SUDDIKSHANA KANNADA NEWS/ DAVANAGERE/ DATE:16_07_2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಮಾದಕ ದ್ರವ್ಯ ನಿಗ್ರಹ ಪಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಗಾಂಜಾ, ಗಾಂಜಾ ಮಿಶ್ರಿತ ಚಾಕಲೇಟ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದೆ.
ಈ ಸುದ್ದಿಯನ್ನೂ ಓದಿ: ಜುಲೈ 17ರ ನಾಳೆ ದಾವಣಗೆರೆಯ ಬಹುತೇಕ ಕಡೆ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ ಬಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ನಿಗ್ರಹ ಮಾಡುವ ಉದ್ದೇಶದಿಂದ
ಪಿ ಎಸ್ ಐ ಸಾಗರ ಅತ್ತರವಾಲ್ ಹಾಗೂ ಸಿಬ್ಬಂದಿರವರನ್ನು ಒಳಗೊಂಡ ವಿಶೇಷ ತಂಡ ರಚಿಸಿದ್ದರು.
ಈ ತಂಡವು ಬಡಾವಣೆ ಪೊಲೀಸ್ ಠಾಣಾ ಸರಹದ್ದಿನ ರಾಂ ಅಂಡ್ ಕೋ ಸರ್ಕಲ್ ಬಳಿ ಇರುವ ರಾಜು ಪಾನ್ ಶಾಪ್ ರವರ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ
ಮಾದಕ ದ್ರವ್ಯ ನಿಗ್ರಹ ಪಡೆ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾಳವ್ವ ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಲಾಯಿತು.
ರಾಂ @ ಕೋ ಸರ್ಕಲ್ ನಲ್ಲಿರುವ ರಾಜು ಪಾನ್ ಶಾಪ್ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿ ಪರೀಶೀಲನೆ ಮಾಡಲಾಯಿತು. ಈ ವೇಳೆ ರಾಜು ಪಾನ್ ಶಾಪ್ ನವರ ಮನೆಯಲ್ಲಿ ಒಟ್ಟು 1115 ಗ್ರಾಂ ತೂಕದ ಗಾಂಜಾ ಹಾಗು ಮೋಲ್ ಅಂತ ಹಿಂದಿ ಭಾಷೆಯಲ್ಲಿ ಇರುವ ಗಾಂಜಾ ಮಿಶ್ರಿತ 160 ಚಾಕಲೇಟ್‌ಗಳು ಸಿಕ್ಕಿದ್ದು, ನಂತರ ಪಂಚರ ಸಮಕ್ಷಮ ಗಾಂಜಾವನ್ನು ಹಾಗೂ ಗಾಂಜಾ ಮಿಶ್ರಿತ ಚಾಕಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ಯಾರೆಲಾಲ್ ಅಲಿಯಾಸ್ ರಾಜು, ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ಬಡಾವಣೆ ಠಾಣೆ ಗನ್ನೆ ನಂ:146/2025 ಕಲಂ NDPS ACT, 1985 (U/s-8(c),20(ii)(B),25) ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿತರಾದ ಪ್ಯಾರೆಲಾಲ್ ಅಲಿಯಾಸ್ ರಾಜು (38) ಬೀಡಾ ವ್ಯಾಪಾರಿ. ರಾಂ ಅಂಡ್ ಕೋ ಸರ್ಕಲ್ ನ ಮುದೇಗೌಡ್ರು ಕಾಂಪ್ಲೆಕ್ಸ್ ನಲ್ಲಿ ವಾಸವಿದ್ದ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ ಗಾಂಜಾವನ್ನು ಹಾಗು ಗಾಂಜಾ ಮಿಶ್ರಿತ ಚಾಕಲೇಟ್ ಗಳನ್ನು ಬೇರೆ ಎಲ್ಲಿಯೋ ಖರೀದಿ ಮಾಡಿಕೊಂಡು ಬಂದು ದಾವಣಗೆರೆ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತೀರುತ್ತೇವೆ ಅಂತ ಹೇಳಿಕೆ ನೀಡಿದ್ದಾರೆ.
ಆರೋಪಿತನಾದ ಪ್ಯಾರೆಲಾಲ್ @ ರಾಜು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾನೂನು ಸಂಘರ್ಷದ ಬಾಲಕನನ್ನು ಬಾಲ ನ್ಯಾಯಮಂಡಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.