ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಉಡುಪಿ: ಟೂರಿಸ್ಟ್ ಕಾರಿನ ಡಿಕ್ಕಿಯಲ್ಲಿ ಹೆಣ- ಕಾರು ಅಡ್ಡಗಟ್ಟಿ ತರಾಟೆ

On: May 11, 2024 5:59 PM
Follow Us:
---Advertisement---

ಉಡುಪಿ: ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

ಸ್ವಿಫ್ಟ್ ಡಿಝರ್ ಕಾರಿನ ಡಿಕ್ಕಿಯಲ್ಲಿ ಮೃತದೇಹ ಸಾಗಿಸಲಾಗುತ್ತಿದ್ದು, ಶಿರೂರು ಟೋಲ್ ಗೇಟ್ ಬಳಿ ಪತ್ತೆಯಾಗಿದೆ. ಮೊದಲು ಇದನ್ನು ಗಮನಿಸಿದ ಆಂಬುಲೆನ್ಸ್‌ ಡ್ರೈವರ್ ಒಬ್ಬರು ಈ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಮೃತದೇಹ ಕೊಂಡೊಯ್ಯುತ್ತಿದ್ದ ಚಾಲಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿಚಾರಿಸಿದ್ದಕ್ಕೆ ಕಾರ್‌ನಲ್ಲಿದ್ದ ಮೃತದೇಹದ ವಾರಸುದಾರರು, ಆಂಬ್ಯುಲೆನ್ಸ್‌ನಲ್ಲಿ ಜಾಸ್ತಿ ಹಣ ಕೇಳಿದ್ದಕ್ಕಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಮೃತದೇಹವನ್ನು ಉಡುಪಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Join WhatsApp

Join Now

Join Telegram

Join Now

Leave a Comment