SUDDIKSHANA KANNADA NEWS/ DAVANAGERE/ DATE:09-08-2023
ದಾವಣಗೆರೆ (Davanagere): ಡೋರ್ ನಂಬರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಡಿರುವ ಆರೋಪ ಸುಳ್ಳು ಎಂಬುದು ಸಾಬೀತುಪಡಿಸಿದರೆ ನೈತಿಕ ಹೊಣೆ ಹೊತ್ತು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಅಕ್ರಮವಾಗಿರುವುದು ನಿಜ. ಹಾಗಾಗಿ, ಈ ಮಾತು ಹೇಳಿದ್ದೆ. ನನ್ನ ಆರೋಪ ಸುಳ್ಳು ಎಂಬುದಾಗಿ ಸಾಬೀತುಪಡಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಉಮಾ ಪ್ರಕಾಶ್ ಅವರು ಕಾಂಗ್ರೆಸ್ ಸದಸ್ಯ ಗಡಿಗುಡಾಳ್ ಮಂಜುನಾಥ್ ಗೆ ತಿರುಗೇಟು ಕೊಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ:

Transfer: ವರ್ಗಾವಣೆ ಹೆಸರಲ್ಲಿ ಸಾವಿರಾರು ಕೋಟಿ ರೂ. ದಂಧೆ, ದಾಖಲೆ ಸಂಗ್ರಹಿಸಿ ಬಯಲಿಗೆಳೆಯುತ್ತೇವೆ: ವೀರೇಶ್ ಹನಗವಾಡಿ ಸ್ಫೋಟಕ ಹೇಳಿಕೆ
ನನ್ನ ಹೇಳಿಕೆ ಸುಳ್ಳು ಎಂದು ನೀವು ಹೇಳಿಲ್ಲ. ತಪ್ಪಿತಸ್ಥರ ಮೇಲೆ ಇನ್ನೂ ಕ್ರಮ ಏಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸದೇ ನನ್ನನ್ನು ಪ್ರಶ್ನಿಸುವುದು, ಪಕ್ಷೇತರಳಾಗಿ ಗೆದ್ದು ಬಿಜೆಪಿ ಬೆಂಬಲಿಸಿರುವ ಕುರಿತು ಪ್ರಶ್ನಿಸಿರುವುದೂ ಹಾಸ್ಯಾಸ್ಪದ.
ವಾರ್ಡ್ ಅಭಿವೃದ್ಧಿ ಮತ್ತು ಜನರ ಹಿತ ದೃಷ್ಟಿಯಿಂದ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದು ನನ್ನ ಮತ್ತು ವಾರ್ಡ್ ಜನರ ಇಚ್ಛೆ, ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.
ವಿಷಯಾಂತರ ಮಾಡಿ ನನ್ನ ಪತಿ ಎ. ವೈ. ಪ್ರಕಾಶ್ ಅವರ ವಿಷಯ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಪಾಲಿಕೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸಬೇಕೆಂಬ ನಿಮ್ಮ ಹೇಳಿಕೆಯನ್ನು ನಾನು ಸ್ವಾಗತಿಸಿದ್ದು ತಪ್ಪಾ ಎಂದು ಉಮಾ ಪ್ರಕಾಶ್ ಪ್ರಶ್ನಿಸಿದ್ದಾರೆ.