SUDDIKSHANA KANNADA NEWS
DAVANAGERE
DATE:29-03-2023
ದಾವಣಗೆರೆ: ಬಹುತಾರಾಗಣ ಇರುವ ವೀರಂ (VEERAM) ಚಿತ್ರವು ಏಪ್ರಿಲ್ (APRIL) 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರದ ಪ್ರಮೋಷನ್ (PRAMOSSION) ಗಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (PRAJWAL DEVARAJ), ಶ್ರೀನಗರ ಕಿಟ್ಟಿ ಸೇರಿದಂತೆ ತಾರಾಗಣವು ದಾವಣಗೆರೆ (DAVANAGERE)ಗೆ ಆಗಮಿಸಿತ್ತು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾದ ನಿರ್ದೇಶಕ ಖದರ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಹಿರಿಯ ನಟಿ ಶೃತಿ, ಅಚ್ಯುತ್ ಕುಮಾರ್, ಶಿಷ್ಯ ದೀಪಕ್, ಚಿರಾಗ್ ಜಾನಿ, ಬಲರಾಜವಾಡಿ, ಮೈಕೋ ನಾಗರಾಜ್, ಗಿರೀಶ್, ಸ್ವಾತಿ ಸೇರಿದಂತೆ ಹಲವು ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ವೀರಂ ಸಾಹಸಸಿಂಹ (SAHASA SIMHA)ಡಾ. ವಿಷ್ಣುವರ್ಧನ್ (VISHNUVARDHAN) ಅವರಿಗೆ ಅರ್ಪಿಸಲಾಗುತ್ತದೆ. ಸಿನಿಮಾದಲ್ಲಿ ವಿಷ್ಣುವರ್ಧನ್ ರ ಗೆಟಪ್ ಚೆನ್ನಾಗಿ ಮೂಡಿ ಬಂದಿದೆ. ಕೆ. ಎಂ. ಶಶಿಧರ್ ನಿರ್ಮಾಣದ ಹೊಣೆ ಹೊತ್ತಿದ್ದು, ಅನೂಪ್ ಸೀಳಿನ್ ಸಂಗೀತ (MUSIC) ನೀಡಿದ್ದು, ಡ್ಯಾನಿ ಮಾಸ್ಟರ್ (MASTER) ಅವರು ಸಾಹಸ ನಿರ್ದೇಶನ (DIRECTION) ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಸಾಹಿತ್ಯ ಬರೆದಿದ್ದು, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ವೀರಂ (VEERAM) ಎಂದರೆ ಯಾರಿಗೂ ಹೆದರದ ವ್ಯಕ್ತಿ. ಚಿತ್ರದಲ್ಲಿ ಮಾಸ್ ಜೊತೆಗೆ ಎಮೋಷನಲ್ ನ ಕಥಾಹಂದರವಿದೆ. ಅಕ್ಕ ತಮ್ಮಂದಿರ ಪ್ರೀತಿ, ಕಾಳಜಿ ಹಾಗೂ ಆಕಾಂಕ್ಷೆಯನ್ನು ತೋರುವ ಭಾವಾನಾತ್ಮಕತೆಯುಳ್ಳ ಈ ಚಿತ್ರದಲ್ಲಿ ನಾಯಕ ನಟ ಡಾ. ವಿಷ್ಣುವರ್ಧನ್ (VISHNUVARDHAN) ರ ಅಭಿಮಾನಿಯಾಗಿ ಏನೆಲ್ಲಾ ಮಾಡ್ತಾರೆ? ತಮ್ಮಂದಿರು ನೆಮ್ಮದಿ ಹಾಗೂ ಖುಷಿಯ ಜೀವನ ನಡೆಸಬೇಕು. ಯಾವುದೇ ಹೊಡೆದಾಟ, ಬಡಿದಾಟದ ಗೋಜಿಗೆ ಹೋಗದೇ ತಮ್ಮಷ್ಟಕ್ಕೆ ತಾವು ಇರಬೇಕೆಂಬುದು ಅಕ್ಕನ ಆಸೆಯಾಗಿರುತ್ತದೆ. ತಮ್ಮಂದಿರು ಅಕ್ಕನ ಆಸೆಯನ್ನು ಈಡೇರಿಸುತ್ತಾರೋ ಇಲ್ಲವೋ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂದು ಹೇಳಿದರು.
ಪ್ರಜ್ವಲ್ ದೇವರಾಜ್ (PRAJWAL DEVARAJ) ಇದುವರೆಗೆ ಲವರ್ (LOVER) ಬಾಯ್ (BOY)ಲುಕ್ ನಲ್ಲಿ ನಟಿಸಿದ ಚಿತ್ರಗಳೇ ಹೆಚ್ಚು. ಪೊಲೀಸ್ ಪಾತ್ರವನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದ್ರೆ, ವೀರಂ ಸಿನಿಮಾದಲ್ಲಿ ಮ್ಯಾನರಿಸಂ ಬೇರೆಯದ್ದೇ ಇರುತ್ತೆ. ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಲಿದೆ. ಫೈಟಿಂಗ್ ಸೀನ್ ಗಳೂ ಇವೆ. ಈ ಎಲ್ಲಾ ಕಾರಣಗಳಿಂದ ವೀರಂ ಸಿನಿಮಾವು ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎಂದರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ವೀರಂ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್ ಸೇರಿದಂತೆ ಇತರೆ ಕಾರಣಗಳಿಂದ ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹಾಕಲಾಯಿತು. ಅದ್ಧೂರಿಯಾಗಿ ಬಿಡುಗಡೆ (RELEASE) ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಮಾಹಿತಿ ನೀಡಿದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ದಾವಣಗೆರೆಗೆ ಹಲವು ವರ್ಷಗಳ ಬಳಿಕ ಬಂದಿದ್ದೇನೆ. ಟೋನಿ ಚಿತ್ರದ ವೇಳೆ ಇಲ್ಲಿಗೆ ಬಂದಿದ್ದೆ. ಇಲ್ಲಿನ ಬೆಣ್ಣೆದೋಸೆ ಸವಿದು ಖುಷಿಯಾಯಿತು. ಈ ಚಿತ್ರದಲ್ಲಿ
ಪ್ರಜ್ವಲ್ ದೇವರಾಜ್, ರಚಿತಾ ರಾಮ್, ದೀಪಕ್ ಸೇರಿದಂತೆ ಹಲವು ನಟರ ತಾರಾಬಳಗವಿದೆ. ಚಿತ್ರ ವೀಕ್ಷಿಸಿ ಅಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ನಿರ್ಮಾಪಕ ಕೆ. ಎಂ. ಶಶಿಧರ್, ಪ್ರಜ್ವಲ್ ದೇವರಾಜ್, ಗಿರೀಶ್ ಮತ್ತಿತರರು ಹಾಜರಿದ್ದರು.