SUDDI KSHANA KANNADA NEWS
DAVANAGERE
DATE:30-03-2023
ಸಿದ್ದರಾಮಯ್ಯರ ಹಣಿಯಲು “ವಿಜಯಾಸ್ತ್ರ” ಪ್ರಯೋಗ…?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಣಿಯಲು ಬಿಜೆಪಿ (BJP)ಹಾಗೂ ಜೆಡಿಎಸ್ (JDS) ರಣತಂತ್ರ ರೂಪಿಸಿದೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿರ್ಧರಿಸಿರುವ ಸಿದ್ದರಾಮಯ್ಯರನ್ನು ಸೋಲಿಸಲೇಬೇಕೆಂಬ ಹಠ ತೊಟ್ಟಿರುವ ತೆನೆ ಹೊತ್ತ ಮಹಿಳೆ ಗುರುತಿನ ಜೆಡಿಎಸ್ (JDS)ಹಾಗೂ ಕೇಸರಿ ಪಡೆಯ ಬಿಜೆಪಿ (BJP) ರಣತಂತ್ರ ಹೆಣೆದಿದ್ದು, ಹೇಗಾದರೂ ಮಾಡಿ ಸೋಲಿಸಲೇಬೇಕೆಂಬ ಹಠ ತೊಟ್ಟಿದೆ.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ವರುಣಾ (VARUNA) ಕ್ಷೇತ್ರದಲ್ಲಿ ಬಿ. ವೈ. ವಿಜಯೇಂದ್ರ (B. Y. VIJAYENDRA) ಸ್ಪರ್ಧೆ ಮಾಡುವ ಕುರಿತಂತೆ ಚರ್ಚೆಯಲ್ಲಿದೆ. ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ತೆಗೆದು ಕೊಳ್ಳುತ್ತದೆಯೋ ಅದಕ್ಕೆ ಬದ್ಧರಿದ್ದೇವೆ. ಸರಿಯಾದ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ಸಿದ್ದರಾಮಯ್ಯರಿಗೂ ಗೊತ್ತಿದೆ. ಪ್ರಬಲ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದ್ದಾರೆ. ಈ ಮೂಲಕ ವಿಜಯೇಂದ್ರ (VIJAYENDRA) ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯರು ಸುಲಭವಾಗಿ ಗೆಲ್ಲಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಿದ್ದರಾಮಯ್ಯರು ನಿಂತ ನೆಲವೇ ಕುಸಿಯುತ್ತಿದೆ ಎಂಬ ಮಾತು ಬಿಎಸ್ ವೈ (BSY) ಹೇಳಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಇನ್ನು ಕೇಶವಕೃಪ (KESHAVAKRUPA)ಕ್ಕೆ ತೆರಳಿದ್ದ ವಿಜಯೇಂದ್ರ, ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಆರ್ ಎಸ್ ಎಸ್ ಪ್ರಮುಖರು ಈ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಶಿಕಾರಿಪುರದಲ್ಲಿ ಕಣಕ್ಕಿಳಿಯುತ್ತಾರೋ ಇಲ್ಲವೋ ವರುಣಾದಲ್ಲಿ ಕಣಕ್ಕಿಳಿಯುತ್ತಾರೋ ವಿಜಯೇಂದ್ರ ಎಂಬುದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರವೇ ಸ್ಪಷ್ಟವಾಗಲಿದೆ.
2018ರಲ್ಲಿ ವರುಣಾ ಕ್ಷೇತ್ರದಿಂದ ವಿಜಯೇಂದ್ರ (VIJAYENDRA) ಕಣಕ್ಕಿಳಿಯುತ್ತಾರೆ ಎಂಬ ವದಂತಿ ಹಬ್ಬಿತ್ತಾದರೂ ಆ ಬಳಿಕ ಬೇರೆಯವರು ಸ್ಪರ್ಧೆ ಮಾಡಿದ್ರು. ಆದ್ರೆ, ಈ ಬಾರಿ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯರಿಗೆ ಸವಾಲು ಒಡ್ಡುವುದು ಖಚಿತ. ಸಿದ್ದರಾಮಯ್ಯರು ಯಾರೇ ನಿಂತರೂ ತಲೆಕೆಡಿಸಿಕೊಳ್ಳುವುದಿಲ್ಲ. ಮಾತ್ರವಲ್ಲ, ಅದೃಷ್ಟದ ಕ್ಷೇತ್ರ ಸಿದ್ದರಾಮಯ್ಯರಿಗೆ ವರುಣಾ ಆಗಿದೆ. ಇಲ್ಲಿ ಶಾಸಕರಾಗಿದ್ದಾಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2013ರಲ್ಲಿ ಸ್ಪರ್ಧೆ ಮಾಡಿ ಜಯಗಳಿಸಿದ್ದರು. ಸಿದ್ದರಾಮಯ್ಯರಿಗೆ ಅದೃಷ್ಟದ ಜೊತೆಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ವರುಣಾ. 2008ರಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದ ಸಿದ್ದರಾಮಯ್ಯರು ಇಲ್ಲಿಂದ ನಿಂತು ಗೆದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕರಾದವರು. ಈ ಮಾತನ್ನು ಸ್ವತಃ ಸಿದ್ದರಾಮಯ್ಯರೇ ಹೇಳಿದ್ದಾರೆ.
ವಿಜಯೇಂದ್ರಗೂ ಇದೆಯಾ ಆಪತ್ತು..?
ಇನ್ನು ವಿಜಯೇಂದ್ರ ಗೆದ್ದರೆ ರಾಜಕೀಯವಾಗಿ ಮತ್ತಷ್ಟು ಪ್ರಬಲವಾಗಿ ಬೆಳೆಯುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋಲಿಸಿಬಿಟ್ಟರೆ ಬಿಜೆಪಿಯಲ್ಲಿ ದೊಡ್ಡ ನಾಯಕರಾಗುವುದು ಖಚಿತ. ಜೊತೆಗೆ ಯಡಿಯೂರಪ್ಪರ ಆಶೀರ್ವಾದ, ರಣತಂತ್ರ, ಲೆಕ್ಕಾಚಾರಗಳು ಸಕ್ಸಸ್ ಆಗುವುದು ಪಕ್ಕಾ. ಒಂದು ವೇಳೆ ವಿಜಯೇಂದ್ರ ಸೋತುಬಿಟ್ಟರೆ, ಬಿಜೆಪಿಯಲ್ಲಿ ಹಿಡಿತ ಕಡಿಮೆ ಮಾಡಬಹುದು. ಯಡಿಯೂರಪ್ಪರ ಹಿರಿತನ ಆಧರಿಸಿ ಮಗನಿಗೆ ಟಿಕೆಟ್ (TICKET) ನೀಡಿದೆವು. ಆದ್ರೆ, ಗೆಲ್ಲಲಿಲ್ಲ. ಈ ಕಾರಣಕ್ಕಾಗಿ ಬಿ. ವೈ. ವಿಜಯೇಂದ್ರ (B. Y. VIJAYENDRA) ಕಟ್ಟಿಹಾಕುವ ತಂತ್ರವೂ ಇದರ ಹಿಂದೆ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Y