ಪಾಕಿಸ್ತಾನಿ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಅಪರಿಚಿತ ಗುಂಪಿನಿಂದ ಟರ್ಬತ್ನಲ್ಲಿ ಬಾಂಬ್ ದಾಳಿ ನಡೆದಿದೆ. ಇದರಿಂದ 48 ಪಾಕ್ ಸೈನಿಕರಿದ್ದ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ನಾಲ್ವರು ಸೈನಿಕರು ಸುಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ಪುಲ್ವಾಮಾದಲ್ಲಿ ನಡೆದಿದ್ದ ಭಾರತೀಯ ಸೈನಿಕರ ಮೇಲಿನ ದಾಳಿಯನ್ನು ಈ ಘಟನೆ ನೆನಪಿಸುವಂತಿದೆ. ಪಾಕಿಸ್ತಾನದಲ್ಲಿ ಈ ರೀತಿಯ ಅಪರಿಚಿತರಿಂದ ದಾಳಿ ನಡೆಯುತ್ತಿರುವ ಘಟನೆಗಳು ಹೆಚ್ಚುತ್ತಲೇ ಇವೆ.
ಪಾಕಿಸ್ತಾನ ಬಲೂಚಿಸ್ತಾನದ ಟರ್ಬತ್ನಲ್ಲಿ ಭೀಕರ ಬಾಂಬ್ ದಾಳಿ ನಡೆದಿದ್ದು, ಪಾಕಿಸ್ತಾನಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಮಿಲಿಟರಿ ವಾಹನದ ಮೇಲೆ ಬಾಂಬ್ ಹಾಕಲಾಗಿದೆ. ಈ ದುರಂತ ನಡೆಯುವ ವೇಳೆ ಆ ವಾಹನದಲ್ಲಿ 48 ಪಾಕಿಸ್ತಾನಿ ಸೈನಿಕರಿದ್ದರು. ಅವರಲ್ಲಿ ನಾಲ್ವರು ಬಾಂಬ್ ದಾಳಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘಟನೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಆಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ. ಟರ್ಬತ್ ಬಳಿಕ ಹೈವೇಯಲ್ಲೇ ಮಿಲಿಟರಿ ಬಸ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಬಸ್ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಟರ್ಬತ್ನಲ್ಲಿ ಬಸ್ ಮೇಲೆ ಬಾಂಬ್ ದಾಳಿ ನಡೆದಿದ್ದು, ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ. ಗಾಯಗೊಂಡವರಲ್ಲಿ ಎಸ್ಎಸ್ಪಿ ಗಂಭೀರ ಅಪರಾಧ ವಿಭಾಗದ ಜೊಹೈಬ್ ಮೊಹ್ಸಿನ್ ಮತ್ತು ಅವರ ಕುಟುಂಬದ 6 ಸದಸ್ಯರು ಬಾಂಬ್ ಸ್ಫೋಟದ ಸಮಯದಲ್ಲಿ ಆ ಮಾರ್ಗದಲ್ಲಿ ಹಾದುಹೋಗುತ್ತಿದ್ದರು.
ಈ ಬಾಂಬ್ ದಾಳಿಯ ಹಿಂದೆ ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಲೂಚಿಸ್ತಾನದ ಮುಖ್ಯಮಂತ್ರಿ ಮಿರ್ ಸರ್ಫ್ರಾಜ್ ಬುಗ್ತಿ ಅವರು ಈ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. ಅಮೂಲ್ಯ ಜೀವಗಳ ನಷ್ಟದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಮುಗ್ಧ ವ್ಯಕ್ತಿಗಳನ್ನು ಗುರಿಯಾಗಿಸಿ ಕೊಲ್ಲುವವರು ಮನುಷ್ಯರೆಂದು ಹೇಳಿಕೊಳ್ಳಲು ಅನರ್ಹರು ಎಂದು ಬುಗ್ತಿ ಟೀಕಿಸಿದ್ದಾರೆ.