SUDDIKSHANA KANNADA NEWS/DAVANAGERE/DATE:27_09_2025
ದಾವಣಗೆರೆ: ದಾವಣಗೆರೆ ನಗರದಲ್ಲಿ ಸಾಮಾಜಿಕ ಅಶಾಂತಿ ಹಾಗೂ ಸಾಮಾಜಿಕ ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿರುವ ಇಸ್ಲಾಮಿಕ್ ಮೂಲಭೂತವಾದಿಗಳ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
READ ALSO THIS STORY: ಹಿಂದೂಗಳ ಮೇಲೆ ಕೇಸ್, ಆಜಾದ್ ನಗರದಲ್ಲಿ ಕಾನೂನು ಗಾಳಿಗೆ ತೂರಿದ್ದರೂ ಇದ್ದರೂ ಕ್ರಮ ಏಕಿಲ್ಲ: ಹಿಂದೂ ಮುಖಂಡರ ರೋಷಾವೇಶ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೇದಿಕೆಯ ಕೇಶವಮೂರ್ತಿ ಅವರು ಬಹಳ ಹಿಂದಿನಿಂದಲೂ ದಾವಣಗೆರೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಕಿಡಿಗೇಡಿಗಳ ಕೃತ್ಯವನ್ನು ಹುಟ್ಟು ಹಾಕುವ ಮೂಲಕ ಹಿಂದೂ ಸಮಾಜವನ್ನು ಕೆಣಕುವ, ಕಾಲು ಕೆದರಿ ಜಗಳ ಎಳೆಯುವ ಕೃತ್ಯ ನಡೆಸಲಾಗುತ್ತಿದೆ. ಮುಸ್ಲಿಂ ತುಷ್ಟಿಕರಣ ನಡೆಸುವ ಸೆಕ್ಯುಲರ್ ಶಕ್ತಿಗಳ ಕುಮಕ್ಕು ಪಕ್ಷಪಾತಿ ಧೋರಣೆಯು ಬೆಂಕಿಗೆ ತುಪ್ಪವನ್ನು ಸುರಿಯುವ ಯತ್ನವಾಗಿ ಇದಕ್ಕೆ ಉತ್ತೇಜನ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಷ್ಟೀಕರಣ ನೀತಿ ಹಾಗೂ ರಾಜಕೀಯ ಒತ್ತಡಕ್ಕೆ ಒಳಗಾದ ಜಿಲ್ಲಾ ಆಡಳಿತ ನಿಷ್ಕ್ರಿಯವಾಗಿ ನಡೆದುಕೊಂಡು ಕೆಲವೊಮ್ಮೆ ಅವುಗಳನ್ನು ಬೆಂಬಲಿಸಿ ಮತಾಂತ ಶಕ್ತಿಗಳ ಹುಚ್ಚಾಟಕ್ಕೆ ಹಿಂಬು ಕೊಟ್ಟಂಗಾಗಿದೆ ಎಂದು ದೂರಿದರು.
ಗಣೇಶ ಉತ್ಸವ ಸಂದರ್ಭದಲ್ಲಿ ನಡೆದಿರುವ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಒಂದೆರಡು ವರ್ಷಗಳಿಂದ ಹಿಂದೂಗಳು ನೆಮ್ಮದಿಯಿಂದ ಗಣೇಶೋತ್ಸವವನ್ನು ನಡೆಸುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲು ತೂರುವುದು, ಗಲಾಟೆ ಎಬ್ಬಿಸುವುದು, ಹಿಂಸಾಚಾರಕ್ಕೆ ತೊಡಗುವುದು ಎಗ್ಗಿಲ್ಲದೆ ನಡೆಯುತ್ತಿದೆ. ಆಡಳಿತ ಆ ಮತಾಂಧ ದುಷ್ಟ ಹಿಂದೂ ವಿರೋಧಿ ಶಕ್ತಿಗಳಿಗೆ ಶರಣಾಗತಿಯಾಗಿ ಮೆರವಣಿಗೆಗಳನ್ನು ನಿರ್ಬಂಧಿಸಿದೆ. ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಮುಸಲ್ಮಾನರಿಗೆ ರಾಜಕೀಯ ರಕ್ಷಾ ಕವಚ ಆಡಳಿತದ ಬೆಂಬಲ ಅವರ ಸೊಕ್ಕಿನ ನಡವಳಿಕೆಯನ್ನು ದುಪ್ಪಟ್ಟುಗೊಳಿಸಿದೆ. ನಡುರಸ್ತೆಯಲ್ಲಿ ಆನೆಕೊಂಡ ಜಾತ್ರೆ ಸಂದರ್ಭದಲ್ಲಿ ಮುಸ್ಲಿಂರು ತಲವಾರು ಪ್ರದರ್ಶಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಆಡಳಿತ ಕಣ್ಣುಮುಚ್ಚಿ ಕೂತಿದೆ. ಅದು ದಾವಣಗೆರೆಯ ಸಾಮಾಜಿಕ ನೆಮ್ಮದಿಗೆ ಕೊಳ್ಳಿ ಇಡುತ್ತಿದೆ. ಐ ಲವ್ ಮುಹಮ್ಮದ್ ಅಭಿಯಾನ ಕೂಡ ಅವರದ್ದೇ ಮುಂದಿನ ಭಾಗವಾಗಿದೆ. ಒಳ ಹೊರಗಿನ ಶಕ್ತಿಗಳು ಒಗ್ಗೂಡಿ ಕಾರ್ಯಾಚರಣೆಗೆ ಇಳಿದಿರುವ ಲಕ್ಷಣಗಳು ಗೋಚರಿಸುತ್ತಿದೆ. ಮತಾಂಧ ಇಸ್ಲಾಮಿಕ್ ಶಕ್ತಿಗಳೊಂದಿಗೆ ಅರ್ಬನ್ ನಕ್ಸಲ್ ಕಾರ್ಯಾಚರಣೆಯಲ್ಲಿ ತೊಡಗಿದಂತೆ ಭಾಸವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಸಲ್ಮಾನರನ್ನು ಮೆಚ್ಚಿಸಲು ಜಿಲ್ಲಾಡಳಿತ ಹಾಗೂ ಮಂತ್ರಿಗಳು ಹಿಂದೂ ಸಾಮಾಜಿಕ ಕಾರ್ಯಕರ್ತರನ್ನು ಹಿಂಸಿಸುವ ಕಾರ್ಯಕ್ಕೆ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ದಾಖಲೆಗಳನ್ನು ದಾಖಲಿಸುತ್ತಾ ಬಂಧಿಸುವ ಕಿರುಕಳ ನೀಡುವ ಮಾನಸಿಕ ಚಿತ್ರ ಹಿಂಸೆ ನೀಡಲಾಗುತ್ತಿದ್ದು, ಹಿಂದೂ ಜಾಗರಣದ ರಾಜ್ಯ ಸಹ ಸಂಚಾಲಕರನ್ನು ಈ ಎಲ್ಲಾ ತರಹದ ಚಿತ್ರಹಿಂಸೆ ನೀಡಿ ಈಗ ಗಡೀಪಾರು ಮಾಡುವ ಕೃತ್ಯವನ್ನು ಎಸಗುತ್ತಿದ್ದು, ಇದನ್ನು ಖಂಡಿಸುವುದಾಗಿ ಹೇಳಿದರು.
ಸಹನೆಗೂ ಮಿತಿ ಇದೆ. ನಿರಂತರವಾಗಿ ನಡೆದಿರುವ ಮತಾಂಧ ಮುಸ್ಲಿಂ ಪುಂಡಾಟ ಅದಕ್ಕೆ ಪೊಲೀಸ್ ಬೆಂಬಲ ಜೊತೆಗೆ ರಾಜಕೀಯ ಕುಮ್ಮಕ್ಕಿನಿಂದ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ದಬ್ಬಾಳಿಕೆ ದೌರ್ಜನ್ಯವನ್ನು ಸಹಿಸಲಾಗದು. ಇದರ ವಿರುದ್ಧ ಪ್ರಬಲವಾಗಿ ಜನಾಂದೋಲನಕ್ಕೆ ಹಿಂದೂ ಜಾಗರಣ ವೇದಿಕೆ ಕರೆ ನೀಡಬೇಕಾಗುತ್ತದೆ. ದೇಶದ್ರೋಹಿ, ಸಮಾಜಘಾತುಕ ಹಿಂದೂ ವಿರೋಧಿ ಶಕ್ತಿಗಳ ಪುಂಡಾಟಿಕೆಗೆ ಕೊನೆ ಹಾಡಲು ಹಾಗೂ ಜನಶಕ್ತಿ ನಿರ್ಮಾಣಕ್ಕೆ ಹಿಂದೂ ಜಾಗರಣ ವೇದಿಕೆ ಧುಮುಕಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುನೀತ್, ಅನಿಲ್ ಹಾಜರಿದ್ದರು.