ಬೆಂಗಳೂರು: ಬಾಲ್ಯದಿಂದಲೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅಭಿನಯದ ನೂತನ ಬಿಗ್ ಬಜೆಟ್ ಆಕ್ಷನ್ ಥ್ರಿಲ್ಲರ್ ‘ಮೈಸ’ (Mysaa) ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ರಗಡ್ ಹಾಗೂ ಸಾಹಸಮಯ ಜಗತ್ತನ್ನು ಅನಾವರಣಗೊಳಿಸಿರುವ ಈ ಟೀಸರ್ ವೀಕ್ಷಿಸಿದ ಅವರ ಪತಿ, ನಟ ವಿಜಯ್ ದೇವರಕೊಂಡ ರಶ್ಮಿಕಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಪೋಸ್ಟ್‌ನಲ್ಲಿ ಏನಿದೆ?
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಟೀಸರ್ ಶೇರ್ ಮಾಡಿಕೊಂಡ ವಿಜಯ್ ದೇವರಕೊಂಡ, “ಮೈಸ… ಏನು ಈ ವೈಲ್ಡ್‌ನೆಸ್? ಇದು ನಿಜಕ್ಕೂ ಅದ್ಭುತವಾಗಿದೆ!” ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಈ ಸಿನಿಮಾದ ಹಾಡಿನ ಚಿತ್ರಿಕರಣದ ವೇಳೆ ರಶ್ಮಿಕಾ ಅವರಿಗೆ ಹಿಪ್ ಇಂಜುರಿ (ಸೊಂಟದ ಗಾಯ) ಆಗಿದ್ದನ್ನು ನೆನಪಿಸಿಕೊಂಡು, “ದಯವಿಟ್ಟು ಇನ್ಮುಂದೆ ಯಾವುದೇ ಗಾಯಗಳನ್ನು ಮಾಡಿಕೊಳ್ಳಬೇಡ” ಎಂದು ಕಾಳಜಿಯಿಂದ ವಿನಂತಿಸಿದ್ದಾರೆ.
ಪಂಚಿಂಗ್ ಕಲಿಪಿಸಿದ ಪತಿಗೆ ರಶ್ಮಿಕಾ ಥ್ಯಾಂಕ್ಸ್!
ವಿಜಯ್ ಅವರ ಪೋಸ್ಟ್‌ಗೆ ಕ್ಯೂಟ್ ಆಗಿ ಪ್ರತಿಕ್ರಿಯಿಸಿರುವ ರಶ್ಮಿಕಾ, “ಸಾಹಸ ದೃಶ್ಯಗಳಲ್ಲಿ ಸರಿಯಾಗಿ ಪಂಚ್ (ಪೆಟ್ಟು) ಕೊಡುವುದು ಹೇಗೆ ಎಂದು ನನಗೆ ಹೇಳಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ವಿಜ್ಜು! ಆ ಅಭ್ಯಾಸ ಈಗ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಕೆಲಸಕ್ಕೆ ಬಂದಿದೆ” ಎಂದು ಬರೆದುಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಗಾಯದಿಂದ ಸಿಕ್ಕ ಬ್ರೇಕ್ ಮತ್ತು ಮದುವೆ ಬಾಂಧವ್ಯ:
ಚಿತ್ರೀಕರಣದ ವೇಳೆ ಆದ ಗಾಯದಿಂದಾಗಿ ರಶ್ಮಿಕಾ ಅವರು ಕೆಲ ಕಾಲ ವಿಶ್ರಾಂತಿ ಪಡೆಯಬೇಕಾಯಿತು. ಕಳೆದ ಫೆಬ್ರವರಿಯಲ್ಲಿ ಉದಯಪುರದಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ಹಸೆಮಣೆ ಏರಿದ್ದ ರಶ್ಮಿಕಾ, ಮದುವೆಯ ನಂತರ ಇಬ್ಬರ ಶೂಟಿಂಗ್ ಬ್ಯುಸಿ ಶscheduleನಿಂದಾಗಿ ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಈ ಗಾಯದಿಂದಾಗಿ ಸಿಕ್ಕ ವಿರಾಮವು ಇಬ್ಬರಿಗೂ ಮನೆಯಲ್ಲಿ ಒಟ್ಟಿಗೆ ಸಮಯ ಕಳೆಯಲು ಸಹಾಯ ಮಾಡಿತು ಎಂದು ರಶ್ಮಿಕಾ ತಿಳಿಸಿದ್ದಾರೆ.
ಮೈಸ ಸಿನಿಮಾದ ಹಿನ್ನೆಲೆ:
ರವೀಂದ್ರ ಪುಲ್ಲೆ ನಿರ್ದೇಶನದ ‘ಮೈಸ’ ಚಿತ್ರದಲ್ಲಿ ರಶ್ಮಿಕಾ ಗೋಂಡ್ ಬುಡಕಟ್ಟು ಜನಾಂಗದ ಧೀರ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಅಂಡರ್‌ವಾಟರ್ ಆಕ್ಷನ್ ಸೇರಿದಂತೆ ಹಲವು ಸಾಹಸ ದೃಶ್ಯಗಳಲ್ಲಿ ನಟಿಸಿರುವ ಈ ಚಿತ್ರವು ನವೆಂಬರ್ 27 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.





Leave a comment