SUDDIKSHANA KANNADA NEWS/ DAVANAGERE/ DATE:31_07_2025
ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣವು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವೃತ್ತಿ ರಂಗನಾಟಕ ರಚನೆಗೆ ಆಹ್ವಾನಿಸಿತ್ತು. ಆಹ್ವಾನಿತ ನಾಟಕಗಳಲ್ಲಿ ಡಾ. ವೀಣಾ ಪಿ. ಅವರ “ಜೀವದಾಯಿ” ನಾಟಕವು ಆಯ್ಕೆಯಾಗಿದೆ.
ಈ ಸುದ್ದಿಯನ್ನೂ ಓದಿ: ಪಕ್ಷ ನಿಷ್ಠೆ, ಶ್ರಮಕ್ಕೆ ಪ್ರತಿಫಲ: ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಪಡೆದ “ಯುವನಾಯಕ”ನಿಗೆ ಪ್ರಮುಖ ಹುದ್ದೆ ಜವಾಬ್ದಾರಿ
2025ರ ಫೆಬ್ರವರಿ ತಿಂಗಳಲ್ಲಿ ವೃತ್ತಿ ರಂಗನಾಟಕ ರಚನಾ ತರಬೇತಿ ಶಿಬಿರ ಏರ್ಪಡಿಸಿತ್ತು. ಒಂದು ವಾರ ಕಾಲ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಯಶಸ್ವಿಯಾಗಿ ಶಿಬಿರ ಜರುಗಿತ್ತು.
ಈ ಸುದ್ದಿಯನ್ನೂ ಓದಿ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಗಾಯತ್ರಿ ಸಿದ್ದೇಶ್ವರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!
ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವೃತ್ತಿ ರಂಗನಾಟಕವೊಂದನ್ನು ರಚಿಸಲು ಆಹ್ವಾನಿಸಲಾಗಿತ್ತು. ತೀರ್ಪುಗಾರರ ತೀರ್ಪಿನ ಮೇರೆಗೆ ಆಯ್ಕೆಯಾದ ಈ ನಾಟಕವನ್ನು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ವತಿಯಿಂದ ಪ್ರಕಟಿಸಲಾಗುವುದು ಎಂದು ದಾವಣಗೆರೆ ರಂಗಾಯಣ ವೃತ್ತಿ ರಂಗಭೂಮಿ ವಿಶೇಷಾಧಿಕಾರಿ ರವಿಚಂದ್ರ ಹಾಗೂ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.