ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಜ್ಯಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೇಸ್ ತಂಡ ಫಸ್ಟ್..!

On: October 21, 2024 10:39 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-10-2024

ದಾವಣಗೆರೆ: ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಟಾನದ ಆಶ್ರಯದಲ್ಲಿ 3 ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ರೋಚಕ ರಾಜ್ಯಮಟ್ಟದ ಮುಕ್ತ ವಾಲಿವಾಲ್ ಪಂದ್ಯಾವಳಿಗಳು ನಡೆದವು.

ಟೂರ್ನಿಯ ಉದ್ದಕ್ಕೂ ಅದ್ವಿತೀಯ ಪ್ರದರ್ಶನ ನೀಡಿದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೇಸ್ ತಂಡ ಮೊದಲ ಬಹುಮಾನ ಪಡೆಯಿತು. ಇದರೊಂದಿಗೆ 40 ಸಾವಿರ ರೂ ನಗದು ಹಾಗೂ ಅಕರ್ಷಕ ಟ್ರೋಫಿಯನ್ನು ಈ ತಂಡ ತನ್ನದಾಗಿಸಿಕೊಂಡಿತು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 15 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಸೆಮಿಫೈನಲ್ ಪಂದ್ಯದಲ್ಲಿ ದಾವಣಗೆರೆ ಜಿಲ್ಲೆಯ ಕೆರೆಬಿಳಚಿ ಹಾಗೂ ಹುಬ್ಬಳ್ಳಿಯ ರೈಲ್ವೇಸ್ ತಂಡದ ಆಟಗಾರರು ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರವಾದರು.

ಅಂತಿಮವಾಗಿ ಕೆರೆಬಿಳಚಿಯ ತಂಡವನ್ನು ಮಣಿಸಿದ ಹುಬ್ಬಳ್ಳಿಯ ರೈಲ್ವೇಸ್ ತಂಡ ಫೈನಲ್ ತಲುಪಿತು. ಫೈನಲ್‌ನಲ್ಲಿ ಆತಿಥೇಯ ದಾವಣಗೆರೆ ತಂಡದ ವಿರುದ್ಧ ಹುಬ್ಬಳ್ಳಿಯ ಹುಡುಗರು ನಿರಾಯಾಸವಾಗಿ ಜಯಗಳಿಸಿದರು. ಪರಾಭವಗೊಂಡ ದಾವಣಗೆರೆ ವಾಲಿಬಾಲ್ ಅಸೋಸಿಯೇಷನ್ ತಂಡ ದ್ವಿತೀಯ ಸ್ಥಾನದೊಂದಿಗೆ 30 ಸಾವಿರ ರೂ ನಗದು, ಆಕರ್ಷಕ ಟ್ರೋಫಿ ಪಡೆಯಿತು.

ಮೂರನೇ ಸ್ಥಾನಕ್ಕಾಗಿ ಕೆರೆಬಿಳಚಿ ಮತ್ತು ಹುಚ್ಚವ್ವನಹಳ್ಳಿ ತಂಡಗಳ ನಡುವೆ ನಡೆದ ಮತ್ತೊಂದು ರೋಚಕ ಪಂದ್ಯದಲ್ಲಿ ಕೆರೆಬಿಳಚಿ ತಂಡ 25 ಅಂಕಗಳಿಸಿದರೆ, ಹುಚ್ಚವ್ವನಹಳ್ಳಿ ತಂಡ 23 ಅಂಕಗಳಿಸಿ 4 ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಕೆರೆಬಿಳಚಿ ತಂಡ ಮೂರನೇ ಸ್ಥಾನದೊಂದಿಗೆ 20 ಸಾವಿರ ರೂ ನಗದು, ಟ್ರೋಫಿಗೆ ತನ್ನದಾಗಿಸಿಕೊಂಡಿತು. ಭಾಗವಹಿಸಿದ ಎಲ್ಲ ತಂಡಗಳಿಗೆ ಸಮಾಧಾನಕರ ಬಹುಮಾನವಾಗಿ ಪ್ರಶಸ್ತಿ ಪತ್ರ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ವಿಜೇತರಿಗೆ ಬಹುಮಾನ ವಿತರಿಸಿದರು. ಕೆಇಬಿ ಯೂನಿಯನ್ ಮುಖಂಡ ಜಯ್ಯಣ್ಣ, ವಿಶ್ವಜಿತ್ ಬಿಂದು, ತರಕಾರಿ ಮಾರುಕಟ್ಟೆ ದಲ್ಲಾಲರ ಸಂಘದ
ಅಧ್ಯಕ್ಷ ಎಸ್.ಎಂ.ತಿಪ್ಪೇಸ್ವಾಮಿ, ಹುಚ್ಚವ್ವನಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಮಾಲ್ ಸಾಬ್ ಹಾಗೂ ಮಾರುತಿ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಹಿರೇಕೋಗಲೂರು ಕುಮಾರ್, ಸಿದ್ದಯ್ಯನಕೋಟೆ ಅಂಜಿನಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಹೊನ್ನೂರು ವಸಂತ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment