Home ದಾವಣಗೆರೆ ಸ್ಫೋಟಕ, ದಾಖಲೆಯ ದ್ವಿಶತಕ ಬಾರಿಸಿದ ಬಳಿಕ ಸೂರ್ಯವಂಶಿ ಹೇಳಿದ್ದೇನು? ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ಯಾಕೆ ಎಂಬುದಕ್ಕೆ ಉತ್ತರ ಕೊಟ್ಟ 15ರ ಹರೆಯದ ವೈಭವ್!
ದಾವಣಗೆರೆಕ್ರೀಡೆನವದೆಹಲಿಬೆಂಗಳೂರು

ಸ್ಫೋಟಕ, ದಾಖಲೆಯ ದ್ವಿಶತಕ ಬಾರಿಸಿದ ಬಳಿಕ ಸೂರ್ಯವಂಶಿ ಹೇಳಿದ್ದೇನು? ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ಯಾಕೆ ಎಂಬುದಕ್ಕೆ ಉತ್ತರ ಕೊಟ್ಟ 15ರ ಹರೆಯದ ವೈಭವ್!

Share
ಸೂರ್ಯವಂಶಿ
Share

ದೋಹಾ: “ಮೊದಲ ಎರಡು ಪಂದ್ಯಗಳಲ್ಲಿ ನಾನು ರನ್ ಗಳಿಸಿರಲಿಲ್ಲ. ಪಿಚ್ ಅನ್ನು ಅಂದಾಜು ಮಾಡಿದ ಬಳಿಕ ನನ್ನದೇ ಶೈಲಿಯಲ್ಲಿ ಆಡಲು ನಿರ್ಧರಿಸಿದೆ. ನನ್ನ ಮನೋಭಾವ ಯಾವಾಗಲೂ ಕ್ರೀಸ್‌ನಲ್ಲಿ ಹೆಚ್ಚು ಸಮಯ ಬ್ಯಾಟಿಂಗ್ ಮಾಡುವುದಾಗಿರುತ್ತದೆ” ಎಂದು ದಾಖಲೆ, ಸ್ಫೋಟಕ ದ್ವಿಶತಕ ಬಾರಿಸಿದ ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಯುಎಇ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ದ್ವಿಶತಕ ಬಾರಿಸಿದ್ದು ಖುಷಿ ತಂದಿದೆ. ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಜೊತೆಗೆ ಪಂದ್ಯ ಗೆದ್ದಿರುವುದು ಮತ್ತಷ್ಟು ತುಂಬಾನೇ ಖುಷಿ ಕೊಟ್ಟಿದೆ ಎಂದು ಹೇಳಿದರು.

ಮೊದಲ ಎರಡು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿದ್ದ ಸೂರ್ಯವಂಶಿ, ಈ ಪಂದ್ಯದಲ್ಲಿ ಪಿಚ್‌ನ ಸ್ವಭಾವವನ್ನು ಅರಿತುಕೊಂಡು ಮನಬಂದಂತೆ ಬ್ಯಾಟ್ ಬೀಸಿದರು. ತಮ್ಮ ಈ ಅಸಾಮಾನ್ಯ ಇನ್ನಿಂಗ್ಸ್‌ನಲ್ಲಿ ಒಟ್ಟು 28 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ವೃತ್ತಿಪರ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಬರೆದಿದ್ದಾರೆ. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತಿವೇಗದ ಶತಕದ ದಾಖಲೆಯನ್ನು ಮುರಿದರು, ಹಾಗೂ ಮುಂದಿನ 100 ರನ್‌ಗಳನ್ನು ಕೇವಲ 24 ಎಸೆತಗಳಲ್ಲಿ ಗಳಿಸಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಇತಿಹಾಸ ನಿರ್ಮಿಸಿದರು.

ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನ ಗ್ರೂಪ್ ‘ಬಿ’ ಪಂದ್ಯದಲ್ಲಿ ಕೇವಲ 15 ವರ್ಷ ವಯಸ್ಸಿನ ಯುವ ಆಟಗಾರ ವೈಭವ್ ಸೂರ್ಯವಂಶಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಯುಎಇ ತಂಡವು ನೀಡಿದ್ದ 250 ರನ್‌ಗಳ ಬೃಹತ್ ಗುರಿಯನ್ನು ಭಾರತ ‘ಎ’ ತಂಡವು ಕೇವಲ 14.2 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು. ಈ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಸಿಡಿಸಿ ಅತಿವೇಗದ ದ್ವಿಶತಕದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವೈಭವ್ ಬ್ಯಾಟ್ ನಿಂದಲೇ 204 ರನ್ ಬಂದಿದೆ. ಉಳಿದದ್ದು ಕೇವಲ 46 ರನ್. ಇದು ಅದ್ಭುತ ಪ್ರದರ್ಶನ. ವಿಶ್ವ ದಾಖಲೆಯ ಬ್ಯಾಟಿಂಗ್: ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸಿದ ವೈಭವ್, ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ (28 ಎಸೆತ) ಮತ್ತು ಅತಿವೇಗದ ದ್ವಿಶತಕದ (52 ಎಸೆತ) ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಿಕ್ಸರ್‌ಗಳ ಸುರಿಮಳೆ: ತಮ್ಮ ಅಸಾಮಾನ್ಯ ಇನ್ನಿಂಗ್ಸ್‌ನಲ್ಲಿ ಒಟ್ಟು 28 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಮತ್ತೊಂದೆಡೆ, ಯುಎಇ ಪರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಹರ್‌ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ವೈಭವ್ ಸೂರ್ಯವಂಶಿಯ ಆರ್ಭಟ ಮತ್ತು ದ್ವಿಶತಕದ ಬಿರುಗಾಳಿಯ ಬ್ಯಾಟಿಂಗ್ ಮುಂದೆ ಯುಎಇ ಬೌಲಿಂಗ್ ದಾಳಿ ಸಂಪೂರ್ಣ ಮಂಕಾಯಿತು. ಈ ಗೆಲುವಿನೊಂದಿಗೆ ಭಾರತ ‘ಎ’ ತಂಡವು ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಯನ್ನು ಮತ್ತಷ್ಟು ದೃಢಪಡಿಸಿಕೊಂಡಿದೆ.

Share

Recent Posts

Recent Comments

No comments to show.
Related Articles