಟೆಹಾಳ್, ಹರೋಸಾಗರ, ಸಾಗರಪೇಟೆ, ಬಸವಾಪಟ್ಟಣ, ದಾಗಿನಕಟ್ಟೆ, ಯಲೋದಹಳ್ಳಿಯಲ್ಲಿ ಪಾದಯಾತ್ರೆ ಸಂಚರಿಸಲಿದ್ದು, ಜನರ ಸಮಸ್ಯೆ, ಸಂಕಷ್ಟ ಆಲಿಸಲಿರುವ ವಿನಯ್ ಕುಮಾರ್
ಅವರಿಗೆ ಜನರು ಪ್ರೀತಿಯಿಂದ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಜನರು ಪ್ರೀತಿ, ಅಭಿಮಾನದಿಂದ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯೂ ಅದೇ ರೀತಿಯಲ್ಲಿ ಪ್ರೀತಿಯಿಂದ ಬರಮಾಡಿಕೊಳ್ಳಲಿರುವ ಜನರು,
ವಿನಯ್ ಕುಮಾರ್ ಪಾದಯಾತ್ರೆಗೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.