SUDDIKSHANA KANNADA NEWS/ DAVANAGERE/ DATE:07-08-2023
ಬೆಂಗಳೂರು: ವಿಜಯ ರಾಘವೇಂದ್ರ (Vijay Raghavendra) ಸ್ಯಾಂಡಲ್ ವುಡ್ ನ ಸಭ್ಯ ನಟ. ಬಾಲ್ಯ ನಟನಾಗಿ ಗುರುತಿಸಿಕೊಂಡು ಹಲವು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದವರು. ಚಿನ್ನಾರಿ ಮುತ್ತಾ ಅಂತಾನೇ ಫೇಮಸ್ ಆಗಿರುವ ವಿಜಯ್ ರಾಘವೇಂದ್ರ (Vijay Raghavendra) ಬದುಕಲ್ಲಿ ಬಿರುಗಾಳಿ.
ಅದು ಅಂತಿಂಥ ಬಿರುಗಾಳಿ ಅಲ್ಲ. ತಡೆದುಕೊಳ್ಳಲು ಆಗದಂಥ ನೋವು. ಪ್ರೀತಿಸಿ ಮದುವೆಯಾದ ಮನದೆನ್ನೆ ಇನ್ನಿಲ್ಲ ಎಂಬ ಊಹಿಸಿಕೊಳ್ಳುವುದು ಕಷ್ಟವಾಗಿಬಿಟ್ಟಿದೆ. ಪತ್ನಿ ಸಾವು ನೆನೆಪು ಗಳಗಳ ಅಳತೊಡಗಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಸಾವಿನಿಂದ ಇನ್ನೂ ಹೊರ ಬಂದಿಲ್ಲ. ಆಗಲೇ ಮತ್ತೊಂದು ತಡೆದು ಕೊಳ್ಳಲಾಗದ ಆಘಾತ ಎದುರಿಸುವಂತಾಗಿದೆ.
ಹೇಗಾಯ್ತು ಸಾವು…?
ಸ್ನೇಹಿತರ ಜೊತೆ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿನ ಬ್ಯಾಂಕಾಂಕ್ ಗೂ ತೆರಳಿದ್ದರು. ಆದ್ರೆ, ಅಲ್ಲಿ ಹೃದಯಘಾತಕ್ಕೊಳಗಾಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಈ ಸುದ್ದಿಯನ್ನೂ ಓದಿ:
Police: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ವರ್ಗಾವಣೆ: ಈ ವಿಚಾರಗಳಿಗೆ ಆಯ್ತು ಟ್ರಾನ್ಸಫರ್…!
ನಿನ್ನೆ ಅವರಿಗೆ ಲೋ ಬಿಪಿಯಿಂದಾಗಿ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ:
ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ ನಲ್ಲಿ ಪೂರ್ಣಗೊಂಡಿದೆ. ಬುಧವಾರ ಸಂಜೆ ಬೆಂಗಳೂರಿಗೆ ಮೃತದೇಹ ಬರಲಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ. ಕೆ. ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಹಸ್ತಾಂತರ ಪ್ರಕ್ರಿಯೆ ಚುರುಕು:
ಪೋಸ್ಟ್ ಮಾರ್ಟಂ ಮುಗಿದಿದ್ದರೂ, ಇನ್ನೂ ಹಲವು ವಿದೇಶಿ ಹಸ್ತಾಂತರ ಪ್ರಕ್ರಿಯೆಗಳು ನಡೆಯಬೇಕಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸ್ಪಂದನಾ ಸಾವಿನ ಕುರಿತಂತೆ ಬ್ಯಾಂಕಾಕ್ ವಿಧಿವಿಧಾನ ಮುಗಿಯಲು ನಾಳೆ ಮಧ್ಯಾಹ್ನ ಆಗುತ್ತದೆ. ಆದ್ದರಿಂದ ವಿಧಿ ವಿಧಾನ ಮುಗಿಸಿ ಮೃತದೇಹ ಸಂಜೆ ಹೊರಡಲಾಗುತ್ತದೆ. ರಾತ್ರಿಯ ಒಳಗೆ ಮೃತ ದೇಹ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ ಕೆಲವರು ಅಲ್ಲಿಗೆ ಹೋಗೋಣ ಎಂದುಕೊಂಡಿದ್ದೆವು. ಆದ್ರೆ ನಾವು
ಹೋಗೋ ಅಷ್ಟರಲ್ಲಿ ಸಮಯ ಆಗುತ್ತೆ. ಆದ್ರಿಂದ ನಾವ್ಯಾರೂ ಇಲ್ಲಿಂದ ಹೋಗ್ತಾ ಇಲ್ಲ ಎಂದಿದ್ದಾರೆ. ನಾಳೆ ರಾತ್ರಿ 11.30ರ ಹೊತ್ತಿಗೆ ಮೃತದೇಹ ಬರಬಹುದು. ಬುಧವಾರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು
ತಿಳಿಸಿವೆ.
ಸ್ಪಂದನಾ ಹಿನ್ನೆಲೆ ಏನು..?
ಸ್ಪಂದನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಬೆಳ್ತಂಗಡಿಯವರು. ಬೆಳೆದಿದ್ದೆಲ್ಲಾ ಸ್ಪಂದನ ಬೆಂಗಳೂರಿನಲ್ಲಿ. ತಂದೆ ಬಿ ಕೆ ಶಿವರಾಂ ಇವರು ಸಹಾಯಕ ಪೋಲಿಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಸ್ಪಂದನ ರವರು ತಮ್ಮ ಶಾಲಾ ಶಿಕ್ಷಣವನ್ನು
ಬೆಂಗಳೂರಿನ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ಪೂರ್ಣಗೊಳಿಸಿ, ನಂತರ ಕೇರಳದ ಎಂಇಎಸ್ ಕಾಲೇಜ್ ನಲ್ಲಿ ಪದವಿ ಪಡೆದರು.
ಭೇಟಿಯಲ್ಲೇ ಪ್ರೇಮ:
ವಿಜಯ ರಾಘವೇಂದ್ರ (Vijay Raghavendra) ಮತ್ತು ಸ್ಪಂದನರವರು 2007ರಲ್ಲಿ ಕೆಫೆ ಒಂದರಲ್ಲಿ ಭೇಟಿಯಾಗಿ, ಇಬ್ಬರೂ ಒಬ್ಬರನ್ನು ಒಬ್ಬರು ಇಷ್ಟ ಪಟ್ಟಿದ್ದರು. ತದನಂತರ ಕುಟುಂಬದವರ ಒಪ್ಪಿಗೆಯೊಂದಿಗೆ ಆಗಸ್ಟ್ 26ರಂದು ಮದುವೆ ಯಾಗಿದ್ದರು. ಈ ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು, ಆದರೆ ವಿಧಿ ಆಟವೇ ಬೇರೆ, ಯಾರಿಗೂ ಹೇಳದೆ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ.
ವಿಜಯ ರಾಘವೇಂದ್ರ (Vijay Raghavendra) ಅವರದ್ದು ಮೃದು ಸ್ವಭಾವ. ನಗುನಗುತ್ತಾ ಎಲ್ಲರೊಂದಿಗೆ ಇರುವವರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಲನಚಿತ್ರಗಳಲ್ಲಿ ನಟಿಸಿದವರು. ಅದೇ ರೀತಿ ಅವರ ಪತ್ನಿ ಸ್ಪಂದನ ಕೂಡ ತುಂಬಾನೇ ಸರಳ. ಮಾತು ಕಡಿಮೆ. ವಿಜಯ ರಾಘವೇಂದ್ರ ಅವರಿಗೆ ಬೆನ್ನೆಲುಬುವಾಗಿ ನಿಂತಿದ್ದರು.
ಸಹೋದರನ ಪರ ಪ್ರಚಾರ:
ಕಳೆದ ವಿಧಾನಸಭಾ ಬೆಳ್ತಂಗಡಿ ಕ್ಷೇತ್ರದ ಚುನಾವಣಾ ಸಂದರ್ಭ ಸ್ಪಂದನ ರವರ ತಮ್ಮ ರಕ್ಷಿತ್ ಶಿವರಾಂ ಅವರ ಪರ ಪ್ರಚಾರ ನಡೆಸಿದರು. ಸಹೋದರನ ಪ್ರಚಾರಕ್ಕಾಗಿ ಸ್ಪಂದನ ಮತ್ತು ವಿಜಯ್ ರಾಘವೇಂದ್ರ (Vijay Raghavendra) ಅವರು 15 ದಿನ ಬೆಳ್ತಂಗಡಿಯಲ್ಲಿ ಇದ್ದು ಪ್ರಚಾರ ನಡೆಸಿ, ಬೆಂಬಲಿಸಿದ್ದರು.
ಸ್ಪಂದನಾ ಅವರ ಹಠಾತ್ ಸಾವು ದಿಗ್ಭ್ರಮೆ ಜೊತೆಗೆ ಆಘಾತ ತಂದಿದೆ. ವಿಜಯ ರಾಘವೇಂದ್ರ ಕುಟುಂಬದಲ್ಲಿ ನೋವಿನ ಕಾರ್ಮೋಡ ಕವಿದಿದೆ. ಮನೆಗೆ ಬರುತ್ತಿರುವ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸ್ನೇಹಿತರಂತೂ ಸಂತೈಸಲು ಸಾಧ್ಯವಾಗದೇ ಕಣ್ಣೀರು ಸುರಿಸುತ್ತಿದ್ದಾರೆ.
Vijay Raghavendra, Vijay Raghavendra wife, Vijay Raghavendra Wife Spandana, Vijay Raghavendra Wife Death, Vijay Raghavendra News, Vijay Raghavendra News Update, Vijay Raghavendra Suddi, Vijay Raghavendra Wife Spandana death news