ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Actor Upendra: ರಿಯಲ್ ಸ್ಟಾರ್ ಉಪೇಂದ್ರಗೆ ರಿಲ್ಯಾಕ್ಸ್: 2 ನೇ ಎಫ್ ಐಆರ್ ಗೂ ತಡೆ ಕೊಡ್ತು ಕೋರ್ಟ್..!

On: August 17, 2023 1:17 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:17-08-2023

ಬೆಂಗಳೂರು: ಆಕ್ಷೇಪಾರ್ಹ ಪದ ಬಳಕೆ ಮಾಡಿ ಸಂಕಷ್ಟದ ಸುಳಿಗೆ ಸಿಲುಕಿರುವ ರಿಯಲ್ ಸ್ಟಾರ್, ನಿರ್ದೇಶಕ, ನಟ ಉಪೇಂದ್ರ (Actor Upendra) ಅವರಿಗೆ ಸದ್ಯಕ್ಕೆ ರಿಲ್ಯಾಕ್ಸ್.

ಜಾತಿ ನಿಂದನೆ ಪದ ಬಳಸಿದ ಆರೋಪದ ಮೇರೆಗೆ ದೂರು ದಾಖಲಾಗಿತ್ತು. ಮೊದಲ ಎಫ್ ಐ ಆರ್ ಗೆ ಕೋರ್ಟ್ ಮಧ್ಯಂತರ ತಡೆ ಕೊಟ್ಟಿತ್ತು. ಈಗ ಎರಡನೇ ಎಫ್ ಐ ಆರ್ ಗೂ ಕೋರ್ಟ್ ತಡೆ ನೀಡಿದ್ದು, ಉಪೇಂದ್ರ (Actor Upendra) ಸ್ವಲ್ಪ ನಿರಾಳರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: 

Intelligence Dog : ಒಸಮಾ ಬಿನ್ ಲಾಡೆನ್ ಸಂಹಾರಕ್ಕೆ ಬಳಸಿದ್ದ ಶ್ವಾನ ದಾವಣಗೆರೆಯಲ್ಲಿ: ಅಪರಾಧಿಗಳಿಗೆ ನಡುಕ ಹುಟ್ಟಿಸಿರೋ ಚಾಣಾಕ್ಷ ಡಾಗ್ ಗೆ ಟ್ರೈನಿಂಗ್ ಹೇಗಿರುತ್ತೆ, ಆಹಾರ ಏನು, ಆಯಸ್ಸು ಎಷ್ಟು..? ಕುತೂಹಲಕಾರಿ ಸ್ಟೋರಿ ಇದು

ಫೇಸ್ ಬುಕ್ ನಲ್ಲಿ ಕಳೆದ ವಾರ ಪ್ರಜಾಕೀಯ ಪಕ್ಷದ ಕುರಿತು ಮಾತನಾಡಲು ಲೈವ್ ಬಂದಿದ್ದ ವೇಳೆ ಸಮುದಾಯವೊಂದರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಇದು ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು.

ಆ ಬಳಿಕ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಕೂಡ ಕಂಪ್ಲೆಂಟ್ ಕೊಟ್ಟಿದ್ದರು. ಈ ದೂರು ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಎಫ್ ಐ ಆರ್ ತಡೆ ಕೋರಿ
ಕೋರ್ಟ್ ನಲ್ಲಿ ನಟ ಉಪೇಂದ್ರ (Actor Upendra) ಪ್ರಶ್ನೆ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಕೋರ್ಟ್ ಈ ಪ್ರಕರಣದಲ್ಲಿಯೂ ತಡೆ ನೀಡಿ ಆದೇಶಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment