SUDDIKSHANA KANNADA NEWS/DAVANAGERE/DATE:27_10_2025
ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪವಿಭಾಗದ ವ್ಯಾಪ್ತಿಯ ಹರಿಹರ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ, ಇಬ್ಬರು ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಸುಮಾರು 16,52,000 ರೂ ಮೌಲ್ಯದ ವಿವಿಧ ಕಂಪನಿಗಳ 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
READ ALSO THIS STORY: ಜೊತೆಗಿದ್ದ ಸಂಗಾತಿ ಕಥೆ ಮುಗಿಸಲು “ಸುಂದರಿ” ಹೆಣೆದ ಸಂಚು ಕೇಳಿದ್ರೆ ಬೆಚ್ಚಿಬೀಳ್ತೀರಾ: ಆರೋಪಿಗಳ ಹೆಡೆಮುರಿಕಟ್ಟಿದ್ದೇ ರೋಚಕ!
ಪ್ರಕರಣ ದಾಖಲು:
ಹರಿಹರೇಶ್ವರ ಲೇಔಟ್, ಶಾಬಾಜ್ ಇಂದಿರಾ ನಗರ, ವಿದ್ಯಾನಗರದಲ್ಲಿ ಬೈಕ್ ಕಳ್ಳತನವಾಗಿದ್ದ ಕುರಿತಂತೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪತ್ತೆ ಕಾರ್ಯ ತಂಡ ರಚನೆ:
ಬೈಕ್ ಕಳ್ಳತನ ಪ್ರಕರಣಗಳಲ್ಲಿನ ಸ್ವತ್ತು ಹಾಗೂ ಆರೋಪಿತರನ್ನು ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಮತ್ತು ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪೊಲೀಸ್ ನಿರೀಕ್ಷಕಆರ್.ಎಫ್.ದೇಸಾಯಿ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಆರೋಪಿತರ ಪತ್ತೆ, ಸ್ವತ್ತು ವಶ:
ಬೈಕ್ ಕಳ್ಳತನದಲ್ಲಿನ ಆರೋಪಿತರ ಪತ್ತೆಗಾಗಿ ಕಾರ್ಯಚರಣೆ ಕೈಗೊಂಡ ಪತ್ತೆ ಕಾರ್ಯ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತಾಂತ್ರಿಕ ಹಾಗೂ ಬೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೈಕ್ ಕಳ್ಳರ ಜಾಡು ಪತ್ತೆ ಹಚ್ಚಿದ್ದಾರೆ.
ಹರಿಹರ ನಗರದ ಹರಪನಹಳ್ಳಿ ರಸ್ತೆಯಲ್ಲಿ ಆರೋಪಿತರಾದ ಚಿಕ್ಕಮಗಳೂರು ಜಿಲ್ಲೆಯ ದೊಡ್ಡಲಿಂಗೇನಹಳ್ಳಿ ಗ್ರಾಮದ ಪ್ರತಾಪ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕದ್ದಿಕೆರೆ ಗ್ರಾಮದ ಬೋಜರಾಜ್ ಕಳ್ಳತನ ಮಾಡಿದ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ.
ಬಂಧಿತರಿಂದ ಒಟ್ಟು 16,52,000 ರೂಪಾಯಿ ಬೆಲೆಯ ವಿವಿಧ ಕಂಪನಿಯ ಒಟ್ಟು 30 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿ ಸಿಬ್ಬಂದಿಯವರನ್ನು ಎಸ್ಪಿ ಹಾಗೂ ಎಎಸ್ಪಿ ಅವರು ಅಭಿನಂದಿಸಿದ್ದಾರೆ.
ಆರೋಪಿಗಳ ಹಿನ್ನೆಲೆ:
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಆರೋಪಿಗಳು ಬಂಧಿತರಾಗಿದ್ದರು.
ಪತ್ತೆ ಕಾರ್ಯ ತಂಡಕ್ಕೆ ಶ್ಲಾಘನೆ:
ಪತ್ತೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಡಿವೈಎಸ್ಪಿ ಬಿ.ಎಸ್. ಬಸವರಾಜ್, ಹರಿಹರ ನಗರ ಠಾಣೆ ಪೊಲೀಸ್ ನಿರೀಕ್ಷಕ ಆರ್.ಎಫ್.ದೇಸಾಯಿ, ಪಿ.ಎಸ್.ಐ ಶ್ರೀಪತಿ ಗಿನ್ನಿ, ಎ.ಎಸ್.ಐ ಮಹಮ್ಮದ್ ಜಬೀವುಲ್ಲಾ, ನಾಗರಾಜ ಸುಣಗಾರ, ದಿಲೀಪ್.ಕೆ.ಸಿ, ಶಾಂತರಾಜ್ ಎಂ. ಎಸ್, ಸಿದ್ದೇಶ.ಹೆಚ್, ಮಂಜುನಾಥ ಕ್ಯಾತಮ್ಮನವರ್, ದೇವರಾಜ್ ಸೂರ್ವೆ, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರವಿ.ಆರ್, ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ, ಸಿದ್ಧಾರ್ಥ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.







