SUDDIKSHANA KANNADA NEWS/ DAVANAGERE/ DATE:14-10-2024
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ನಾಲ್ಕು ತಿಂಗಳಾಗುತ್ತಾ ಬಂದಿದ್ದರೂ ಪತಿ ಹೊರ ತರಲು ಪತ್ನಿ ವಿಜಯ ಲಕ್ಷ್ಮಿ ಪಟ್ಟ ಕಷ್ಟಕ್ಕೆ ಫಲ ಸಿಗಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ಕರೆ ತರಲು ವಿಜಯಲಕ್ಷ್ಮಿ ವಕೀಲರಾದ ಸಿ. ವಿ. ನಾಗೇಶ್ ರನ್ನು ನೇಮಿಸಿದ್ದರು. ಆದ್ರೆ, ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆ ವಿಜಯಲಕ್ಷ್ಮೀ ಶಾಕ್ ಗೆ ಒಳಗಾದರು.
ಬೇಲ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ದಾಸನಿಗೆ ನಿರಾಸೆ ಆಗಿದೆ. ಇನ್ನು ಬೆಂಗಳೂರಿನ ಮನೆಯಲ್ಲಿರುವ ವಿಜಯಲಕ್ಷ್ಮೀ ಅವರು ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಕಣ್ಣೀರು ಸುರಿಸಿದ್ದಾರೆ. ಮಾತ್ರವಲ್ಲ, ಪತಿ ದರ್ಶನ್ ತೂಗುದೀಪ ಅವರ ಆರೋಗ್ಯದಲ್ಲಿ ಏರುಪೇರು ಟೆನ್ಶನ್ ತಂದಿದೆ.
ನಾಗೇಶ್ ಮಂಡಿಸಿದ್ದ ವಾದದಿಂದ ಜಾಮೀನು ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ನಂಬಿಕೆ ಹೊಂದಿದ್ದ ವಿಜಯಲಕ್ಷ್ಮೀ ಅವರು ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಕಣ್ಣೀರು ಸುರಿಸಿದ್ದಾರೆ. ಮಾತ್ರವಲ್ಲ, ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹಲವಾರು ಭೇಟಿ ನೀಡಿದ್ದರು. ಜೊತೆಗೆ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಬರಲು ಸಾಕಷ್ಟು ಪ್ರಯಾಸಪಟ್ಟಿದ್ದರು. ಬೇಲ್ ವಜಾ ಆಗುತ್ತಿದ್ದಂತೆ ದರ್ಶನ್ ಗೆ ಕರೆ ಮಾಡಿ ಬಿಕ್ಕಿ ಬಿಕ್ಕಿ ಅತ್ತರು ಎಂದು ಮೂಲಗಳಿಂದ ತಿಳಿದು ಬಂದಿದೆ.