ಉತ್ತರ ಪ್ರದೇಶ: ತಾಯಿ ಹಾಗೂ ಮಗನ ನಡುವೆ ಆಸ್ತಿಗಾಗಿ ಜಗಳ ಶುರುವಾಗಿದೆ. ಈ ಕುರಿತು ಕುಟುಂಬಸ್ಥರು ಮಧ್ಯಪ್ರವೇಶಿದರೂ ಮಗ ಆಸ್ತಿಗೆ ಪಟ್ಟು ಹಿಡಿದಿದ್ದಾನೆ. ಇರುವ ಮನೆಯನ್ನು ಮಗನ ಹೆಸರಿಗೆ ಬರೆದರೆ ತನಗೆ ಉಳಿಗಾಲವಿಲ್ಲ ಎಂದು ಅರಿತ್ತ ತಾಯಿ ಆಸ್ತಿ ಮಗನಿಗೆ ನೀಡಲು ನಿರಾಕರಿಸಿದ್ದಳು. ಹೀಗಾಗಿ ಜಗಳ ತಾರಕಕ್ಕೇರಿತ್ತು. ಕುಟುಂಬಸ್ಥರು ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೂರು ನೀಡಲಾಗಿತ್ತು. ತಾಯಿ, ಮಗ ಹಾಗೂ ಕುಟುಂಬಸ್ಥರು ಖೈರ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಕುಟುಂಬಸ್ಥರು ಹಾಗೂ ತಾಯಿ ಮಗ ಪೊಲೀಸ್ ಠಾಣೆಯಲ್ಲಿ ಆಸ್ತಿ ಹಂಚಿಕೆ ವಿಚಾರದ ಮಾತುಕತೆ ಆರಂಭಿಸಿದ್ದಾರೆ. ಕೆಲ ಹೊತ್ತಿನ ಬಳಿಕ ತಾಯಿ ಹಾಗೂ ಮಗ ಪೊಲೀಸ್ ಠಾಣೆಯಿಂದ ಹೊರಬಂದಿದ್ದಾರೆ. ಬಳಿಕ ಠಾಣೆಯ ಬದಿಯಲ್ಲಿ ನಿಂತು ವಾಗ್ವಾದ ಆರಂಭಿಸಿದ್ದಾರೆ.
ಈ ವೇಳೆ ತಾಯಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚವುದಾಗಿ ಬೆದರಿಸಿದ್ದಾಳೆ. ಪೊಲೀಸರಿಗೆ ಹೇಳುವುದಾಗಿ ಮಗನ ಬೆದರಿಸಲು ನೋಡಿದ್ದಾರೆ. ಆದರೆ ಪಿತ್ತ ನೆತ್ತಿಗೇರಿದ್ದ ಮಗ ಬೆಂಕಿಯ ಕಿಡಿ ಹೊತ್ತಿಸಿದ್ದಾನೆ. ಪರಿಣಾಮ ಒಂದೇ ಸಮನೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಧಗಧನೆ ಹೊತ್ತಿ ಉರಿದಿದೆ. ಪೊಲೀಸರು ಓಡೋಡಿ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನಗಳು ಕೆಲ ನಿಮಿಷಗಳ ವರೆಗೆ ನಡೆದಿದೆ. ಠಾಣೆ ಒಳಗಿದ್ದ ಪೊಲೀಸರು ಟೇಬಲ್ ಮೇಲೆ, ಠಾಣೆಯಲ್ಲಿರುವ ಜೈಲಿನೊಳಗೆ ನೀಡವು ಬೆಡ್ ಶೀಟ್ ಹೊತ್ತು ತಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಬಹುತೇಕ ದೇಹದ ಭಾಗ ಸುಟ್ಟು ಹೋಗಿದೆ. ಇತ್ತ ಲೈಟರ್ ಮೂಲಕ ಬೆಂಕಿ ಹಚ್ಚಿದ ಮಗ ಬಳಿಕ ವಿಡಿಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆದಿದ್ದಾನೆ. ತಕ್ಷಣವೇ ಮಹಿಳೆಯನ್ನು ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ. ಶೇಕಡಾ 40 ರಷ್ಟು ಮಹಿಳೆ ದೇಹ ಸುಟ್ಟು ಹೋಗಿದೆ. ಥಮಿಕ ತನಿಕೆಯಲ್ಲಿ ಮಗ ಬೆಂಕಿ ಹಚ್ಚುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.