ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನದಿಯಲ್ಲಿ ಸ್ನಾನಕ್ಕಿಳಿದ ಸಹೋದರರಿಬ್ಬರ ದುರ್ಮರಣ: ಮೃತದೇಹ ಪತ್ತೆ, ಕುಟುಂಬಸ್ಥರ ಆಕ್ರಂದನ

On: March 25, 2024 9:47 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:25-03-2024

ದಾವಣಗೆರೆ: ತುಂಗಾಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಹೋದರರಿಬ್ಬರು ಮೃತಪಟ್ಟಿರುವ ದುರ್ಘಟನೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುತ್ತೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹರಿಹರ ತಾಲೂಕಿನ ನದಿಹರಳಹಳ್ಲಿಯ ಬಸವರಾಜ್ (12) ನಾಗರಾಜ್ (10) ಎಂದು ಗುರುತಿಸಲಾಗಿದೆ. ಮಂಜಪ್ಪ ಹಾಗೂ ರೇಖಾ ಎಂಬ ದಂಪತಿಯ ಪುತ್ರರಾದ ಬಸವರಾಜ್ ಆರನೇ ತರಗತಿ
ಓದುತ್ತಿದ್ದರೆ, ಆತನ ಸಹೋದರ ನಾಗರಾಜ್ ಮೂರನೇ ತರಗತಿ ಓದುತ್ತಿದ್ದ.

ಭಾನುವಾರವಾದ್ದರಿಂದ ತುಂಗಾಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಆದ್ರೆ, ಇಬ್ಬರು ನೀರುಪಾಲಾಗಿದ್ದರು. ಪೋಷಕರು ಮನೆಗೆ ಬಾರದೇ ಇದ್ದದ್ದನ್ನು ಗಮನಿಸಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೂ ಪತ್ತೆಯಾಗಿರಲಿಲ್ಲ. ಸಂಬಂಧಿಕರು, ಬಾಲಕರ ಸ್ನೇಹಿತರು ಹಾಗೂ ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಆದ್ರೂ, ಪತ್ತೆಯಾಗಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಪೋಷಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

ಆದ್ರೆ, ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮಾಹಿತಿ ಸಿಕ್ಕಿತ್ತು. ನದಿಯಲ್ಲಿ ಹುಡಾಕಟ ನಡೆಸಿದಾಗ ಭಾನುವಾರ ರಾತ್ರಿ 10. 30ರ ಸುಮಾರಿನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಕುಟುಂಬಸ್ಥರ ಆಕ್ರಂದನ ಮುಗಿಲು
ಮುಟ್ಟಿತ್ತು.

ಪೋಷಕರ ಆಕ್ರೋಶ:

ಈ ಭಾಗದಲ್ಲಿ ಹೆಚ್ಚಾಗಿ ಮರಳುಗಾರಿಕೆ ನಡೆಯುತ್ತಿದ್ದು, ಅಲ್ಲಲ್ಲಿ ಗುಂಡಿ ತೆಗೆದು ಹೋಗಿದ್ದಾರೆ. ತುಂಗಾಭದ್ರಾ ನದಿಯಲ್ಲಿ ಮರಳುಗಾರಿಕೆ ಹೆಚ್ಚಾಗಿರುವುದರಿಂದ ಮಕ್ಕಳು ನೀರಿನಲ್ಲಿ ಆಟವಾಡಲು ಹೋಗಿದ್ದಾರೆ. ಗುಂಡಿಯಲ್ಲಿ ಸಿಲುಕಿ ಮೃತಪಟ್ಟಿದ್ದು, ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment